May 8, 2024

Chitradurga hoysala

Kannada news portal

ಬೆಣ್ಣೆ ನಗರಿಯಲ್ಲಿ ಕೋವಿಡ್ ನಿರಂತರ ದಾಳಿ ಐದು ಸಾವಿರ ಗಡಿ ದಾಟಿದ ಕೋವಿಡ್ ಸೊಂಕಿತರು, ಐದು ಬಲಿ

1 min read

ದಾವಣಗೆರೆ: ಹೌದು ದಾವಣಗೆರೆ ಕಳೆದ ತಿಂಗಳುಗಳ ಹಿಂದೆ ಭಾರಿ ಕೋವಿಡ್ ಪ್ರಕಾರ ಣಗಳಿಂದ ಸದ್ದು ಮಾಡಿತ್ತು. ಆದರೆ ಸ್ವಲ್ಪ ದಿನಗಳು ಅಷ್ಟೇನು ಪ್ರಕರಣ ಕಂಡು ಬಂದಿರಲಿಲ್ಲ .ಆದರೆ ಕಳೆದ 4-5 ದಿನಗಳಿಂದ ಮತ್ತೆ ಕೋವಿಡ್ ರೌದ್ರ ನರ್ತನ ಶುರು ಮಾಡಿದೆ, ಜಿಲ್ಲೆಯಲ್ಲಿ ಕರೋನಾ ಮತ್ತೆ ಸ್ಪೋಟಗೊಂಡಿದ್ದು, 327 ಜನರಿಗೆ ವಕ್ಕರಿಸಿರುವುದಷ್ಟೇ ಅಲ್ಲದೇ ಐವರನ್ನು ಬಲಿಪಡೆದಿದೆ.

ಶನಿವಾರ 327 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 5 ಜನರು ಸಾವನ್ನಪ್ಪಿದ್ದಾರೆ. 267 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ನಿಟುವಳ್ಳಿ, ಕೆಟಿಜೆ ನಗರ, ವಿನೋಬನಗರ, ಹರಿಹರ ತಾಲ್ಲೂಕಿನ ಹರ್ಲಾಪುರ, ಹಾವೇರಿ ಜಿಲ್ಲೆ ರಟ್ಟಿಹಳ್ಳಿಯ ಅರವತ್ತು ವರ್ಷ ಮೇಲ್ಪಟ್ಟ ಮೂವರು, ಎಪ್ಪತ್ತು ವರ್ಷ ಮೇಲ್ಪಟ್ಟ ಇಬ್ಬರು ಸೇರಿ ಐವರು ಪುರುಷರು ಸಾವನ್ನಪ್ಪಿದ್ದಾರೆ.

ವಿಜಯನಗರ, ಎಂಸಿಸಿ ಎ ಮತ್ತು ಬಿ ಬ್ಲಾಕ್, ಪಿಜೆ ಬಡಾವಣೆ, ವಿವೇಕಾನಂದ ಬಡಾವಣೆ, ಶಾಮನೂರು, ಶ್ರೀನಿವಾಸ ನಗರ, ನಿಟುವಳ್ಳಿ, ಕಾರಿಗನೂರು,ವಿನೋಬನಗರ, ಆಲೂರು, ಹೊನ್ನಾಳಿಯ ಪೊಲೀಸ್ ಕ್ವಾಟ್ರಸ್, ಜೆಹೆಚ್ ಪಟೇಲ್ ಬಡಾವಣೆ, ಆಂಜನೇಯ ಬಡಾವಣೆ, ಆಲೂರುಹಟ್ಟಿ, ಜಯನಗರ, ಸಂತೆಬೆನ್ನೂರು ಸೇರಿ ವಿವಿಧೆಡೆ ಸೋಂಕಿತ ಪ್ರಕರಣಗಳು ಖಚಿತಗೊಂಡಿವೆ.

ದಾವಣಗೆರೆ 182, ಹರಿಹರ 73, ಚನ್ನಗಿರಿ 26, ಜಗಳೂರು 07, ಹೊನ್ನಾಳಿ 26, ಅನ್ಯ ಜಿಲ್ಲೆಯ 13 ಸೇರಿ 327 ಸೋಂಕಿತ ಪ್ರಕರಣಗಳು ಕಂಡುಬಂದಿವೆ.

ಈವರೆಗೂ 5070 ಸೋಂಕಿತ ಪ್ರಕರಣಗಳು‌ ಪತ್ತೆಯಾಗಿದ್ದು, 126 ಜನರು ಸಾವು ಕಂಡಿದ್ದಾರೆ. 3421 ಜನರು ಗುಣಮುಖರಾಗಿದ್ದಾರೆ. ಸಕ್ರಿಯ 1523 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ

About The Author

Leave a Reply

Your email address will not be published. Required fields are marked *