ಹಂದಿ ಕದಿಯಲು ಬಂದ ಕಳ್ಳರು ಮೂವರ ಕಗ್ಗೊಲೆ
1 min readಚಳ್ಳಕೆರೆ : ಹಂದಿ ಕದಿಯಲು ಬಂದ ಕಳ್ಳರು ಮೂವರ ಕಗ್ಗೊಲೆ ಮಾಡಿರುವ ಘಟನೆ ನಡೆದಿದೆ.ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಸಮುದಾಯದ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಸುಮಾರು ವರ್ಚಗಳಿಂದ ಶೆಡ್ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದ ಇವರು ಹಂದಿ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದರು.
ತಡರಾತ್ರಿ ವಾಹನದಲ್ಲಿ ಬಂದ ಕಳ್ಳರ ಗುಂಪು ಏಕಾಏಕಿ ದಾಳಿ ಮಾಡಿ ಮೂವರನ್ನು ಕೊಲೆಗೈದಿದೆ. ಖಾರದ ಪುಡಿ ಎರಚಿ ಮೂವರು ವ್ಯಕ್ತಿಗಳ ಮೇಲೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸೀನಪ್ಪ(45),ಎಂಬ ವ್ಯಕ್ತಿಯ ತಲೆಯನ್ನು ಕತ್ತರಿಸಲಾಗಿದೆ, ಯಲ್ಲೇಶ(25) ಮತ್ತು ಮಾರೇಶ(28) ಎಂಬ ಯುವಕರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಭರ ಹತ್ಯೆ ಕೊಲೆ ಪರಾರಿಯಾಗಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕ ಎಸಿಪಿ.ಮಹಲಿಂಗ ನಂದಗಾವಿ ಡಿವೈಎಸ್ ಪಿ ಶ್ರೀಧರ್, ವೃತ್ತನಿರೀಕ್ಷಕ ಈ.ಆನಂದ ಭೇಟಿನೀಡಿದ್ದರು.