ನೋಟ್ ಬ್ಯಾನ್ ಮಾಡಿ ಜನರನ್ನು ಬೀದಿಗೆ ತಂದ ಸಾಧನೆ ಬಿಜೆಪಿಯದು:ರಾಜ್ಯ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಮರನಾಥ
1 min readಚಳ್ಳಕೆರೆ- ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಗೂಡ್ಸೆ ರೀತಿಯಲ್ಲಿ ಆಡಳಿತ ನಡೆಸುತ್ತಿದೆ ಎಂದು ರಾಜ್ಯ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾಮರನಾಥ ತಿಳಿಸಿದರು.
ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ‘ನಾರಿ ಶಕ್ತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧಿಯೊಂದಿಗೆ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್, ಇಂದು ರಾಜ್ಯದಲ್ಲಿ ಜಾರಿ ಇರುವ ಎಲ್ಲಾ ಯೋಜನೆಗಳು ಕಾಂಗ್ರೆಸ್ ಜಾರಿಗೆ ತಂದಿರುವಂತಹ ಯೋಜನೆಗಳು. ಅವುಗಳನ್ನು ಜಾರಿ ಮಾಡಿ ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ ನಾಚಿಕೆ ಆಗಬೇಕು ಎಂದರು. ರಾಷ್ಟ್ರದಲ್ಲಿ ಎಲ್ಲೂ ಇಲ್ಲದ ಜಿಎಸ್ ಟಿ ರಾಜ್ಯದಲ್ಲಿದೆ, ನೋಟ್ ಬ್ಯಾನ್ ಮೂಲಕ ರಾಷ್ಟ್ರದ ಜನರನ್ನು ಬೀದಿಗೆ ತಂದ ಹೆಗ್ಗಳಿಕೆ ಬಿಜೆಪಿ ಪಕ್ಷದ್ದು ಬಿಟ್ಟರೆ ಬೇರೆ ಯಾವ ಸಾಧನೆಯೂ ಇಲ್ಲ. ಕೋವಿಡ್ ನಿಬಾಯಿಸುವಲ್ಲಿ ರಾಜ್ಯ, ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅತೀಯವಾದ ಭ್ರಷ್ಟಾಚಾರದ ಪಕ್ಷ ಬಿಜೆಪಿ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾಸುರೇಶಬಾಬು, ಜಿಲ್ಲಾ, ತಾಲ್ಲೂಕಿನ ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.