ಮಹಾಶಕ್ತಿ ಕೇಂದ್ರ ಘಟಕದ ಅಧ್ಯಕ್ಷರಾಗಿ ಕೆ.ವಿ.ಮುರುಳಿದರ ಆಯ್ಕೆ.
1 min readಹೊಸದುರ್ಗ : ಮಹಾ ಶಕ್ತಿಕೇಂದ್ರ ಘಟಕದ ಅಧ್ಯಕ್ಷರಾಗಿ ಕೆ.ವಿ.ಮುರುಳಿದರ ಹಾಗೂ ಶಕ್ತಿ ಕೇಂದ್ರ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಇ.ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ.
ಬಾಗೂರಿಗೆ ಮಧುರೆ ಪ್ರವೀಣ್, ಶ್ರೀರಾಂಪುರಕ್ಕೆ ರಾಘು, ಬೆಲಗೂರಿಗೆ ಪ್ರಸನ್ನ, ಮತ್ತೋಡಿಗೆ ಮಹೇಶ್ ಅಗಸರಹಳ್ಳಿ, ಮಾಡದಕೆರೆಗೆ ಮಂಜು ಹಾಗೂ ಬೋಕಿಕೆರೆಗೆ ನಾಗರಾಜು ಕಂಗುವಳ್ಳಿ ಇವರುಗಳನ್ನು ಗ್ರಾಮೀಣ ಭಾಗದ ಮಹಾ ಶಕ್ತಿ ಅದ್ಯಕ್ಷರುಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಕ್ಷ ಸಂಘಟನೆ ಮಾಡಲು ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್ ಅವರು ತಿಳಿಸಿದ್ದಾರೆ.