ಪೋಲಿಸರ ಖಡಕ್ ಕಾರ್ಯಚರಣೆ, ಲಕ್ಷಾಂತರ ಮೌಲ್ಯದ ಚಿನ್ನ, ಕಾರು ಜಪ್ತಿ ಕಳ್ಳರು ಪೋಲಿಸರ ಅತಿಥಿ.
1 min readಚಿತ್ರದುರ್ಗ:
ಬೈಕ್ ಕಳ್ಳತನ, ಮನೆಗಳ್ಳತನ ಮಾಡುತ್ತಿದ್ದ ಐದುಮಂದಿ ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಎಸ್ಪಿ ಮಾರ್ಗದರ್ಶನದಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧಿಸಿದ್ದಾರೆ.
ಜಿಲ್ಲೆಯಲ್ಲಿ ಹಲವೆಡೆ ಮನೆಗಳ್ಳತನ ಮಾಡಿದ್ದ ಇಬ್ಬರೂ ಆರೋಪಿಗಳಾದ ಅನಂತಪುರ ಜಿಲ್ಲೆಯ ಕದರಿ ನಗರ ನಿವಾಸಿ ಧನು ಅಲಿಯಸ್ ಧನಂಜಯ, ಚಿಕ್ಕಬಳ್ಳಾಪುರ ನಿವಾಸಿ ಮೋಹನ್ ಬಂಧಿತ ಆರೋಪಿಗಳು.
ಆರೋಪಿಗಳಿಂದ 372 ಗ್ರಾಂ ಚಿನ್ನ, 210 ಬೆಳ್ಳಿ ಚಿನ್ನಾಭರಣ ವಶ ಪಡಿಸಿಕೊಂಡಿದ್ದು ಒಟ್ಟು 18 ಲಕ್ಷ 75 ಸಾವಿರ ಮೌಲ್ಯದಾಗಿದೆ. ಇವರು 9 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ತುಮಕೂರು, ಚಿತ್ರದುರ್ಗ ಸೇರಿ ವಿವಿಧೆಡೆ ಕಳವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ.
ಹಿರಿಯೂರು ನಗರದ ಪೊಲೀಸರ ಕಾರ್ಯಾಚರಣೆಯಿಂದ ಓರ್ವ ಬೈಕ್ ಕಳ್ಳನ ಬಂಧಿಸಲಾಯಿತು.
ಕಾಸಿಂ ಅಲಿ ಅಲಿಯಸ್ ಅಲಿ ಚಿತ್ರದುರ್ಗದ ಸೀಬಾರ ನಿವಾಸಿಯಾಗಿದ್ದಾನೆ.
ಐದು ಮೋಟರ್ ಬೈಕ್ ವಶಕ್ಕೆ ಪೊಲೀಸರು ಪಡೆದಿದ್ದಾರೆ.
ಚಿತ್ರದುರ್ಗ, ಹಿರಿಯೂರು ನಗರದಲ್ಲಿ ಕಳವು ಮಾಡಿದ್ದ ಬೈಕ್ ಗಳು.
01 ಲಕ್ಷ 15 ಸಾವಿರ ಮೌಲ್ಯದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಚಿತ್ರದುರ್ಗ ಕೋಟೆ ಪೊಲೀಸರ ಕಾರ್ಯಾಚರಣೆ ಮಾಡಿ ಓರ್ವ ಬೈಕ್ ಕಳ್ಳನನ್ನು ಕೋಟೆ ಪೊಲೀಸರು ಬಂಧಿಸಿದ್ದಾರೆ.
ರೈಲ್ವೆ ಸ್ಟೇಷನ್ ಬಡಾವಣೆ ನಿವಾಸಿ ಕಿಶನ್ ಅಲಿಯಸ್ ರೀಯಾಜ್ ಅಹಮದ್ ಬಂಧಿತ ಆರೋಪಿ.
ಬಂಧಿತನಿಂದ 88 ಸಾವಿರ ಮೌಲ್ಯದ ರಾಯಲ್ ಎನ್ ಪಿಲ್ಡ್ ವಶಕ್ಕೆ ಪಡೆಯಲಾಗಿದೆ.
ಇದಲ್ಲದೆ ಎಟಿಎಂನಲ್ಲಿ ವಂಚನೆ ಮಾಡಿದ್ದ ಆರೋಪಿ ಕೃಷ್ಣಮೂರ್ತಿ (42) ಬಂಧಿಸಲಾಗಿದೆ.
ಅನಂತಪುರ ಜಿಲ್ಲೆಯ ಕಣೆಕಲ್ ನಿವಾಸಿ.
ಎಟಿಎಂ ಕಾರ್ಡ್ ಬದಲಿಸಿ ವಂಚಿಸುತ್ತಿದ್ದ ಆರೋಪಿ.
1 ಲಕ್ಷ 85 ಸಾವಿರ ಹಣ, 41 ಗ್ರಾಂ ಬಂಗಾರದ ನಾಣ್ಯ, ಒಂದು ಕಾರು ವಶಕ್ಕೆ ಪಡೆದು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೋಲೀಸ್ ನವರು ಎಸ್ಪಿ ರಾಧಿಕಾ ಅವರ ಮಾರ್ಗ ದರ್ಶನದಲ್ಲಿ ಚಿತ್ರದುರ್ಗ ಕೋಟೆ ಹಾಗೂ ಹಿರಿಯೂರಿನಲ್ಲಿ ಕಳ್ಳರನ್ನು ಬಂದಿಸಿ ಅವರಿಂದ ಬಂಗಾರ ಕಾರು, ಹಾಗೂ ಬೈಕ್ ಗಳನ್ನು ವಶಪಡಿಸಿಕೊಂಡ್ಡಿರುತ್ತಾರೆ.