ಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಕ್ಟೀವ್ ಅಧ್ಯಕ್ಷ, ಡಿ.ಸೋಮಶೇಖರ್ ಮಂಡಿಮಠ್.
1 min readಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಡಿ.ಸೋಮಶೇಖರ್ ಮಂಡಿಮಠ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೆ ತಡೆ ಚಳ್ಳಕೆರೆ ಎ ಪಿ ಎಂ ಸಿ ತುಂಬಾ ಆಕ್ಟೀವ್ ಯಾಗಿದೆ. ಕಳೆದ ವಾರ ಅಧ್ಯಕ್ಷರಾಗಿ ಪದಗ್ರಹಣವಾದ ನಂತರ ಮೊದಲಬಾರಿಗೆ ಅಧಿಕಾರಿಗಳ ಸಭೆ ನಡೆಸಿ ನಂತರ ಚಳ್ಳಕೆರೆ ಎ.ಪಿ.ಎಂ.ಸಿ ವ್ಯಾಪ್ತಿಯ ವರ್ತಕರು, ಹಮಾಲಿ ಸಂಘದ ಮುಖಂಡರು, ರೈತ ಸಂಘದ ಮುಖಂಡರು, ತೂಕ ಸಂಘದ ವರ್ತಕರ ಸಭೆ ನಡೆಸಿ ಕುಂದುಕೊರತೆಗಳ ಬಗ್ಗೆ ಚರ್ಚಿಸಿ ಕೆಲ ಸಮಸ್ಯೆಗಳನ್ನು ಅವರಮಟ್ಟದಲ್ಲಿ ಅಧಿಕಾರಿಗಳ ಮುಖಾಂತರ ಬಗೆಯರಿಸಿದರು.
ಚಳ್ಳಕೆರೆ ಎ.ಪಿ.ಎಂ.ಸಿ ವತಿಯಿಂದ. ರೂ,50.00ಲಕ್ಷ ರೂಪಾಯಿಯ ಈ ಹಿಂದೆ ಲ್ಯಾಂಡ್ ಆರ್ಮಿ ಮುಖಾಂತರ ಗ್ರಾಮೀಣ ಸಂಪರ್ಕ ರಸ್ತೆಯನ್ನು ರೈತರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಲಾಗಿದ್ದು, ಎ.ಪಿ.ಎಂ.ಸಿ ಇಂಜಿನಿಯರ್ & ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಲ್ಯಾಂಡ್ ಆರ್ಮಿ ಎ.ಇ.ಇ. ಶಶಿಧರ್ ಸೇರಿದಂತೆ ಅಧಿಕಾರಿಗಳು ಭಾಗವಯಿಸಿದ್ದರು.
ಒಟ್ಟಿನಲ್ಲಿ ಚಳ್ಳಕೆರೆ ಎ.ಪಿ.ಎಂ.ಸಿ.ಗೆ ಒಬ್ಬ ದಕ್ಷ ಆಸಕ್ತಿಯುಳ್ಳ ಯುವಕರು ಆಯ್ಕೆಯಾಗಿದ್ದಾರೆಂಬುದು ರೈತರ ಬಾಯಲ್ಲಿ ಕೇಳಿ ಬರುತ್ತದೆ.