April 27, 2024

Chitradurga hoysala

Kannada news portal

ಮಾಜಿ ಸೈನಿಕರ ಅವಲಂಬಿತರು: ಮಾಶಾಸನ ದಾಖಲೆ ಸಲ್ಲಿಸಿ ಆಹ್ವಾನ

1 min read

ಚಿತ್ರದುರ್ಗ, ಆ.24:

2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಪಿಂಚಣಿದಾರರಿಗೆ ವಿವಿಧ ವರ್ಗಗಳ ಮಾಸಾಶನ, ಗೌರವಧನವನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಡಿಡಿಓಗಳ ಮುಖಾಂತರ ಖಜಾನೆ-2ರ ಬಿಎಂಎಸ್ ಮಾಡ್ಯೂಲ್ ಮೂಲಕ ಪಾವತಿಸಲಾಗುವುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿರುವ 2ನೇ ಮಹಾಯುದ್ಧದ ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ಜೀವಿತ ಪ್ರಮಾಣ ಪತ್ರ, ಆಧಾರ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಖಾತೆಯ ಸಂಖ್ಯೆಗಳ ಅವಶ್ಯಕತೆಯಿರುವುದರಿಂದ ಉಪನಿರ್ದೇಶಕರ ಕಾರ್ಯಾಲಯ, ಸೈನಿಕ ಮತ್ತು ಪುನರ್ವಸತಿ ಇಲಾಖೆ, ಜಿಲ್ಲಾಧಿಕಾರಿಗಳ ನಿವಾಸದ ಹತ್ತಿರ, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ ಇಲ್ಲಿ ಸಂಪರ್ಕಿಸಲು ಕೋರಿದೆ.

 ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08192-220925ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Leave a Reply

Your email address will not be published. Required fields are marked *