September 17, 2024

Chitradurga hoysala

Kannada news portal

ಕಾರ್ಯಕರ್ತರುಗಳನ್ನು ಸದೃಢಗೊಳಿಸಿ ಪಕ್ಷ ಸಂಘಟಿಸುವುದೇ ನನ್ನ ದ್ಯೇಯೋದ್ದೇಶ: ಡಿ.ಟಿ.ಶ್ರೀನಿವಾಸ್.

1 min read

ಹಿರಿಯೂರು: ಹಿರಿಯೂರು ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತರಲು ಕಾರಣಕರ್ತರಾದ ಅಸಂಖ್ಯ ಕಾರ್ಯಕರ್ತರುಗಳನ್ನು ಸದೃಢಗೊಳಿಸಿ ಪಕ್ಷ ಸಂಘಟಿಸುವುದೇ ನನ್ನ ದ್ಯೇಯೋದ್ದೇಶವಾಗಿದೆ ಎಂದು ರಾಜ್ಯ ಬಿಜೆಪಿ ನಾಯಕ ಶ್ರೀಯುತ ಡಿ.ಟಿ.ಶ್ರೀನಿವಾಸ್ ಹೇಳಿದರು.
ಆವರು ಇಂದು ಶಾಸಕರ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೊರೊನಾ ಕಾರಣದ ಕಾರಣಕ್ಕೆ ಯಾವುದೇ ಕಾರ್ಯಕರ್ತರ ಸಭೆ ನಡೆಸಲು ಸಾದ್ಯವಾಗಿಲ್ಲ ಆದರೇ ಆ ಸಂದರ್ಭದಲ್ಲಿ ಪಕ್ಷ ನೀಡಿದ ಎಲ್ಲಾ ಚಟುವಟಿಕೆಗಳನ್ನು ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ನೇತೃತ್ವದಲ್ಲಿ ನಡೆಸಲಾಗಿದೆ ” ಎಂದರು. ಕೊರೊನಾ ಸಂಕಷ್ಟಕ್ಕೆ ಈಡಾದ ತಾಲ್ಲೂಕಿನ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ನೆರವಿನ ಕಾರ್ಯಕ್ರಮಗಳನ್ನು ತಲುಪಿಸಲಾಗಿದೆ, ಕಾರ್ಯಕರ್ತರುಗಳಿಗೆ ಆತ್ಮವಿಶ್ವಾಸ ತುಂಬಿ ಕೊರೊನಾ ಸಮಯದಲ್ಲಿ ಜನತೆಯ ಸೇವೆ ಮಾಡಲು ಜೊತೆ ಕರೆದುಕೊಂಡು ಹೋಗುವಂತೆ ಮಾಡಲಾಗಿದೆ ” ಎಂದರು.
“ತಾಲ್ಲೂಕು ಎಂದೂ ಕಾಣದ ಅಭಿವೃದ್ಧಿಯನ್ನು ಈ ಅವಧಿಯಲ್ಲಿ ಕಂಡಿದ್ದು, ವಿವಿಸಾಗರಕ್ಕೆ ನೀರು ಹರಿಸುವ ಜವಾಬ್ದಾರಿ ಹಾಗೂ ಆ ಮೂಲಕ ಧರ್ಮಪುರ ಭಾಗದ ಕಟ್ಟ ಕಡೆಯ ಹಳ್ಳಿಗಳಿಗೂ ನೀರು ತಲುಪಿಸುವ ಯೋಜನೆ ಸಾಕಾರಗೊಳ್ಳಲಿದೆ ಕಾರ್ಯಕರ್ತರು ವಿರೋಧಿಗಳ ಬಾಯಿ ಮುಚ್ಚಿಸುವಂತ ಅನೇಕ ಕಾರ್ಯಕ್ರಮಗಳು ನಮ್ಮ ಅವಧಿಯಲ್ಲಿ ನಡೆದಿರುವುದು ಹೆಮ್ಮೆ ಇಂದ ಹೇಳಿಕೊಳ್ಳಬಹುದು ” ಎಂದರು.
