ವಿದ್ಯುತ್ ವ್ಯತ್ಯಯ ನಿಮ್ಮ ಊರಲ್ಲಿ ನಾಳೆ ಕರೆಂಟ್ ಇರತ್ತಾ ಇಂದೇ ನೋಡಿಕೊಳ್ಳಿ.
1 min read
ಚಿತ್ರದುರ್ಗ,ಸೆಪ್ಟೆಂಬರ್07:
ಚಿತ್ರದುರ್ಗ ನಗರ ಉಪವಿಭಾಗ ಕಾರ್ಯ ಮ್ತು ಪಾಲನ ಘಟಕ-3ರ ವ್ಯಾಪ್ತಿಯಲ್ಲಿ 220 ಕೆ.ವಿ. ಮಾರ್ಗದ ಎಕಪ್ರಸರಣ ಮಾರ್ಗ ತೆಗೆದು ಜೋಡಿ ಪ್ರಸರಣಾ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, 220 ಕೆ.ವಿ. ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಸಲ್ಪಡುವ ಎಫ್-1 ಕಾಪರ್‍ಮೈನ್ಸ್, ಎಫ್-7 ಪಲ್ಲವಗೆರೆ ಹಾಗೂ ಎಫ್-13 ಕೆನ್ನೆಡಲು ಈ ಮಾರ್ಗಗಳ ಪ್ರದೇಶಗಳಲ್ಲಿ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ನಿಲುಗಡೆಗೊಳಿಸುವ ಗ್ರಾಮಗಳು: ಚಿತ್ರದುರ್ಗ ನಗರ ಉಪವಿಭಾಗದ ಘಟಕ-3ರ ಗ್ರಾಮೀಣ ಪ್ರದೇಶದ ವ್ಯಾಪ್ತಿಯ ಡಿ.ಎಸ್.ಹಳ್ಳಿ, ಜೆ.ಎನ್.ಕೋಟೆ, ಸಜ್ಜನಕೆರೆ, ಕ್ಯಾದಿಗೆರೆ, ಪಲ್ಲವಗೆರೆ, ಇಂಗಳದಾಳ್, ಕುರುಮರಡಿಕೆರೆ, ಇಂಗಳದಾಳ್ ಲಂಬಾಣಿಹಟ್ಟಿ, ಕೆನ್ನೆಡಲು, ಕೆನ್ನೆಡಲು ಬಾಪೂಜಿ ಕಾಲೋನಿ, ಗ್ರಾಮಗಳ ಎನ್‍ಜೆವೈ ಹಾಗೂ ಐಪಿಫೀಡರ್‍ಗಳಲ್ಲಿ ಹೊಂದಿಕೊಂಡ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ತಿಮ್ಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