ಗಾಂಜಾ ಮಾರಟ ಮಾಡುತ್ತಿದ್ದ 6 ಆರೋಪಿಗಳು ಅಂದರ್
1 min readಧಾರವಾಡ : ಗಾಂಜಾ ಮಾರಾಟ ಮಾಡುತ್ತಿದ್ದ 6 ಜನ ಆರೋಪಿಗಳನ್ನು ಧಾರವಾಡ ಶಹರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಕೃಷ್ಣಕಾಂತ ತಿಳಿಸಿದರು.
ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಆರೋಪಿಗಳು ಶಹರದನುಚ್ಚಂಬ್ಲಿ ಬಾವಿ ಹತ್ತಿರ ಕಾರು ಮತ್ತು ಬೈಕ್‌ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಮದಾರಮಡ್ಡಿ ಜೈಭೀಮನಗರದ ಪೃಥ್ವಿ ಗಿರೀಶ ಕೊಂಡಪಲ್ಲಿ, ಲೈನ ಬಜಾರ್ ಸೌದಾಗರ ಚಾಳನ ಸತ್ಕಾರ ಗೋವಿಂದ ಮಾಡಲಗಿ, ರಸೂಲಪೂರ ಓಣಿಯ ಜಾವೀದಅಹ್ಮದ ಮಹ್ಮದಯೂಸೂಫ್ ಬದಾಮಿ, ನಿಜಾಮುದ್ದಿನ ಕಾಲನಿಯ ಮೆಹಬೂಬಸಾಬ ಉರ್ಫ್ ಶಬ್ಬೀರಖಾನ ಅಮೀರಖಾನ ಪಠಾಣ, ಲೈನಬಜಾರ ಮಸಾಲಗಾರ ಓಣಿಯ ಮಹ್ಮದಸಾಧಿಕ ಬಸೀರ ಖತೀಬ ಮತ್ತು ಅತ್ತಿಕೊಳ್ಳದ ಅಬ್ದುಲಖಾದರಸಾಬ ಕರೀಂಸಾಬ ಡಾವಣಗೆರೆ ಬಂಧಿತರು.
ಆರೋಪಿ ನವಲೂರ ಗ್ರಾಮದ ರಾಜೇಸಾಬ ಫಕ್ರುಸಾಬ ಹಂಚಿನಾಳ ಪರಾರಿಯಾಗಿದ್ದಾನೆ.
ಬಂಧಿತರಿಂದ೬೨ಸಾವಿರರೂಪಾಯಿಮೌಲ್ಯದ೩ಕೆ.ಜಿ. ೧೦೦ಗ್ರಾಂಗಾಂಜಾ, ೭ಲಕ್ಷರೂಪಾಯಿಬೆಲೆಯ೧ಕಾರು, ೭೫ಸಾವಿರರೂಪಾಯಿಮೌಲ್ಯದ೧ಬೈಕ್ಆರೋಪಿಗಳಿಂದಮತ್ತು೫ಮೋಬೈಲ್ಗಳನ್ನುಜಪ್ತಿಮಾಡಲಾಗಿದೆಎಂದರು.
ಬಂಧಿತರನ್ನುನ್ಯಾಯಾಲಯಕ್ಕೆಒಪ್ಪಿಸಿದ್ದು, ಆರೋಪಿಗಳುಎಲ್ಲಿಂದಗಾಂಜಾಖರೀದಿಸುತ್ತಿದ್ದರುಮತ್ತುಇನ್ನಿತರಅಂಶಗಳಕುರಿತುತನಿಖೆಮುಂದುವರೆಸಲಾಗುವುದುಎಂದುಡಿಸಿಪಿತಿಳಿಸಿದರು.
ಎಸಿಪಿಅನುಷಾಜಿ, ಶಹರಠಾಣೆಯಇನ್ಸಪೆಕ್ಟರ್ಶ್ರೀಧರಸತಾರೆ, ಎಎಸ್ಐಗಳಾದಮಹೇಶ ಕುರ್ತಕೋಟಿ, ಶಿವಾಜಿ ಸಾಳುಂಕೆ, ಸಿಬ್ಬಂದಿಗಳಾದಎನ್.ಓ.ಜಾಧವ, ಯು.ಎನ್.ಸಣ್ಣಿಂಗನವರ, ಪ್ರತಾಪಮಳಗಿ, ಎಂ.ಎನ್.ಚವ್ಹಾಣ, ಲಕ್ಷ್ಮಣಲಮಾಣಿಆರೋಪಿಗಳನ್ನುಬಂಧಿಸುವಲ್ಲಿಯಶಸ್ವಿಯಾಗಿದ್ದಾರೆಎಂದುಅವರುತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಧಾರವಾಡ ಎಸಿಪಿಅನುಷಾಜಿ, ಶಹರಠಾಣೆಯಇನ್ಸಪೆಕ್ಟರ್ಶ್ರೀಧರಸತಾರೆ ಹಾಗೂ ಸಿಬ್ಬಂದಿಉಪಸ್ಥಿತರಿದ್ದರು.