May 29, 2024

Chitradurga hoysala

Kannada news portal

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸರ್ಕಾರಿ ನೌಕರರ ಸಮಸ್ಯೆಗಳು ಮತ್ತು ಕುಂದು ಕೊರತೆ ಜಂಟಿ ಸಮಲೋಚನೆ ಸಭೆ

1 min read

ಚಿತ್ರದುರ್ಗ: ಸರ್ಕಾರಿ ನೌಕರರು ಸಂವಿಧಾನದ ಐದನೇ ಅಂಗವಾಗಿ ಸಾರ್ವಜನಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸುವ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಾರೆ.
ವಿವಿಧ ಇಲಾಖೆಗಳ ನೌಕರರ ಕುಂದು ಕೊರತೆಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ಅವರು ಜಂಟಿ ಸಮಾಲೋಚನಾ ಸಭೆಯನ್ನು ಜಿಲ್ಲಾವಾರು ಆಯೋಜಿಸಿ ಜಿಲ್ಲಾಮಟ್ಟದಲ್ಲಿ ನೌಕರರ ಸಮಸ್ಯೆಗಳನ್ನುಅಲ್ಲಿಯೇ ಬಗೆಹರಿಸಿಕೊಳ್ಳಲು ವಿಶೇಷ ಆದೇಶ ಹೊರಡಿಸಿರುತ್ತಾರೆ ಅವರಿಗೆ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಧನ್ಯವಾದಗಳು
 ಸಮಸ್ತ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ ಸಮುದಾಯ ಭವನದ ನಿರ್ಮಾಣಕ್ಕೆ 29 ವರ್ಷಗಳ ಹಿಂದೆ ಪ್ರವಾಸೋದ್ಯಮ ಇಲಾಖೆಗೆ ಮಂಜೂರಾಗಿರುವ ಜಮೀನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಕಾಯ್ದಿರಿಸಿ ಮಂಜೂರಾತಿಗೆ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸುವುದು.(ಆಕ್ಷೇಪಣೆಗಳನ್ನು ಸರಿಪಡಿಸಿ)

 ಹಾಲಿ ಇರುವ N.G.O ವಸತಿಗೃಹಗಳು ತುಂಬಾ ಹಳೆಯ ಕಟ್ಟಡಗಳಾಗಿದ್ದು, ಸರಿಯಾದ ನಿರ್ವಹಣೆ ಇಲ್ಲದೆ ವಾಸಕ್ಕೆ ಯೋಗ್ಯವಾದ ಸ್ಥಿತಿಯಲ್ಲಿ ಇಲ್ಲದೆ ಇರುವುದರಿಂದ ನೂತನ ವಸತಿಗೃಹಗಳ ನಿರ್ಮಾಣಕ್ಕೆ, ಅನುದಾನ ಮತ್ತು ಜಾಗ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.

 ಸರ್ಕಾರಿ ನೌಕರರ ಸಂಘದ ವಾರ್ಷಿಕ ಸದಸ್ಯತ್ವ ಶುಲ್ಕವನ್ನು ನಿಗಧಿತ ಅವಧಿಯಲ್ಲಿ ಕಟಾಯಿಸಿ ನೌಕರ ಸಂಘದ ಬ್ಯಾಂಕ್ ಖಾತೆಗೆ (ಬ್ಯಾಂಕ್ ಖಾತೆ ಸಂ: 54051226085 ಐ.ಎಫ್.ಎಸ್ ಕೋಡ್:SBIN0040007, ಬ್ಯಾಂಕ್ ಹೆಸರು:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮೈಸೂರ್ ಬ್ಯಾಂಕ್ ಸರ್ಕಲ್, ಅವಿನ್ಯೂ ರೋಡ್, ಬೆಂಗಳೂರು) ಅಥವಾ ಖಜಾನೆ-2 Recipient ID-1000054414 ಗೆ ಜಮಾ ಮಾಡಿ ಸರ್ಕಾರಿ ನೌಕರರ ಸಂಘಕ್ಕೆ ಮಾಹಿತಿ ನೀಡಲು ಜಿಲ್ಲೆಯ ಎಲ್ಲಾ ಇಲಾಖೆಗಳ ಕಛೇರಿ ಮುಖ್ಯಸ್ಥರಿಗೆ ನಿರ್ದೇಶನ ನೀಡುವುದು.

