October 16, 2024

Chitradurga hoysala

Kannada news portal

ಸೆ.13ರಂದು ವಿದ್ಯುತ್ ವ್ಯತ್ಯಯ ನಿಮ್ಮ ಊರಲ್ಲಿ ಪವರ್ ಕಟ್ ಆಗುತ್ತ?

1 min read


ಚಿತ್ರದುರ್ಗ, ಸೆಪ್ಟೆಂಬರ್11:
 ಚಿತ್ರದುರ್ಗ ನಗರ ಉಪವಿಭಾಗ ಕಾರ್ಯ ಮತ್ತು ಪಾಲನೆ ಘಟಕ-3ರ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರ 220 ಕೆವಿಎ ವಿದ್ಯುತ್ ಎಕ ಪ್ರಸರಣ ಮಾರ್ಗವನ್ನು ತೆಗೆದು ಜೋಡಿ ಪ್ರಸರಣ ಮಾರ್ಗ ನಿರ್ಮಾಣದ ಕಾಮಗಾರಿ ನಡೆಯುವುದರಿಂದ ಎಫ್-1 ಕಾಪರಮೈನ್ಸ್ ನಿರಂತರ ಜ್ಯೋತಿ, ಎಫ್-2 ಕ್ಯಾದಿಗೆರೆ, ಎಫ್-7 ಪಲ್ಲವಗೆರೆ ಈ ಪ್ರದೇಶಗಳಲ್ಲಿ ಸೆಪ್ಟೆಂಬರ್ 13ರಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
 ವಿದ್ಯುತ್ ನಿಲುಗಡೆಗೊಳಿಸುವ ಗ್ರಾಮಗಳು: ಡಿ.ಎಸ್.ಹಳ್ಳಿ, ಕ್ಯಾದಿಗೆರೆ, ಒರಗುಂಟನಮಾಳಿಗೆ, ಎಣ್ಣೆಗೆರೆ, ಜೆ.ಎನ್.ಕೋಟೆ, ಕಳ್ಳಿರೋಪ್ಪ, ಜೋಡಿಚಿಕ್ಕೇನಹಳ್ಳಿ, ಸಜ್ಜನಕೆರೆ, ಪಲ್ಲವಗೆರೆ, ಕುಂಚಿಗನಾಳ್, ಇಂಗಳದಾಳ್, ಕುರುಮರಡಿಕೆರೆ, ಕೆನ್ನಡಲು, ಬಾಪೂಜಿ ಕಾಲೋನಿ ಗ್ರಾಮಗಳ ನಿರಂತರ ಜ್ಯೋತಿ ಹಾಗೂ ಐಪಿ ಪೀಡರ್‍ಗಳ ಪ್ರದೇಶಗಳ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ

About The Author

Leave a Reply

Your email address will not be published. Required fields are marked *