April 26, 2024

Chitradurga hoysala

Kannada news portal

ಆಯಿಲ್ ಸಿಟಿಯ ಮೈಂಡ್ ಗೇಮರ್ ರಾಜಕೀಯಕ್ಕೆ ಎಂಟ್ರಿ.

1 min read

 

ವಿಶೇಷ ವರದಿ: ಬಿಜೆಪಿ ಪಕ್ಷ ತನ್ನ ಪಕ್ಷ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಜಾತಿವಾರು ಲೆಕ್ಕಚಾರ ಜೊತೆಗೆ ಆ ಜಾತಿಯ ಪಕ್ಷ  ನಿಷ್ಠರಿಗೆ ಅವಕಾಶಗಳನ್ನು ನೀಡುವ ಜೊತೆಯಲ್ಲಿ  ಜನಾಂಗದ ಮತಗಳನ್ನು ಹಿಡಿಯಾಗಿ ಪಡೆಯುವ ರಣತಂತ್ರ ಎಣೆಯುತ್ತಿದೆ. ಜನಾಂಗ ಮತಗಳನ್ನು ತರುವಂತಹ ಎರಡನೇ ಹಂತದ   ಯುವ ನಾಯಕರನ್ನು ಮುನ್ನಲೆಗೆ ತರುವ ಕೆಲಸ ಸಂಘ ಪರಿವಾರ ಮತ್ತು ಪಕ್ಷದ ಪ್ರಮುಖರು ಮಾಡುತ್ತಿರುವುದು ಪಕ್ಷ ಭವಿಷ್ಯದ ದೃಷ್ಟಿಯಿಂದ ಬೇಕಾದ ಎಲ್ಲಾ ರೂಪುರೇಷೆ ತಯಾರಿಸಿ ಅಖಾಡಕ್ಕೆ ಇಳಿದಿರುವಂತೆ ಸ್ಪಷ್ಟವಾಗಿ ಕಾಣುತ್ತಿದೆ. 

ಇಷ್ಟು ದಿನ ತೆರೆಮರೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುತ್ತ ಸಮಾಜಮುಖಿ ‌ಕಾರ್ಯ ಮುಖಾಂತರ  ನಿರಂತರ ಸಂಘ ಪರಿವಾರ   ಕಾರ್ಯದಲ್ಲಿ ಸಕ್ರಿಯವಾಗಿ  ತೊಡಸಿಕೊಂಡು ತನ್ನದೇ ಆದ ಚಾಪು ಮೂಡಿಸಿ ಯುವ ಜನಾಂಗದವರಲ್ಲಿ  ಹೋರಟದ ಮನೋಭಾವ ಬೆಳಸಿದ ವ್ಯಕ್ತಿ  ಕೋಟೆನಾಡು ಐತಿಹಾಸಿಕ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ  ಯುವ ನಾಯಕ  ಮಹಾಂತೇಶ ನಾಯಕ ಅವರನ್ನು ಬಿಜೆಪಿ‌ ಎಸ್.ಟಿ.ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ  ಆಯ್ಕೆ ಮಾಡುವ  ಮುಖಾಂತರ ಯುವ ಮುಖಕ್ಕೆ ಆದ್ಯತೆ ನೀಡಿದೆ. 

