33 ಜನ ದಲಿತ ಮತ್ತು ಹಿಂದುಳಿದ ವರ್ಗದ ಸ್ವಾಮೀಜಿಗಳು ಸೇರಿ ಕಾಲೇಜು ಹೋರಟಕ್ಕೆ ಬೆಂಬಲಿಸಿದ ಎಲ್ಲಾರಿಗೂ ಧನ್ಯವಾದಗಳು: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ
1 min readಚಿತ್ರದುರ್ಗ: ತುರುವನೂರು ಕಾಲೇಜನ್ನು ಘಟಕ ಕಾಲೇಜು ಆಗಿ ಪರಿವರ್ತನೆಯಾಗಿ ಮಾಡಿ ಸರ್ಕಾರ ಘೋಷಣೆ ಬಾಕಿ ಅಷ್ಟೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ತುರುವನೂರು ಪ್ರಥಮ ದರ್ಜೆ ಕಾಲೇಜಿ ಸ್ಥಳಾಂತರ ವಿಚಾರವಾಗಿ 3ದಿನ ಧರಣಿ ಮಾಡಿ ಸರ್ಕಾರ ಗಮನ ಹರಿಸದಿದ್ದ ಕಾರಣ 4 ನೇ ದಿನ ತುರುವನೂರು to ಬೆಂಗಳೂರು ಪಾದಯಾತ್ರೆ ಹಮ್ಮಿಕೊಂಡು ಆರಂಭಿಸಿದಾಗ ಪೋಲಿಸರು ತಡೆದು ಬಂಧಿಸಿದರು ಇದಕ್ಕೆ ಚಿತ್ರದುರ್ಗದ ಎಲ್ಲಾರ ಬೆಂಬಲವಿತ್ತು. ಸ್ವಾಮೀಜಿಗಳು ಸಹ ಭಾಗವಹಿಸಿ ಚಾಲನೆ ನೀಡಿದರು.ಆದರೆ ನಮ್ಮ ಪಕ್ಷದ ರಾಜ್ಯ ಸಿಎಲ್ ಪಿ ನಾಯಕರಾದ ಸಿದ್ದರಾಮಯ್ಯ ಅವರ ಆದೇಶ ಮೇರೆಗೆ ಧರಣಿ ಸ್ಥಗಿತಗೊಳಿಸಿ ಸರ್ಕಾರಕ್ಕೆ ಸಮಯ ನೀಡಿ ಎಂದು ಹೇಳಿದರು ಅದಕ್ಕೆ ಸಮಯ ನೀಡಿ ಕಾಲೇಜಿನ ಮಾಹಿತಿನ್ನು ಸರ್ಕಾರಕ್ಕೆ ಮುಟ್ಟಿಸಲು ಎಲ್ಲಾರೂ ಪಕ್ಷತೀತವಾಗಿ ಬೆಂಬಲಿಸಿದರು. ಮತ್ತು ಬಾಲಗಂಗಾಧರ ಮಠದ ನಿರ್ಮಾಲನಂದಸ್ವಾಮಿ, ಪಾಟ್ನನಾಯಕನಹಳ್ಳಿ ನಂಜವಧೂತ ಸ್ವಾಮಿ ಮುಖ್ಯ ಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಕರೆ ಮಾಡಿ ಬೆಂಬಲಿಸಿದರ. ದಲಿತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟದ ಮಾದರ ಚನ್ನಯ್ಯ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನನ್ನಾಂದ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಈಶ್ವರನಂದ ಸ್ವಾಮೀಜಿ, ಪುರುಷೋತ್ತಮನಂದ ಸ್ವಾಮೀಜಿ, ಶ್ರೀಕೃಷ್ಣ ಯಾದವನಾಂದ ಸ್ವಾಮೀಜಿ, ಬಸವನಾಗಿದೇವಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಸಂತ ಸೇವಲಾಲ್ ಸ್ವಾಮೀಜಿ ಸೇರಿ 33 ದಲಿತ ಮತ್ತು ಹಿಂದುಳಿದ ವರ್ಗಗಳ ಸ್ವಾಮೀಜಿಯವರು ಬೆಂಬಲ ನೀಡಿ ಖುದ್ದು ಮುಖ್ಯಮಂತ್ರಿ ಭೇಟಿಗೆ ತೆರಳಿದರು.ನಂತರ ಮುಖ್ಯಮಂತ್ರಿ ಸಿಗದ ಕಾರಣ ಉಪಮುಖ್ಯಮಂತ್ರಿ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.