 ಸರ್ಕಾರಿ ಪ್ರಾಥಮಿಕ ಶಾಲಾ ಅರ್ಹ ಬಿ.ಇಡಿ., ತರಬೇತಿ ಹೊಂದಿದ ಶಿಕ್ಷಕರುಗಳಿಗೆ ಸರ್ಕಾರಿ ಪ್ರೌಢಾಶಾಲಾ ಹಿಂದಿ, ಪಿ.ಸಿ.ಎಂ ಮತ್ತು ಆಂಗ್ಲ ಭಾಷಾ ಶಿಕ್ಷಕರಿಗೆ ಬಡ್ತಿ ನೀಡುವ ಪ್ರಕ್ರಿಯೆ ಬಾಕಿ ಇದೆ. ವರ್ಗಾವಣೆಗೆ ಪೂರ್ವದಲ್ಲಿಯೇ ಈ ವಿಷಯಗಳಿಗೆ ಬಡ್ತಿ ನೀಡಲು ಕ್ರಮ ವಹಿಸುವುದು.

 ಜಿಲ್ಲೆಯಾದ್ಯಂತ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವುದರ ಮೂಲಕ ಈಗಿರುವ ನೌಕರರ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ನೌಕರರ ಒತ್ತಡದ ಬದುಕಿನಿಂದ ಮುಕ್ತಿ ನೀಡುವುದು.

 ಗ್ರೂಪ್ ಸಿ ಮತ್ತು ಡಿ ವರ್ಗದವರು ತಮ್ಮ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ವೆಚ್ಚದಂತಹ ಸಮಸ್ಯೆಗಳೊಂದಿಗೆ ಸ್ವಂತ ನಿವೇಶನ ಖರೀದಿಗೆ ತುಂಬಾ ಪರದಾಡುವಂತಹ ಪರಿಸ್ಥಿತಿ ಇರುವುದರಿಂದ ಗ್ರೂಪ್ ಸಿ ಮತ್ತು ಡಿ ನೌಕರರಿಗೆ ಸರ್ಕಾರಿ ನೌಕರರ ಸಂಘದಿಂದ ನಿವೇಶನ ಒದಗಿಸಲು ಸರ್ಕಾರಿ ಜಮೀನನ್ನು ನೀಡಲು ಅಥವಾ ಕಾಯ್ದಿರಿಸಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.

 ಜಿಲ್ಲಾಮಟ್ಟದ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲು ಸಂಬಂಧಪಟ್ಟ ಸಮಿತಿಯ ಅಧ್ಯಕ್ಷರಿಗೆ ನಿರ್ದೇಶನ ನೀಡುವುದು.

 ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಅನುಕಂಪದ ನೌಕರಿ ಪ್ರಕರಣಗಳನ್ನು ತುರ್ತಾಗಿ ಇತ್ಯಾರ್ಥ ಪಡಿಸಿ ಸಂತ್ರಸ್ತ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವಂತೆ ಅಗತ್ಯ ಕ್ರಮ ಕೈಗೊಳ್ಳಲು ಕಛೇರಿ ಮುಖ್ಯಸ್ಥರಿಗೆ ನಿರ್ದೇಶನ ನೀಡಲು ಕೋರಿದೆ.

 ಪ್ರತಿ ತಿಂಗಳು 1 ರಿಂದ 5 ನೇ ತಾರೀಖಿನೊಳಗಾಗಿ ಶಿಕ್ಷಕರು ಹಾಗೂ ಎಲ್ಲಾ ಇಲಾಖೆಗಳ ನೌಕರರ ವೇತನ ಸಕಾಲದಲ್ಲಿ ಪಾವತಿಗೆ ಕ್ರಮವಹಿಸಲು ಕಛೇರಿ ಮುಖ್ಯಸ್ಥರಿಗೆ ನಿರ್ದೇಶನ ನೀಡುವುದು ಹಾಗೂ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಕಾಲಕಾಲಕ್ಕೆ ನೀಡುವ ವೇತನ ಬಡ್ತಿ, ತುಟ್ಟಿಭತ್ಯೆ, ಕಾಲಮಿತಿ ಬಡ್ತಿ, ವಿಶೇಷ ಬಡ್ತಿಗಳನ್ನು ಮತ್ತು ಅಧಿಕೃತ ಸೌಲಭ್ಯಗಳನ್ನು ಮಂಜೂರಾತಿ ನೀಡುವುದು.

 ವಿವಿಧ ಕಛೇರಿಗಳಲ್ಲಿ ಬಾಕಿಯಿರುವ ಇಲಾಖಾ ವಿಚಾರಣೆ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿಗೊಳಿಸಿ ನೌಕರರಿಗೆ ನ್ಯಾಯ ಒದಗಿಸುವುದು.

 ಸರ್ಕಾರಿ ನೌಕರರ ವೈದ್ಯಕೀಯ ಮರುಪಾವತಿ ವೆಚ್ಚದ ಬಿಲ್ಲುಗಳನ್ನು ನಿಯಮಾನುಸಾರ ಪರಿಶೀಲಿಸಿ ತುರ್ತಾಗಿ ತೀರುವಳಿ ಮಾಡಿ ಪಾವತಿಗೆ ಅನುಕೂಲ ಮಾಡಿಕೊಡಲು ಕಛೇರಿ ಮುಖ್ಯಸ್ಥರು ಹಾಗೂ ಮೇಲು ಸಹಿ ಅಧಿಕಾರಿಗಳಿಗೆ ನಿರ್ದೇಶನ ನೀಡುವುದು.

 ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಶೌಚಾಲಯದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದು. (ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯ ವ್ಯವಸ್ಥೆ ಮಾಡುವುದು)

 ಕಚೇರಿ ಕೆಲಸಗಳಲ್ಲಿ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾದ ತರಬೇತಿಗಳನ್ನು ಸಂಬಂಧಪಟ್ಟ ಇಲಾಖೆಯ ನೌಕರರಿಗೆ ಆಗಿಂದಾಗ್ಗೆ ನೀಡಿ ನೌಕರರ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಜಿಲ್ಲಾ ತರಬೇತಿ ಸಂಸ್ಥೆಗೆ ನಿರ್ದೇಶನ ನೀಡುವುದು.

 ರಾಜ್ಯ ಸರ್ಕಾರಿ ನೌಕರರ ವೇತನ ಕೇಂದ್ರ ಸರ್ಕಾರಿ ನೌಕರರಿಗಿಂತ ಸುಮಾರು ಶೇಕಡ 25ರಷ್ಟು ಕಡಿಮೆ ಇದ್ದು ಕೇಂದ್ರಕ್ಕೆ ಸಮಾನವಾದ ವೇತನ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.

 ಜಿಲ್ಲಾ ಮಟ್ಟದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಪರಿಸರ ದಿನಾಚರಣೆಯನ್ನು ಕಚೇರಿ ಮುಖ್ಯಸ್ಥರ ನೇತೃತ್ವದಲ್ಲಿ ಪ್ರತಿಯೊಬ್ಬ ನೌಕರನಿಂದ ಗಿಡ ನೆಡಿಸುವ ಮೂಲಕ ಆಚರಿಸಲು ನಿರ್ದೇಶನ ನೀಡುವುದು.

 ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರಿಗೆ ಪ್ರಾಥಮಿಕ ಶಾಲೆಯ ಸೇವೆಯನ್ನು ಪರಿಗಣಿಸಿ 10,15,20,25 ವರ್ಷ ಕಾಲಮಿತಿ ಬಡ್ತಿ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.

 ಸರ್ಕಾರಿ ಶಾಲೆಗಳ ಮೇಲೆ SDMC ಮೇಲುಸ್ತುವಾರಿ ಕಡಿತಗೊಳಿಸುವುದು.

 ಪ್ರತಿ 3 ತಿಂಗಳಿಗೊಮ್ಮೆ ಜಂಟಿ ಸಮಾಲೋಚನಾ ಸಭೆಯನ್ನು ಆಯೋಜಿಸಿ ಸರ್ಕಾರಿ ನೌಕರರ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಿ ಅಗತ್ಯ ಕ್ರಮ ಕೈಗೊಳ್ಳುವುದು.

