May 5, 2024

Chitradurga hoysala

Kannada news portal

ಸೊಳ್ಳೆಗಳ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ-ಡಾ.ಫಾಲಾಕ್ಷ

1 min read

ಚಿತ್ರದುರ್ಗ, ಆ.21: ಮನೆ ಮತ್ತು ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ತಿಳಿಸಿದರು.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಸೊಳ್ಳೆಗಳ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೊಳ್ಳೆಗಳ ನಿಯಂತ್ರಣ ಎಲ್ಲರ ಜವಾಬ್ದಾರಿ “ಶೂನ್ಯ ಮಲೇರಿಯಾ ನನ್ನಿಂದಲೇ ಪ್ರಾರಂಭ” ಎಂಬುದು ಈ ಬಾರಿಯ ಘೋಷಣೆಯಾಗಿದ್ದು, 2025ಕ್ಕೆ ಮಲೇರಿಯಾ ರೋಗ ನಿವಾರಣೆ ಗುರಿ ರಾಜ್ಯ ಸರ್ಕಾರ ಹೊಂದಿದೆ ಎಂದು ಹೇಳಿದರು. ವಿಶ್ವ ಸೊಳ್ಳೆ ದಿನವನ್ನು ಸರ್ ರೊನಾಲ್ಡ್ ರಾಸ್ ಎಂಬ ವಿಜ್ಞಾನಿಯು ಅನಾಪೇಲಿಸ್ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗವು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆಂದು ಸಂಶೋಧನೆ ನಡೆಸಿ, ಆಗಸ್ಟ್-20 1897ರಲ್ಲಿ ಕಂಡು ಹಿಡಿದ ಸವಿನೆನಪಿಗಾಗಿ ವಿಶ್ವ ಸೊಳ್ಳೆಗಳ ದಿನಾಚರಣೆ ಆಚರಿಸಲಾಗುತ್ತದೆ ಎಂದು ತಿಳಿಸಿದರು. ಮಲೇರಿಯಾವನ್ನು ಅನಾಫೀಲಿಸ್ ಸೊಳ್ಳೆ, ಮೆದಳು ಜ್ವರ ಮತ್ತು ಆನೆಕಾಲು ರೋಗವನ್ನು ಕ್ಯೂಲೆಕ್ಸ್ ಸೊಳ್ಳೆ, ಮತ್ತು ಡೆಂಗ್ಯೂ, ಚಿಕುಂಗುನ್ಯಾ ಮತ್ತು ಜೀಕಾ ರೋಗವನ್ನು ಈಡಿಸ್ ಈಜಿಪ್ತೈ ಎಂಬ ಪ್ರಭೇದದ ಸೊಳ್ಳೆಗಳು ರೋಗಗಳನ್ನು ಹರಡುತ್ತಿವೆ ಎಂದು ಹೇಳಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಿ.ಜಯಮ್ಮ ಮಾತನಾಡಿ, ಸೊಳ್ಳೆಗಳು ಮಿಲಿಯಾಂತರ ವರ್ಷದಿಂದ ನಿಸರ್ಗದಲ್ಲಿ ಜೀವಿಸುತ್ತವೆ. ಸೊಳ್ಳೆಗಳಿಂದ ಮಿಲಿಯನ್‍ಗಿಂತಲೂ ಹೆಚ್ಚು ಜನರು ಭಾದಿತರಾಗುತ್ತಿದ್ದಾರೆ. ಈ ಸೊಳ್ಳೆಗಳು ನೀರಿನಲ್ಲಿ  ಮತ್ತು ಗಾಳಿಯಲ್ಲಿ ಜೀವಿಸುತ್ತವೆ. ಸೊಳ್ಳೆಗಳು ಮೊಟ್ಟೆಯಿಂದ ಲಾರ್ವಾ, ನಂತರ ಪ್ಯೂಪಾ ತದನಂತರ ಸೊಳ್ಳೆಯಾಗುತ್ತದೆ. ಈ ಸೊಳ್ಳೆಗಳು ಗಂಡು ಸೊಳ್ಳೆಯೊಂದಿಗೆ ಸಂಪರ್ಕ ಹೊಂದಿದ ನಂತರ ಹೆಣ್ಣು ಸೊಳ್ಳೆ ಮೊಟ್ಟೆ ಅಭಿವೃದ್ಧಿ ಮಾಡಲು ಪ್ರೋಟಿನ್ ಅವಶ್ಯಕತೆ ಇರುವುದರಿಂದ ಪ್ರಾಣಿ ಮತ್ತು ಮನುಷ್ಯನ ರಕ್ತವನ್ನು ಹೀರುತ್ತದೆ. ಗಂಡು ಸೊಳ್ಳೆಯು ಕೇವಲ ಗಿಡಗಳ ರಸವನ್ನು ಹೀರಿ ಬದುಕುತ್ತದೆ ಎಂದು ಹೇಳಿದರು.ಜಿಲ್ಲೆಯಲ್ಲಿ 2020 ರ ಆಗಸ್ಟ್ 20 ರ ವರೆಗೆ 1,82,640 ರಕ್ತಲೇಪನ ಸಂಗ್ರಹ ಮಾಡಿ ರಕ್ತಲೇಪನ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 2 ಮಲೇರಿಯಾ ಪ್ರಕರಣಗಳು, 130 ಡೆಂಗ್ಯೂ ಹಾಗೂ 57 ಚಿಕುಂಗುನ್ಯಾ ಪ್ರಕರಣಗಳು ವರದಿಯಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಕೀಟಶಾಸ್ತ್ರ ತಜ್ಞೆ ನಂದಿನಿಕಡಿ ಮಾತನಾಡಿ, ಸರ್ ರೊನಾಲ್ಡ್ ರಾಸ್ ಎಂಬ ವಿಜ್ಞಾನಿಯ ಜೀವನ ಚರಿತ್ರೆ ಹಾಗೂ ಸಂಶೋಧನೆಯ ಬಗ್ಗೆ ವಿವರವಾಗಿ ತಿಳಿಸಿ ಅವರಿಗೆ ನೋಬಲ್ ಪಾರಿತೋಷಕವನ್ನು ಈ ಸಂಶೋಧನೆಯಿಂದ ಪಡೆಯಲಾಗಿದೆ ಎಂದು ತಿಳಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ ಅವರು, ಡೆಂಗ್ಯೂ, ಕೀಟಜನ್ಯ ರೋಗಗಳ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಆಬುಸಾಲೇಹ, ಎಂ.ಬಿ. ಹನುಮಂತಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ, ಎಂಡಮಾಲಿಸ್ಟ್ ಸಿದ್ದಪ್ಪ ಜೋನಾಲ್, ಹಿರಿಯ ಆರೋಗ್ಯ ಸಹಾಯಕ ಎಂ.ರುದ್ರಮ

About The Author

Leave a Reply

Your email address will not be published. Required fields are marked *