ಕಾರ್ಯಕರ್ತರುಗಳಿಗೆ ಭವಿಷ್ಯದ ದಿನಗಳಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿ, ಅವಕಾಶ ಪಕ್ಷದಲ್ಲಿ ದೊರೆಯಲಿದ್ದು ಯಾರೂ ದೃತಿಗೆಡಬಾರದು ಹಾಗೂ ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿರಬೇಕು ” ಎಂದರು.
ಬಿಜೆಪಿ ಹಿರಿಯ ಮುಖಂಡ ಎಂ.ಎಸ್.ರಾಘವೇಂದ್ರ ಮಾತನಾಡಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಡಿ.ಟಿ.ಶ್ರೀನಿವಾಸ್ ನೇತೃತ್ವದಲ್ಲಿ ಕೊರೊನಾ ಸಂದರ್ಭದಲ್ಲಿ ಜನತೆಗೆ ಅನೇಕ ಸಹಾಯಕ ಕಾರ್ಯಕ್ರಮಗಳನ್ನು ಆಯೋಜಿಸಿ ಆ ಮೂಲಕ ಬಿಜೆಪಿ ಗೆ ಒಳ್ಳೆಯ ಹೆಸರು ಬರಲು ಕಾರಣರಾಗಿದ್ದಾರೆ, ಮುಂಬರುವ ದಿನಗಳಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಎಲ್ಲರೂ ಕೈಜೋಡಿಸಿ ಸಂಘಟನೆಯಲ್ಲಿ ತೊಡಗಬೇಕು ” ಎಂದರು.
ಬಿಜೆಪಿ ಮಾಜಿ ಅದ್ಯಕ್ಷ ದ್ಯಾಮೇಗೌಡ ಮಾತನಾಡಿ, ಪಕ್ಷದ ಜವಾಬ್ದಾರಿ ಹೊರಲು ಅನೇಕರಿಗೆ ಎಲ್ಲಾ ರೀತಿಯ ಅರ್ಹತೆ ಇದೆ, ಆದರೇ ಪಕ್ಷದಲ್ಲಿ ಪದಾಧಿಕಾರಿಗಳಾಗಲು ಕೆಲವರಿಗೆ ಮಾತ್ರ ಅವಕಾಶ ಇರುವ ಕಾರಣ ಉಳಿದವರು ನಿರಾಶರಾಗಬಾರದು, ಎಲ್ಲರಿಗೂ, ಎಲ್ಲಾ ರೀತಿಯ ಅವಕಾಶ ಮತ್ತು ಜವಾಬ್ದಾರಿ ಸಿಗುವುದು ಅಷ್ಟೇ ಸತ್ಯ, ಏಕೆಂದರೆ ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಕೇಶವ ಮೂರ್ತಿ, ಹೆಚ್. ಆರ್. ತಿಮ್ಮಯ್ಯ, ಮಾಜಿ ನಗರಸಭೆ ಅಧ್ಯಕ್ಷ ಚಂದ್ರಶೇಖರ್, ಗಾಂಧಿನಗರ ಲಕ್ಷೀಪತಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಕರಿಯಪ್ಪ, ಬಿಕೆ ಉಗ್ರಮೂರ್ತಿ, ಮಾಜಿ ಬಿಜೆಪಿ ಅಧ್ಯಕ್ಷರಾದ ಎಂ.ವಿ. ಹರ್ಷ, ಜಿಪಂ ಸದಸ್ಯೆ ರಾಜೇಶ್ವರಿ, ತಾಪಂ ಸದಸ್ಯ ಜಯರಾಮಯ್ಯ, ಡಿಶ್ ಮಂಜಣ್ಣ, ಚಿರಂಜೀವಿ, ತಿಮ್ಮರಾಜು, ಬಾಲಕೃಷ್ಣ, ರಂಗಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ನಟರಾಜ್, ಶೋಭಾ, ಅಂಬಿಕಾ, ನಾಗರಾಜರಾವ್, ಡಿ. ಗಂಗಾಧರ್, ರಾಮಕೃಷ್ಣ, ತಿಮ್ಮರಾಜ ಯಾದವ, ಕೆ.ಪಿ. ಶ್ರೀನಿವಾಸ್, ಮಲಿಕ್ ಸಾಬ್, ಶಫೀರ್ ಮುಂತಾದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *