ಸೌತೆಕಾಯಿ ಬಳಸುವುದರಿಂದ ಆರೋಗ್ಯಕ್ಕೆ ಎಷ್ಟು ಉಪಯುಕ್ತ
1 min readದಿನನಿತ್ಯವೂ ಸೌತೆಕಾಯಿ ತಿನ್ನುವುದಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು ಎಂದು ಹಲವರು ಹೇಳುತ್ತಲೇ ಬರುತ್ತಿದ್ದಾರೆ. ಹಾಗೆಯೇ ಕೆಲವು ತಮ್ಮ ಡಯಟ್ ಗೆಂದು ಸೌತೆಕಾಯಿ ತಿನ್ನುತ್ತಾರೆ. ಸೌತೆಕಾಯಿ ತಿನ್ನುವುದರಿಂದ ಒಳ್ಳೆಯದಾಗುತ್ತದೆ. ಕೆಲವೊಂದು ಕಾಯಿಲೆಗಳ ತಡೆಯಲು ಹಾಗೂ ಅದನ್ನು ನಿವಾರಿಸಲು ಇದು ತುಂಬಾ ಪರಿಣಾಮಕಾರಿ.
ಸೌತೆಕಾಯಿಯಲ್ಲಿ ಕಡಿಮೆ ಕ್ಯಾಲರಿ ಹಾಗೂ ಹೀರಿಕೊಳ್ಳುವ ನಾರಿನಾಂಶ ಹೆಚ್ಚಿದ್ದು, ಇದು ತೂಕ ಇಳಿಸುವವರಿಗೆ ತುಂಬಾ ಪರಿಣಾಮಕಾರಿಯಾಗಿದೆ.
ಸೌತೆಕಾಯಿಯಲ್ಲಿ ಅಧಿಕ ಜಲಾಂಶವಿದ್ದು, ಕಡಿಮೆ ಕ್ಯಾಲರಿಯನ್ನು ಒಳಗೊಂಡಿರುವುದರಿಂದ, ತೂಕ ನಷ್ಟವನ್ನು ಹೊಂದಲು ಬಯಸುವವರಿಗೆ ಸೌತೆಕಾಯಿಯು ವರದಾನ ವಾಗಿದೆ.
ಸೌತೆ ಕಾಯಿಯು ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ, ಕೀಲುಗಳ ಮತ್ತು ಸಂದುಗಳ ಬೇನೆಯಿಂದ (ಸಂಧಿವಾತ) ವಿಮುಕ್ತಿಗೊಳಿಸುತ್ತದೆ.
ಸೌತೆಕಾಯಿಯಲ್ಲಿ ಉನ್ನತ ಮಟ್ಟದ ಪೊಟಾಶಿಯಂ ಇದ್ದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ತುಂಬಾ ಪರಿಣಾಮಕಾರಿ.
ಬೇಸಿಗೆಯಲ್ಲಿ ಮಲಬದ್ದತೆ ಸಮಸ್ಯೆ ಅನೇಕರನ್ನು ಕಾಡುತ್ತದೆ. ಊರಿಯೂತ ಕಂಡು ಬಂದರೆ ಸೌತೆಕಾಯಿ ಸೇವಿಸಿ
ಬೆಳಿಗ್ಗೆ ಎದ್ದಾಗ ತಲೆನೋವಿದ್ದರೆ ಆಲಸ್ಯ ಕಂಡು ಬರುತ್ತಿದ್ದರೆ ರಾತ್ರಿ ಮಲಗುವ ಮುನ್ನ ಸೌತೆಕಾಯಿ ತಿನ್ನಿ.
ದೇಹಕ್ಕೆ ಬೇಕಾದ ನೀರಿನಂಶವನ್ನು ಸೌತೆಕಾಯಿ ಒದಗಿಸುತ್ತದೆ.