September 17, 2024

Chitradurga hoysala

Kannada news portal

ಅಧಿವೇಶನದ ಒಳಗಾಗಿ 7.5 % ಮೀಸಲಾತಿ ನೀಡದಿದ್ದರೆ ರಾಜ್ಯಾದ್ಯಂತ ವಾಲ್ಮೀಕಿ ಶ್ರೀ ಸಾರಥ್ಯದಲ್ಲಿ ಹೋರಟ: ತುಂಬಿನಕೆರೆ ಬಸವರಾಜ್

1 min read

ಹೊಸದುರ್ಗ:ವಿಧಾನಸಭಾ ಅಧಿವೇಶನದಲ್ಲಿ ಶೇಕಡಾ 7.5 ಮೀಸಲಾತಿಯನ್ನ ಅನುಷ್ಠಾನಗೊಳಿಸದಿದ್ದರೆ ರಾಜ್ಯದಾದ್ಯಂತ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಉಗ್ರವಾದ ಹೋರಾಟವನ್ನು ನಡೆಸಲಾಗುವುದು ಎಂದು ಹೊಸದುರ್ಗ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ತುಂಬಿನಕೆರೆ ಬಸವರಾಜ್ ಹೇಳಿದರು.

ಪಟ್ಟಣದ ತಾಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು ಕಳೆದ 40 ವರ್ಷಗಳಿಂದ ವಾಲ್ಮೀಕಿ ಸಮುದಾಯ ತಮ್ಮ ಮೀಸಲಾತಿಗಾಗಿ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದು ಜನಪ್ರತಿನಿಧಿಗಳು ಗಳು ತಮ್ಮ ಇಚ್ಛಾಶಕ್ತಿಯನ್ನು ತೋರಿಸುತ್ತಿಲ್ಲ .
ಈ ನಾಡಿನಲ್ಲಿ ದುರಂತವೆಂದರೆ ನಮ್ಮ ಮೀಸಲಾತಿಗಾಗಿ ನಾವು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಬೀದಿಗೆ ಬರುವ ಅನಿವಾರ್ಯತೆ ಎದುರಾಗಿದ್ದು, ಎಷ್ಟು ಹೋರಾಟ ಮಾಡಿದರು ಜಾಣಕುರುಡು ತೋರಿಸುತ್ತಿದ್ದಾರೆ.
ವಾಲ್ಮೀಕಿ ಸಂಸ್ಥಾನ ಮಠದ ಪೂಜ್ಯ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಒಂದು ಕರೆ ನೀಡಿದರೆ ಇಡೀ ರಾಜ್ಯದಲ್ಲಿಯೇ ವಾಲ್ಮೀಕಿ ಸಮುದಾಯ ಕ್ಷಣಮಾತ್ರದಲ್ಲಿ ಎಂತಹ ಹೋರಾಟವನ್ನಾದರೂ ಮಾಡಬಲ್ಲವು,
ಮಾನ್ಯ ಮುಖ್ಯಮಂತ್ರಿಯವರು ಮುಂಬರುವ ಅಧಿವೇಶನದಲ್ಲಿ 7.5 ಮೀಸಲಾತಿ ಕೊಡುತ್ತಾರೆ ಎಂಬ ವಿಶ್ವಾಸದಿಂದ ಮೊನ್ನೆ ವಾಲ್ಮೀಕಿ ಮಠದಲ್ಲಿ ನಡೆದರಾಜ್ಯ ವಾಲ್ಮೀಕಿ ಸಮುದಾಯದಲ್ಲಿ ನಮ್ಮ ಸಮುದಾಯದ ಸಚಿವರಾದ ಶ್ರೀರಾಮುಲು ಮತ್ತು ನಮ್ಮ ನಾಯಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ರವರ, ನೇತೃತ್ವದಲ್ಲಿ ರಾಜ್ಯದ 17 ಜನ ಶಾಸಕರು ಎರಡು ಜನ ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರು ಎಲ್ಲರೂ ಒಟ್ಟಾಗಿ ಹೋರಾಟದಲ್ಲಿ ಪಾಲ್ಗೊಂಡು ಮೀಸಲಾತಿಯನ್ನು ಎಸ್ಟಿ ಸಮುದಾಯಕ್ಕೆ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸ್ವತಂತ್ರ ಪೂರ್ವದಲ್ಲಿ ಈ ನಾಡಿಗಾಗಿ ಅರ್ಪಣೆ ಯಾದವರು ಹಲಗಲಿ ಬೇಡರು,
ಕೋಟೆಕೊತ್ತಲಗಳು ಮಹಾಸಂಸ್ಥಾನ ಗಳನ್ನ ಆಳ್ವಿಕೆ ನಡೆಸುತ್ತಿದ್ದ ವಾಲ್ಮೀಕಿ ಸಮುದಾಯದ ನಮ್ಮ ಮಕ್ಕಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಡರು ಎಂದರೆ ನಾವು ಯಾರಿಂದಲೂ ಏನನ್ನು ಬೇಡಿದವರಲ್ಲ. ಮೀಸಲಾತಿಗಾಗಿ ಹಗಲಿರುಳೆನ್ನದೆ ಕಾಲಿಗೆ ಬೊಬ್ಬೆ ಬಂದು ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ವಾಲ್ಮೀಕಿ ಸ್ವಾಮೀಜಿಗಳು 380 ಕಿಲೋಮೀಟರ್ ದೂರ ಪಾದಯಾತ್ರೆ ಮಾಡಿದರು ಈ ಸಮುದಾಯಕ್ಕೆ ಮೀಸಲಾತಿ ಯನ್ನು ನೀಡುತ್ತಿಲ್ಲ. ಸಮುದಾಯಕ್ಕೆ ವಾಲ್ಮೀಕಿ ಸಮುದಾಯಕ್ಕೆ ಸಂಬಂಧಿಸಿದಂತೆ ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಶ್ರೀಮಠದ ಪ್ರಸನ್ನಾನಂದಪುರಿ ಶ್ರೀಗಳು ಕರೆ ನೀಡಿದರೆ ಸಂವಿಧಾನಾತ್ಮಕವಾಗಿ ನ್ಯಾಯಬದ್ಧ ಹಕ್ಕನ್ನು ಪಡೆಯಲು ನಾವು ಎಂತಹ ಹೋರಾಟಗಾರರು ಸಿದ್ಧರಿರುತ್ತೇವೆ ಎಂದರು.

ವಾಲ್ಮೀಕಿ ಸಮಾಜದ ಮಾಜಿ ಅಧ್ಯಕ್ಷ ಗೌಡರ ರುದ್ರಪ್ಪ, ಸಮಾಜದ ಪ್ರಧಾನ ಕಾರ್ಯದರ್ಶಿ ರಂಗನಾಥ್ ವೆಂಗಳಪುರ ,ಕೆಂಚಪ್ಪನಾಯಕ ತಿಪ್ಪೇಸ್ವಾಮಿ, ಹೊನ್ನೇನಹಳ್ಳಿ ರಂಗಪ್ಪ ಪವಿತ್ರ ನಾಗರಾಜ್, ಪಲ್ಲವಿ ಸಂತೋಷ್, ಲಕ್ಕಿಹಳ್ಳಿ ನಾಗರಾಜ್ ಸಿದ್ದೇಶ್ ,ಮಂಜುನಾಥ್ ಬಸವರಾಜ್,

About The Author

Leave a Reply

Your email address will not be published. Required fields are marked *