ಸೆ.05 ರಂದು ಶಿಕ್ಷಕರ ದಿನಾಚರಣೆ: ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ: ಡಿಡಿಪಿಐ ರವಿಶಂಕರರೆಡ್ಡಿ
1 min readಸೆ.05 ರಂದು ಶಿಕ್ಷಕರ ದಿನಾಚರಣೆ: ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ******ಚಿತ್ರದುರ್ಗ,ಸೆಪ್ಟೆಂಬರ್.04: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮದಿನೋತ್ಸವ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ 5 ರಂದು ಬೆಳಿಗ್ಗೆ 10.30 ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶೀರಾಮುಲು ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸುವರು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ಸಂಸದ ಎ.ನಾರಾಯಣಸ್ವಾಮಿ. ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್, ಎಂ ಚಂದ್ರಪ್ಪ, ಟಿ ರಘುಮೂರ್ತಿ, ಕೆ. ಪೂರ್ಣಿಮ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಟಿ. ರಘು ಆಚಾರ್, ವೈ.ಎ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ತ್ರಿವೇಣಿ ಶಿವಪ್ರಸಾದ್ ಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ ಲಿಂಗರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸಿ.ಶಾಂತಮ್ಮ ರೇವಣಸಿದ್ದಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆಯಾದರ ವಿವರ: ಫ್ರೌಢ ಶಾಲೆ ವಿಭಾಗ: ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಸರ್ಕಾರಿ ಫ್ರೌಢಶಾಲೆ ದೈಹಿಕ ಶಿಕ್ಷಕ ಬಿ.ಎಂ ಚನ್ನಬಸಪ್ಪ, ತಳಕು ಎಸ್.ಜಿ.ಟಿ ಫ್ರೌಢಶಾಲೆ ಸಹ ಶಿಕ್ಷಕ ಮೂರ್ತಾಚಾರ್, ದುಮ್ಮಿ ಅರೋಣೋದಯ ಫ್ರೌಢಶಾಲೆ ಆರ್.ಎಸ್ ರಾಜ ಕುಮಾರ್, ಕೆ.ಆರ್ ಹಳ್ಳಿ ಬಸವೇಶ್ವರ ವಸತಿ ಫ್ರೌಢಶಾಲೆ ಶಿಕ್ಷಕ ಎಸ್.ಶಿವಣ್ಣ, ಮೊಳಕಾಲ್ಮುರು ತಾಲ್ಲೂಕು ಬಿ.