May 19, 2024

Chitradurga hoysala

Kannada news portal

ಬಿಜೆಪಿ ಎಸ್.ಟಿ.ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಹರ್ತಿಕೋಟೆ ವೀರೇಂದ್ರಸಿಂಹ ನೇಮಕ

1 min read

ಹಿರಿಯೂರು: ಭಾರತೀಯ ಜನತಾ ಪಾರ್ಟಿಯ ಎಸ್.ಟಿ.ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ತಾಲ್ಲೂಕಿನ ಹರ್ತಿಕೋಟೆ ವೀರೇಂದ್ರಸಿಂಹ ಅವರನ್ನು ನೇಮಿಸಿ ರಾಜ್ಯಧ್ಯಕ್ಷರಾದ ತಿಪ್ಪರಾಜು ಹವಾಲ್ದಾರ್ ಆದೇಶ ಹೊರಡಿಸಿದ್ದಾರೆ.
ವೀರೇಂದ್ರಸಿಂಹ ಅವರು ಕರ್ನಾಟಕ ಕಾರಾಗೃಹಗಳ ಮುಖ್ಯಾಧೀಕ್ಷಕರಾಗಿ ೨೦೧೪ ರಲ್ಲಿ ನಿವೃತ್ತರಾಗಿದ್ದಾರೆ. ನಂತರ ಬಿಜೆಪಿ ಪಕ್ಷದಲ್ಲಿ ಗುರ್ತಿಸಿಕೊಂಡು ಸಕ್ರಿಯ ಕಾರ್ಯಕರ್ತರಾಗಿದ್ದರು,ಶ್ರೀಯುತರು ಸುಮಾರು ನಲವತ್ತಕ್ಕೂ ಹೆಚ್ಚು ಸಾಹಿತ್ಯ,ಇತಿಹಾಸ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ, ಸ್ವತಃ ಬರಹಗಾರರೂ ಆಗಿರುವ ಇವರು ಇಲ್ಲಿವರೆಗೆ ಆರು ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.. ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಇವರು ಪ.ಪಂ ದ ಮೀಸಲಾತಿ ಹೆಚ್ಚುವರಿಗಾಗಿ ನಡೆದ ಹೋರಾಟದಲ್ಲಿ ವಾಲ್ಮೀಕಿ ಶ್ರೀಗಳೊಂದಿಗೆ ಹದಿನಾರು ದಿನಗಳಕಾಲ ನಿರಂತರವಾಗಿ ಪಾದಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದರು. ಸಮುದಾಯಕ್ಕೆ ಸಂವಿಧಾನಿಕ ಸೌಲತ್ತುಗಳಿಗಾಗಿ ಹಲವಾರು ಚಳುವಳಿಗಳಲ್ಲಿ ಭಾಗವಹಿಸಿದ ಅನುಭವವಿದೆ.ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯ ಕಾರ್ಯದರ್ಶಿಯಾಗಿ,ಚಿತ್ರದುರ್ಗ ಜಿಲ್ಲಾ ಟ್ರಯಬಲ್ ಕೋ ಆಪ್ ಸೊಸೈಟಿಯ ಡೈರೆಕ್ಟರಾಗಿ, ವಾಲ್ಮೀಕಿ ಎಜುಕೇಶನ್ ಮತ್ತು ಸ್ಕಾಲರ್ ಶಿಪ್ ಟ್ರಸ್ಟ್‌ ನ ಟ್ರಸ್ಟಿಯಾಗಿ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಇವರ ಪತ್ನಿ ಬಿಜೆಪಿ ಯಿಂದ ೨೦೧೦ ರ ಜಿ.ಪಂ ಚುಣಾವಣೆಯಲ್ಲಿ ಸ್ಪರ್ದಿಸಿ ಸೋತಿದ್ದರು,ಗ್ರಾ.ಪಂ.ಅಧ್ಯಕ್ಷರಾಗಿ ಯೂ ಇದ್ದರು.ವೀರೇಂದ್ರಸಿಂಹರು ತಮ್ಮ ಸೇವೆಯಲ್ಲಿ ಉತ್ತಮ ಹೆಸರು ಪಡೆದು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾಪದಕವನ್ನೂ ಗಳಿಸಿದ್ದಾರೆ,ಇವರ ಸಮುದಾಯದ ಸೇವೆ,ಸಂಘಟನಾ ಚತುರತೆಯನ್ನ ಗುರುತಿಸಿ ಬಿಜೆಪಿ ಪಕ್ಷವು ಎಸ್.ಟಿ.ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಿದೆ.

About The Author

Leave a Reply

Your email address will not be published. Required fields are marked *