ಅಧಿವೇಶನ ಮುಗಿಯುವುದರೊಳಗೆ 7.5% ಮೀಸಲಾತಿಯ ಹೆಚ್ಚಿಸದಿದ್ದರೆ ಉಗ್ರ ಹೋರಟ:ಜಿಲ್ಲಾ ನಾಯಕ ಸಮಾಜ ಎಚ್ಚರಿಕೆ
1 min readಚಿತ್ರದುರ್ಗ: ವಿಧಾನಸಭೆ ಅಧಿವೇಶನ ಮುಗಿಯುವುದರೊಳಗೆ ನಾಯಕ ಸಮಾಜಕ್ಕೆ ಶೇ.೭.೫ ರಷ್ಟು ಮೀಸಲಾತಿ ಕೊಡದಿದ್ದರೆ ಮುಂದೆ ಸ್ವಾಮೀಜಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವುಗಳು ಹೋರಾಡಲು ಬದ್ದರಾಗಿದ್ದೇವೆಂದು ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜಕೀಯದಲ್ಲಿ ಮೀಸಲಾತಿ ನೀಡಲಾಗಿದೆ. ಅದರಂತೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಜನ ಸಂಖ್ಯೆಗನುಗುಣವಾಗಿ ಶೇ.೭.೫ ರಷ್ಟು ಮೀಸಲಾತಿ ಕಲ್ಪಿಸುವಂತೆ ಅನೇಕ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದರೂ ಇನ್ನು ನಮ್ಮ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸದೆ ಜನಾಂಗವನ್ನು ಕೆರಳಿಸುತ್ತಿದೆ. ರಾಜ್ಯದ ೨೨೪ ಕ್ಷೇತ್ರಗಳ ಪೈಕಿ ೧೨೪ ಕ್ಷೇತ್ರಗಳಲ್ಲಿ ನಾಯಕ ಸಮಾಜ ಎಲ್ಲಾ ಚುನಾವಣೆಗಳಲ್ಲಿ ನಿರ್ಣಾಯ ಪಾತ್ರ ವಹಿಸುತ್ತಿದೆ. ಸಚಿವರು, ಶಾಸಕರು, ನಮ್ಮ ಸಮಾಜದ ಮುಖಂಡರುಗಳು, ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ. ಸೆ.೨೧ ರವರೆಗೆ ರಾಜ್ಯ ಸರ್ಕಾರ ಕಾಲಾವಕಾಶ ತೆಗೆದುಕೊಂಡಿದೆ. ಅಲ್ಲಿಯವರೆಗೂ ಸಮಾಧಾನದಿಂದ ಕಾದು ನೋಡುತ್ತೇವೆ. ಒಂದು ವೇಳೆ ಶೇ.೭.೫ ರಷ್ಟು ಮೀಸಲಾತಿ ಕೊಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ೫೩ ಜಾತಿಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿರುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಜನಸಂಖ್ಯೆಗನುಗುಣವಾಗಿ ನಮಗೆ ಶೇ.೭.೫ ರಷ್ಟು ಮೀಸಲಾತಿ ಕೇಳುತ್ತಾ ಅನೇಕ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನಾಗಮೋಹನ್‌ದಾಸ್ ಆಯೋಗ ರಚಿಸಿದ್ದರು. ಅದರಂತೆ ಸರ್ಕಾರಕ್ಕೆ ಸಮಿತಿ ವರದಿ ನೀಡಿದ್ದರೂ ಇನ್ನು ಮೀಸಲಾತಿ ಹೆಚ್ಚಳವಾಗಿಲ್ಲ. ನಮ್ಮ ಕೂಗು ಏಕೋ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲದಿರುವುದನ್ನು ಗಮನಿಸಿದರೆ ಸರ್ಕಾರದಲ್ಲಿ ಷಡ್ಯಂತರವಿದೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಯಲಕ್ಷ್ಮಿ, ವಾಲ್ಮೀಕಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸದಾಶಿವ, ಮಂಜನಾಥ್ ಮಾಳಿಗೆ, ರಾಜು, ಕಲ್ಲವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಸೋಮೇಂದ್ರ, ನಗರಸಭೆ ಸದಸ್ಯ ದೀಪು, ಜೆ.ಎನ್.ಕೋಟೆ ಗುರುಸಿದ್ದಣ್ಣ, ಸರ್ವೆ ಬೋರಣ್ಣ, ನ್ಯಾಯವಾದಿ ಅಶೋಕ್‌ಬೆಳಗಟ್ಟ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಕಾರ್ಯದರ್ಶಿ ಹರ್ತಿಕೋಟೆ ವೀರೇಂದ್ರಸಿಂಹ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.