ಇದೇ ಮಹಂತೇಶ್ ನಾಯಕ‌ ಕಳೆದ  ವಿಧಾನಸಭಾ ಚುನಾವಣೆಯಲ್ಲಿ‌ ಮೊಳಕಾಲ್ಮುರು  ಕ್ಷೇತ್ರದಿಂದ ಶ್ರೀರಾಮುಲು  ಅವರು ಸ್ಪರ್ಧೆಗಿಳಿದ ಸಂದರ್ಭದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಜೊತೆಗೂಡಿ ಪ್ರತಿ ಬೂತ್ ಮಟ್ಟದಲ್ಲಿ ‌  ಯುವ  ಕಾರ್ಯಕರ್ತರ ಪಡೆ ನಿರ್ಮಿಸಿ‌  ಐದು ನೂರುಕ್ಕೂ ಹೆಚ್ಚು ಯುವ ಪಡೆಯನ್ನು  ಚುನಾವಣಾ ಕಾರ್ಯಕ್ಕೆ‌   ತಯಾರು ಮಾಡಿ ಪ್ರತಿ‌ ಬೂತ್ ನ‌ ಬೆಳವಣಿಗೆಯ  ಮಾಹಿತಿ ಪಡೆದುಕೊಂಡು  ಚುನಾವಣೆಯಲ್ಲಿ  ಮಾಜಿ ಶಾಸಕ ಬಿಜೆಪಿ ಬಂಡಾಯ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಮತ್ತು  ಕಾಂಗ್ರೆಸ್ ಅಭ್ಯರ್ಥಿ ಯೋಗೀಶ್ ಬಾಬು  ಅವರ ಚುನಾವಣೆಯ  ಲೆಕ್ಕಚಾರ ಉಲ್ಟಾ ಒಡೆಯುಂತೆ  ಮಾಡುವಲ್ಲಿ‌ ಶ್ರೀರಾಮುಲು ಅಪ್ತ  ಜನಾರ್ದನರೆಡ್ಡಿ ಅವರೊಂದಿಗೆ ಕೈ ಜೋಡಿಸಿ ರಾಮುಲು ಗೆಲುವಿನಲ್ಲಿ ಪ್ರಮುಖ‌‌ ಪಾತ್ರವಹಿಸಿದ್ದಾರೆ. 

ಮಹಾಂತೇಶ್ ನಾಯಕ  ಮೂಲತಃ  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿಯ ಗ್ರಾಮದ  ಕೃಷಿ ಕುಟುಂಬದಲ್ಲಿ ಜನಿಸಿದವರು.  ಬಾಲ್ಯದಿಂದಲೇ ಸಾಮಾಜಿಕ ಕಾರ್ಯಗಳ ಕಡೆಗೆ ಆಕರ್ಷಿತರಾಗಿ  ಕಾಲೇಜು ದಿನಗಳಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾಗಿ ಅನೇಕ ಪ್ರತಿಭಟನೆಗಳನ್ನು ಅನೇಕ ಕಾರ್ಯಕ್ರಮಗಳನ್ನು  ರೂಪಿಸಿ ಅನ್ಯಾಯದ ವಿರುದ್ಧ ಸಿಡಿದೆದ್ದು ಅಸಂಖ್ಯಾತ ವಿದ್ಯಾರ್ಥಿಗಳ ನಡುವೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಗಣನೀಯವಾಗಿರುವ ಸೇವೆಯನ್ನು ಸಲ್ಲಿಸಿದ್ದಾರೆ, ಅಷ್ಟೇ ಅಲ್ಲದೆ ವಿದ್ಯಾರ್ಥಿ ಪರಿಷತ್ತಿನ  ಪೂರ್ಣಾವಧಿ ಕಾರ್ಯಕರ್ತರಾಗಿ ‌ಬಳ್ಳಾರಿಯ   ಜಿಲ್ಲಾ  ಸಂಘಟನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಜೊತೆ  ಜೊತೆಯಲ್ಲಿ ಖಾಸಗಿ ಶಾಲಾ ಕಾಲೇಜು    ಡೊನೇಷನ್ ಹಾವಳಿ, ವಿದ್ಯಾರ್ಥಿ ನಿಲಯ ಸುಧಾರಣೆ ಹೀಗೆ ಹತ್ತು ಹಲವು  ಸುಧಾರಣೆಗಳ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸುದೀರ್ಘ ಸೇವೆಯ ನಂತರ ಚಿತ್ರದುರ್ಗಕ್ಕೆ ಮರಳಿ   ಇತಿಹಾಸ ಪರಂಪರೆ ಸಂರಕ್ಷಣೆಗಾಗಿ ರಾಜವೀರ ಮದಕರಿ ನಾಯಕ ಗೌರವ ಸಂರಕ್ಷಣಾ ವೇದಿಕೆ ಎಂಬ ಸಂಘನೆಯಡಿಯಲ್ಲಿ ರಾಜ್ಯ ಸಂಚಾಲಕರಾಗಿ   ಚಿತ್ರದುರ್ಗದಲ್ಲಿ ಇತಿಹಾಸ ಸಂರಕ್ಷಣೆ ಮಹಾರಾಜ ಮದಕರಿನಾಯಕರ ಭವ್ಯ ಪರಂಪರೆಯ ಸಂರಕ್ಷಣೆಗಾಗಿ ಸಾಕಷ್ಟು  ಹೋರಾಟಗಳನ್ನು  ರೂಪಿಸಿ ಅನೇಕ  ವಿಚಾರಸಂಕಿರಣಗಳನ್ನು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಿದ್ದಾರೆ.

