September 17, 2024

Chitradurga hoysala

Kannada news portal

ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

1 min read

ಚಿತ್ರದುರ್ಗ,ಆ.24: ಕರ್ನಾಟಕ ಸಾಹಿತ್ಯ ಆಕಾಡಮೆ ವತಿಯಿಂದ 2019ನೇ ವರ್ಷದ ಪುಸ್ತಕ ಬಹುಮಾನ ಯೋಜನೆಯಲ್ಲಿ ಹಲವು ಪ್ರಕಾರದ ಕನ್ನಡ ಪುಸ್ತಕಗಳ ಉತ್ತಮ ಕೃತಿಗಳಿಗೆ ಬಹುಮಾನ ನೀಡಲು ಅರ್ಜಿ ಆಹ್ವಾನಿಸಿದೆ.

 ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2019 ಜನವರಿ 01ರಿಂದ  ಡಿಸೆಂಬರ್ 31 ರೊಳಗೆ ಪ್ರಥಮ ಆವೃತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು. ಕೃತಿಯಲ್ಲಿ ಪ್ರಥಮ ಮುದ್ರಣ 2019 ಎಂದು ಮುದ್ರಿತವಾಗಿರಬೇಕು.

ವಿವಿಧ ಪ್ರಕಾರದ ಕೃತಿಗಳು: ಕಾವ್ಯ (ವಚನಗಳು ಮತ್ತು ಹನಿಗವನಗಳು),  ಕಾದಂಬರಿ, ಸಣ್ಣಕತೆ, ನಾಟಕ. ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ. ಜೀವನ ಚರಿತ್ರೆ, ಆತ್ಮಕಥೆ. ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ. ವಿಜ್ಞಾನ ಸಾಹಿತ್ಯ, ಮಾನವಿಕಶಾಸ್ತ್ರ, ಸಂಶೋಧನೆ ವೈಚಾರಿಕತೆ, ಅಂಕಣ ಬರಹ. ಅನುವಾದ-1 (ಸೃಜನ, ಸೃಜನೇತರ) ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿ. ಅನುವಾದ-2 (ಸೃಜನ,ಸೃಜನೇತರ) ಕನ್ನಡದಿಂದ ಅನ್ಯಭಾಷೆಗೆ ಅನುವಾದಗೊಂಡ ಕೃತಿ. ಕನ್ನಡದಿಂದ ಇಂಗ್ಲಿಷ್‍ಗೆ ಅನುವಾದ, ದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಸೃಜನ, ಸೃಜನೇತರ ಕೃತಿ.

 ಆಸಕ್ತರು ಪ್ರಕಟವಾದ ಪುಸ್ತಕಗಳ ತಲಾ 4 ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಆಕಾಡೆಮಿ, ಕನ್ನಡ ಭವನ, 2 ನೇ ಮಹಡಿ, ಜೆ.ಸಿ ರಸ್ತೆ ಬೆಂಗಳೂರು-560002 ಇವರಿಗೆ ಅಂಚೆ ಅಥವಾ ಕೊರಿಯರ್ ಮೂಲಕ ಇಲ್ಲವೇ ಖುದ್ದಾಗಿ 2020ರ ಸೆಪ್ಟಂಬರ್ 30ರೊಳಗೆ ತಲುಪಿಸಲು ಆಕಾಡೆಮಿ ರಿಜಿಸ್ಟ್ರಾರ್ ಎನ್.ಕರಿಯಪ್ಪ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *