ಜಿಲ್ಲಾ ಕೇಂದ್ರದ ವಿಕಲಚೇತನರಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
1 min readಚಿತ್ರದುರ್ಗ: ಜಿಲ್ಲಾ ಕೇಂದ್ರದ ವಿಕಲಚೇತನರಿಗೆ ಸರ್ಕಾರ ಹೆಚ್ಚಿನ ಸೌಲಭ್ಯ ಒದಗಿಸಬೇಕು, ಗ್ರಾಮೀಣ ಭಾಗದಿಂದ ಹೆಚ್ಚು ಜನ ಜಿಲ್ಲಾ ಕೇಂದ್ರಕ್ಕೆ ಜೀವನಸಾಗಿಸಲು ಆಗಮಿಸುತ್ತಾರೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಬಾಲಭವನ ಆವರಣದಲ್ಲಿ
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2019-20ನೇ ಸಾಲಿಗೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾದ 16 ದೈಹಿಕ ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರ (ರೆಟ್ರೋಫಿಟ್‍ಮೆಂಟ್ ಸಹಿತ) ವಾಹನಗಳನ್ನು ವಿತರಿಸಿ ಮಾತನಾಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದಲ್ಲಿ ಜಿಲ್ಲಾ ಕೇಂದ್ರಕ್ಕೆ ಹೆಚ್ಚು ವಿಕಚೇತನರಿಗೆ ವಾಹನ ನೀಡಿದರೆ ಅನುಕೂಲವಾಗುತ್ತದೆ.ಅಮೀತ್ ಮತ್ತು ಚಂದು ಎಂಬ 100% ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್ ನೀಡಿದ್ದೇವೆ. ಜಿಲ್ಲಾ ಕೇಂದ್ರಕ್ಕೆ ಹೆಚ್ಚು ಜನ ಜೀವನ ನಡೆಸಲು ಬರುತ್ತಾರೆ. ಅದಕ್ಕಾಗಿ ಹೆಚ್ಚಿನ ವಾಹನ ನೀಡಿದರೆ ಒಳ್ಳೆಯದು. ಮುಂದಿನ ದಿನಗಳಲ್ಲಿ ಡಿಎಂಎಫ್ ಹಣದಲ್ಲಿ ನನ್ನ ಕ್ಷೇತ್ರಕ್ಕೆ 75 ಲಕ್ಷ ರೂ ವಿಕಲಚೇತನರ ಯಂತ್ರ ಚಾಲಿತ ದ್ವಿಚಕ್ರ ವಾಹನ ಖರೀದಿಗೆ ನೀಡಲಾಗಿದ್ದು 80 ವಾಹನ ನೀಡಲಾಗುತ್ತದೆ. ಅಷ್ಟು ವಾಹನ ನೀಡಿದರೆ ಭವಿಷ್ಯ 90% ವಿಕಲಚೇನರಿಗೆ ವಾಹನ ಸಿಕ್ಕಂತಗುತ್ತದೆ. ನಗರಸಭೆಯ ಆಚಾತುರ್ಯದಿಂದ ನಗರಸಭೆ ವಾಹನ ಬಳಕೆ ಆಗದೆ ಉಳಿದಿದೆ ಅದನ್ನು ಕೊಡಿಸುವ ಕೆಲಸ ಮಾಡುತ್ತೇನೆ. ಸರ್ಕಾರ ಅಂಗವಿಕಲರಿಗೆ ವಾಹನ ನೀಡುತ್ತಿರುವುದು ಉತ್ತಮವಾದ ಕಾರ್ಯ ಅದನ್ನು ಉತ್ತಮ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಆಧಾರ ಯೋಜನೆಯಲ್ಲಿ ಸಹ ಇನ್ನು ಹೆಚ್ಚು ಜನರಿಗೆ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ತಿಳಿಸಿದ್ದೇನೆ.
ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಜೆ.ವೈಶಾಲಿ, ಮಕ್ಕಳ ರಕ್ಷಣಾಧಿಕಾರಿ ವೆಂಕಟಲಕ್ಷ್ಮಿ, ಪಿಒ ಭಾರತಿ ಇದ್ದರು.