ಚಿತ್ರದುರ್ಗದ ಪಾಳೆಯಗಾರರಲ್ಲಿ ಕೊನೆಯ ಅರಸ ನಾಗಿರುವ ರಾಜ ವೀರ ಮದಕರಿ ನಾಯಕ ಅವರ ಸ್ಮಾರಕ ವಿಚಾರವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಗೆ ನೂರಾರು ಯುವಕರೊಂದಿಗೆ  ರಾಜವೀರ ಮದಕರಿ ನಾಯಕರಿಗೆ ಅವರ ವಂಶಸ್ಥರ ಜೊತೆಯಲ್ಲಿ ಪಿತೃ ತರ್ಪಣ ಸಮರ್ಪಿಸಿದರು ನಂತರ ಇದೀಗ ಪ್ರತಿವರ್ಷ ಕೂಡ ಅಲ್ಲಿ ಮದಕರಿನಾಯಕರ ಪುಣ್ಯಸ್ಮರಣೆ ನಡೆಯುತ್ತದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು  ಮತಾಂಧ ನಾದ ಟಿಪ್ಪುವಿನ ಜಯಂತಿಯನ್ನು ಆಚರಿಸಲು ಮುಂದಾದಾಗ ಚಿತ್ರದುರ್ಗದಲ್ಲಿ  ಟಿಪ್ಪು ಜಯಂತಿಗೆ ಪ್ರಬಲ ಹೋರಟಗಳನ್ನು ರೂಪಿಸಿದರು. ಜಿಲ್ಲೆಯಲ್ಲಿ  ಇತಿಹಾಸ ತಿಳಿಸುವ ಸಂಕೇತವಾದ  ಒನಕೆಯ ಮೂಲಕ ಒನಕೆ  ಚಳುವಳಿಯ ರೂಪಿಸಿ  ನೇತೃತ್ವ ವಹಿಸಿದರು.  ಚಿತ್ರದುರ್ಗದ ಇತಿಹಾಸದಲ್ಲೇ ವಿರೋಧದ ನಡುವೆಯೂ ಒನಕೆ ಹಿಡಿದು ಆಧುನಿಕ ಒನಕೆ ಓಬವ್ವ ಗಳಂತೆ ಅಸಂಖ್ಯಾತ  ಮಾತೆಯರು ಸಿಡಿದೇಳಲು  ಮಹಾಂತೇಶ ನಾಯಕ ಕಾರಣರಾಗಿದ್ದರು. ಮದಕರಿ ನಾಯಕ ಸಿನಿಮಾದಲ್ಲಿ‌  ಮದಕರಿನಾಯಕನ‌ ನೈಜ  ಇತಿಹಾಸ ತಿಳಿಸಿ ಎಂದು ನಿರ್ದೇಶಕರಿಗೆ  ತಿಳಿಸಿದ್ದಾರೆ

ಮದಕರಿ ನಾಯಕ ಪಟ್ಟಾಭಿಷೇಕ ಚಿತ್ರದುರ್ಗದ ಇತಿಹಾಸದ ಚರ್ಚೆಗಳು ಇವರ ಹೋರಾಟಗಳಿಂದ ಜಿಲ್ಲೆ ಮತ್ತು ರಾಜ್ಯವ್ಯಾಪಿ ನಡೆದಿದ್ದು ಚಿತ್ರದುರ್ಗದ ಇತಿಹಾಸವನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ತಲುಪಿಸಲು ಯಶಸ್ವಿಯಾದವರು.