ಜಿ ಕೆರೆ ಕರ್ನಾಟಕ ಪಬ್ಲಿಕ್ ಶಾಲೆ ಶಿಕ್ಷಕಿ ಎಸ್ ಮಂಗಳ, ಹೊಸದುರ್ಗ ತಾಲ್ಲೂಕು ಬಾಗೂರು ಪರಪ್ಪಸ್ವಾಮಿ ಗ್ರಾಮಾಂತರ ಫ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಶೇಖರಪ್ಪ, ಹಿರಿಯೂರು ತಾಲ್ಲೂಕು ಅಂಬಲಗೆರೆ ಸರ್ಕಾರಿ ಫ್ರೌಢಶಾಲೆ ಚಿತ್ರಕಲಾ ಶಿಕ್ಷಕ ಕಸ್ತೂರಿ ರಂಗಪ್ಪ.ವಿಶೇಷ ಶಿಕ್ಷಕರ ಪ್ರಶಸ್ತಿ: ಹೊಸದುರ್ಗ ಸರ್ಕಾರಿ ಪದವಿ ಪೂರ್ವ ಕಾಲೇಜು ಫ್ರೌಢಶಾಲೆ ವಿಭಾಗ ಶಿಕ್ಷಕ ಆರ್. ಶಿವಶಂಕರ್, ಹಿರಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಚಿತ್ರಕಲಾ ಶಿಕ್ಷಕ ಗೋಪಿನಾಯ್ಕ, ಚಳ್ಳಕೆರೆ ಹೆಚ್.ಟಿಟಿ.ಜಿ.ಹೆಚ್.ಎಸ್ ಶಾಲೆ ದೈಹಿಕ ಶಿಕ್ಷಕ ಪ್ರಾಣೇಶ್, ಮೊಳಕಾಲ್ಮುರು ಶ್ರೀನಿವಾಸ ನಾಯಕ ಫ್ರಾಢಶಾಲೆ ಶಿಕ್ಷಕ ಡಿ.ವಿ ಕೃಷ್ಣಮೂರ್ತಿ.ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರುಮರಡಿಕೆರೆ ಶಿಕ್ಷಕ ಎಸ್.ಟಿ ರಂಗಸ್ವಾಮಿ, ಕಾಲುವೇಹಳ್ಳಿ ಶಾಲೆ ಶಿಕ್ಷಕ ಕೃಷ್ಣಮೂರ್ತಿ
, ಬೀರೇನಹಳ್ಳಿ ಶಾಲೆ ಮಖ್ಯ ಶಿಕ್ಷಕಿ ಟಿ. ಇಂದಿರಮ್ಮ, ಹೊಳಲ್ಕೆರೆ ತಾಲ್ಲೂಕು ತುಪ್ಪದಹಳ್ಳಿ ಶಾಲೆ ಶಿಕ್ಷಕಿ ಟಿ.ಬಿ ಅನಿತಾ, ಮೊಳಕಾಲ್ಮರು ಟೌನ್ ಕುರಾಕಲಹಟ್ಟಿ ಶಾಲೆ ಮುಖ್ಯ ಶಿಕ್ಷಕ ರೋಫ್ ಸಾಬ್, ಹೊಸದುರ್ಗ ತಾಲ್ಲೂಕು ಯಲ್ಲಾಭೋವಿಹಟ್ಟಿ ಶಾಲೆ ಶಿಕ್ಷಕ ಬಿ.ಪಿ ಸಂತೋಷ್.ಕಿರಿಯ ಪ್ರಾಥಮಿಕ ಶಾಲೆ ವಿಭಾಗ: ಚಿತ್ರದುರ್ಗ ತಾಲ್ಲೂಕು ಕಾಟೀಹಳ್ಳಿ ಶಾಲೆ ಶಿಕ್ಷಕ ತಿಪ್ಪೇಸ್ವಾಮಿ, ಚಳ್ಳಕೆರೆ ತಾಲ್ಲೂಕು ಅಜ್ಜನ ಹಳ್ಳಿ ಶಾಲೆ ಶಿಕ್ಷಕ ಟಿ.ಮಂಜಪ್ಪ, ಹಿರಿಯೂರು ಶಿವಪುರ ಶಾಲೆ ಶಿಕ್ಷಕಿ ಎಂ.ಸಿ ನಾಗರತ್ನ, ಹೊಸದುರ್ಗ ಹಳೇತಿಮ್ಮನಹಟ್ಟಿ ಶಿಕ್ಷಕಿ ಭಾಗ್ಯಮ್ಮ, ಹೊಳಲ್ಕೆರೆ ಶಿವಲಿಂಗಪ್ಪ ನಗರ ಶಾಲೆ ಶಿಕ್ಷಕ ಮಹೇಂದ್ರಪ್ಪ, ಮೊಳಕಾಲ್ಮುರು ಹಳೇದಡಗೂರು ಶಾಲೆ ಶಿಕ್ಷಕ ಬಿ.ಎಲ್ ಪರಮೇಶ್ವರಪ್ಪ. ವಿಶೇಷ ಶಿಕ್ಷಕರ ಪ್ರಶಸ್ತಿ: ಚಿತ್ರದುರ್ಗ ಸಿರಿಗೆರೆ ಸಿದ್ದಾಪುರ ಶಾಲೆ ಶಿಕ್ಷಕ ವಸಂತಕುಮಾರ್ ಹಾಗೂ ಚಳ್ಳಕೆರೆ ತಿಮ್ಮಣ್ಣಹಳ್ಳಿ ಶಾಲೆ ಶಿಕ್ಷಕಿ ಭಾಗ್ಯಮ್ಮ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಗೆ ಆಯ್ಕೆಯಾದ ಎಲ್ಲ ಶಿಕ್ಷಕರಿಗೆ ತರಾಸು ರಂಗಮಂದಿರದಲ್ಲಿ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ತಿಳಿಸಿದ್ದಾರೆ.