ಶಿಕ್ಷಣ ಸಚಿವರ ತಮ್ಮಇಲಾಖೆ ಮುಖಾಂತರ ಆಗಸ್ಟ್ 12 ಶಿಕ್ಷಣ ಸಚಿವರು ದಾವಣಗೆರೆ ವಿಶ್ವವಿದ್ಯಾಲಯ ಪತ್ರ ಬರೆದು ಕುಲಪತಿಗಳಿಂದ ಮಾಹಿತಿ ಪಡೆದ ತುರುವನೂರು ಕಾಲೇಜು ಘಟಕ ಕಾಲೇಜು ಆಗಿ ಮಾಡಿ ಕೊಡುತ್ತೇನೆ ಆ ಭಾಗದ ವಿದ್ಯಾರ್ಥಿಗಳಿಗೆ ಎಲ್ಲಾ ಕೋರ್ಸ್ ಸಿಗಲಿ ಎಂದು ಹಾರೈಸಿಸಿದ ಸಚಿವರಿಗೆ ಧನ್ಯವಾದಗಳು. ದಾವಣಗೆರೆ ವಿಶ್ವವಿದ್ಯಾಲಯ ಅಡಿಯಲ್ಲಿ ಸಾಕಷ್ಟು ಕೋರ್ಸ್‌ಗಳನ್ನು ಕಾಲೇಜು ನೀಡಲಿದೆ ಮತ್ತು ಪ್ರಸ್ತತ ಅಭ್ಯಾಸ ಮಾಡುತ್ತಿರುವವರಿಗೆ ಅವಕಾಶ ಮಾಡಿಕೊಡುತ್ತೇನೆ ಎಂದು ತಿಳಿಸಿದ್ದಾರೆ.ಒಂದು ವೇಳೆ ಆ ಮಕ್ಕಳಿಗೆ ಅವಕಾಶ ಆಗಿಲ್ಲ ಅಂದರೆ ನಾನೇ ಸ್ವಯಂ ಬಸ್ ವ್ಯವಸ್ಥೆ ಮಾಡಿ ವಿದ್ಯಾಭ್ಯಾಸ ಮಾಡಿಸುತ್ತೇನೆ.ಘಟಕ ಕಾಲೇಜು ರಾಜ್ಯದಲ್ಲಿ ಆಗಿರುವ ಕೇಲವೆ ಕೇಲವು ಕಾಲೇಜಲ್ಲಿ ತುರುವನೂರು ಕಾಲೇಜು ಸಹ ಒಂದು ಹರ್ಷ ವ್ಯಕ್ತಪಡಿಸಿದರು. ಈಗ ಇರುವ ವಿದ್ಯಾರ್ಥಿಗಳು ಆತಂಕ ಪಡುವ ಅವಶ್ಯತೆ ಇಲ್ಲ ಎಂದರು.
ತುರುವನೂರು ಕಾಲೇಜು ಉಳಿಸಲು ಬೆಂಬಲಿಸಿದ ಎಲ್ಲಾ ಪಕ್ಷದ ನಾಯಕರಿಗೆ , ಮುಖಂಡರುಗಳಿಗೆ, ರೈತ ಹೋರಟಗಾರರು, ಕನ್ನಡ ಸಂಘಟನೆಗಳು, ಪತ್ರಕರ್ತರು, ಕವಿಗಳಿಗೆ,ನಿವೃತ್ತ ಪ್ರಾಂಶುಪಾಲರಿಗೆ,ಎಲ್ಲಾ ಸರ್ವಧರ್ಮ ಸ್ವಾಮೀಜಿಗಳಿಗೆ ,ವಿವಿಧ ವಿದ್ಯಾರ್ಥಿ ಸಂಘಟನೆಗಳಿಗೆ ಸೇರಿ ಎಲ್ಲಾರಿಗೂ ನಾನು ಸದಾ ಋಣಿಯಾಗಿರುತ್ತೇನೆ.
ಚಿತ್ರದುರ್ಗ ಮೆಡಿಕಲ್ ಕಾಲೇಜು ಕನಕಪುರಕ್ಕೆ ಸ್ಥಳಾಂತರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು ಚಿತ್ರದುರ್ಗ ಮೆಡಿಕಲ್ ಕಾಲೇಜು ಸ್ಥಳಾಂತವಾಗಿಲ್ಲ ,ಅದು ಇರುವ ಕಡೆಯಲ್ಲಿ ಇದೆ.ಎಲ್ಲಾವೂ ಸಹ ಮಾಹಿತಿ ಬೇಕಾದರೆ ನೀಡುತ್ತೇನೆ.ಮಾಹಿತಿ ಕೊರತೆಯಿಂದ ಹೇಳಿಕೆ ನೀಡರಬಹುದು. ಖಾಸಗಿ ಮೆಡಿಕಲ್ ಕಾಲೇಜು ಇರುವ ಕಡೆ ಸರ್ಕಾರಿ ಕಾಲೇಜು ನೀಡಲು ಬರುವುದಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಹೇಳಿಕೆಗೆ ತಿರುಗೇಟು ನೀಡಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಉಪಾಧ್ಯಕ್ಷ ವಿಜಯಲಕ್ಷ್ಮಿ , ಜಿಪಂ ಸದಸ್ಯ ಪ್ರಕಾಶ್ ಮೂರ್ತಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ರವಿಕುಮಾರ್, ಮಾಜಿ ಜಿಪಂ ಸದಸ್ಯ ಬಾಬುರೆಡ್ಡಿ, ಟಿ.ಶಿವಕುಮಾರ್ ಇದ್ದರು.