ರಾಜ್ಯದಲ್ಲಿ ಸಂಘ ಪರಿವಾರದ ಹಿನ್ನೆಲೆ ಇರುವ ಏಕೈಕ ವಾಲ್ಮೀಕಿ ಸಮಾಜದ ಯುವ ನಾಯಕನಾಗಿ ಮಹಾಂತೇಶನಾಯಕ ಹೊರಹೊಮ್ಮಿದ್ದಾರೆ.

ಬಿಜೆಪಿ ಸರ್ಕಾರದ ಅನೇಕ ನಾಯಕರೊಂದಿಗೆ ನೇರ ಸಂಪರ್ಕ ಹೊಂದಿರುವ ಚಿತ್ರದುರ್ಗ ಜಿಲ್ಲೆಯ ಪ್ರಬಲ ನಾಯಕರಲ್ಲಿ ಇವರು ಕೂಡ ಒಬ್ಬರಾಗಿದ್ದು. ಇವರ ಬೆಳವಣಿಗೆ ಸಹಿಸದೆ ಮತ್ತು ಕೇಸುಗಳನ್ನು ಹಾಕಿ ಇವರ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ಕೆಲವರು ಮಾಡಿದ್ದರು, ಆದರೆ ಅವೆಲ್ಲವನ್ನು ಮೆಟ್ಟಿ ನಿಂತು ರಾಜ್ಯದ ಬಿಜೆಪಿ ನಾಯಕರು ಇವರ ಬೆನ್ನಿಗೆ ನಿಂತು ಇವರ ಕೇಸುಗಳ ವಿರುದ್ಧವಾಗಿ ಸುಮಾರು 3 ಸಾವಿರಕ್ಕೂ ಅಧಿಕ ಸಂಖ್ಯೆಯ ಜನ ದೊಡ್ಡ ಪ್ರತಿಭಟನೆಯನ್ನು ಮಾಡಿದ್ದರು ಹಾಗೂ ಮಾಜಿ ಸಚಿವ ಸಿಟಿ ರವಿ ನಾರಾಯಣಸ್ವಾಮಿ ಈಶ್ವರಪ್ಪ ಚಿತ್ರದುರ್ಗದಕ್ಕೆ ಬಂದು ಮಹಾಂತೇಶ ನಾಯಕರ ಬೆಂಬಲಕ್ಕೆ ನಿಂತಿದ್ದರು.

ಮದಕರಿನಾಯಕ ,ಚಿತ್ರದುರ್ಗದ ಇತಿಹಾಸದ ಸಂರಕ್ಷಣೆಗಾಗಿ ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಿಸುವಂತೆ ಕೇಂದ್ರಸರ್ಕಾರಕ್ಕೆ ‌ಮನವಿ  ಸಹ ಮಾಡಿದ್ದು ಇಂತಹ ಜನಪರ ‌ಕಾಳಜಿ, ಸಂಟಟನೆ ಗುಣ, ಸೈಲೆಂಟ್ ಗೇಮರ್ ಆಗಿ ಅನೇಕ ಚುನಾವಣೆಯಲ್ಲಿ ಕೆಲಸ ಮಾಡಿ ಈ ಹಂತಕ್ಕೆ ಬಂದು ನಿಂತಿದ್ದು ಮುಂದಿನ ದಿನಗಳಲ್ಲಿ ಉತ್ತಮ ನಾಯಕರಾಗಿ ಜನಸೇವೆಯಲ್ಲಿ ತೊಡಗಲಿ ಎಂದು ಅಭಿಮಾನಿಗಳ ಮತ್ತು ಜನಾಂಗದ ಆಶಯವಾಗಿದೆ.

ಇನ್ನು ಈ ಮೈಂಡ್ ಗೇಮರ್ ಗೇಮ್ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುವುರೆ? ಎಂದು ಕಾದು ನೋಡಬೇಕಿದೆ.

About The Author

Leave a Reply

Your email address will not be published. Required fields are marked *