 ಸರ್ಕಾರದ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ನೇರವಾಗಿ ಮುಟ್ಟಿಸುವ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಸಂಘ ಸ್ಥಾಪನೆಯಾದ ದಿನಾಂಕ:07/05/1920 ಅನ್ನು ಸರ್ಕಾರಿ ನೌಕರರ ದಿನಾಚರಣೆಯನ್ನಾಗಿ ಘೋಷಣೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.

 ಕಛೇರಿ ಮುಖ್ಯಸ್ಥರು ತಮ್ಮ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಹಾಗೂ ನೌಕರರಿಗೆ ಕುಡಿಯುವ ನೀರಿನ ಸೌಲಭ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದು.

 ಸರ್ಕಾರಿ ನೌಕರರ ಸಂಘದ ವತಿಯಿಂದ ನೌಕರರಿಗಾಗಿ ನಡೆಯುವ ಕಾರ್ಯಾಗಾರಗಳಿಗೆ, ತರಬೇತಿಗಳಿಗೆ ಅವಕಾಶ ಕಲ್ಪಿಸಿ ಓ.ಓ.ಡಿ ಮಂಜೂರು ಮಾಡಿ ಹಾಜರಾತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವುದು.

 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಜ್ಯೇಷ್ಟತೆ ಮೇಲೆ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಎ.ಜಿ.ಟಿ.ಗಳಾಗಿ ಬಡ್ತಿ ನೀಡಲು ಸಿ & ಆರ್ ತಿದ್ದುಪಡಿಗೆ ಸಂಬಂಧಪಟ್ಟ ಇಲಾಖೆಯ ಮೂಲಕ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.

 ಡಿ.ಡಿ.ಪಿ.ಐ ಮತ್ತು ಬಿ.ಇ.ಓ ಕಛೇರಿಗಳಲ್ಲಿ ಶಿಕ್ಷಕರ ಅರ್ಜಿಗಳ ವಿಲೇವಾರಿಯ ಹಂತ ತಿಳಿಯಲು ಸಹಾಯವಾಣಿ ಸ್ಥಾಪಿಸುವುದು.

 ಸರ್ಕಾರಿ ಕಛೇರಿಗಳಲ್ಲಿ ನೌಕರರ ಪ್ರತಿ ವರ್ಷದ ರಹಸ್ಯ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುವಾಗ ಕಛೇರಿ ಮುಖ್ಯಸ್ಥರು ವೈಯಕ್ತಿಕ ಗಮನ ನೀಡಿ ಶೀಘ್ರ ವಿಲೇ ಮಾಡಿಸುವುದು.

 ಹೊಸದಾಗಿ ಆಯ್ಕೆಯಾದ ಸರ್ಕಾರಿ ನೌಕರರ 2ವರ್ಷಗಳ ಪರಿವೀಕ್ಷಣಾ ಅವಧಿ ಪೂರ್ಣಗೊಂಡ ತಕ್ಷಣವೇ ಪ್ರಸ್ತಾವನೆಗಳನ್ನು ಶೀಘ್ರವಾಗಿ ಖಾಯಂ ಅವಧಿ ಪೂರ್ಣ ಘೋಷಣೆ ಮಾಡಲು ಜಿಲ್ಲೆಯ ಎಲ್ಲಾ ಕಛೇರಿ ಮುಖ್ಯಸ್ಥರಿಗೆ ನಿರ್ದೇಶನ ನೀಡುವುದು.

 ಮಹಿಳಾ ನೌಕರರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ವೈಯಕ್ತಿಕ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಮಹಿಳಾ ನೌಕರರ ಹಿತಾಸಕ್ತಿಗೆ ಗಮನ ನೀಡಲು ಕಛೇರಿ ಮುಖ್ಯಸ್ಥರಿಗೆ ನಿರ್ದೇಶನ ನೀಡುವುದು.

About The Author

Leave a Reply

Your email address will not be published. Required fields are marked *