ಅನಾಥಾಶ್ರಮ, ವೃದ್ದಾಶ್ರಮಗಳಲ್ಲಿ ಸೇವೆ ದೈವ ಸ್ವರೂಪದ್ದು ” ಶಾಸಕಿ ಪೂರ್ಣಿಮಾ ಶ್ರೀನಿವಾಸ್.
1 min readಹಿರಿಯೂರು: ” ಅನಾಥಾಶ್ರಮ, ವೃದ್ದಾಶ್ರಮಗಳಲ್ಲಿ ಆಶ್ರಯ ಪಡೆದು ದಿನಗಳನ್ನು ದೂಡುತ್ತಿರುವ ವ್ಯಕ್ತಿಗಳ ಸೇವೆ ಮಾಡುವುದು ನಿಜಕ್ಕೂ ದೈವ ಸ್ವರೂಪದ್ದು ” ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಅವರು ಬುಧವಾರ ಸಂಜೆ ತಾಲ್ಲೂಕಿನ ಭೀಮನ ಬಂಡೆ ಸಮೀಪದ ಶ್ರೀ ಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮ ಟ್ರಸ್ಟ್ ನಲ್ಲಿನ ವಯೋವೃದ್ದರಿಗೆ, ನರೇಂದ್ರ ಮೋದಿ ಜೀ ರವರ ಜನ್ಮ ದಿನಾಚರಣೆಯ ಸೇವಾ ಸಪ್ತಾಹದ ಅಂಗವಾಗಿ ಹೊದಿಕೆ, ಶಾಲು ಮತ್ತು ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದರು.
” ಮಾನವೀಯ ಮೌಲ್ಯಗಳ ಬಗ್ಗೆ ಅರಿವಿಲ್ಲದವರೂ ತಮ್ಮ ವಯಸ್ಸಾದ ತಂದೆ, ತಾಯಿಗಳ ಸೇವೆ ಮಾಡುವುದನ್ನು ಬಿಟ್ಟು ವೃದ್ದಾಶ್ರಮಗಳಲ್ಲಿ ಸೇರಿಸುತ್ತಿರುವುದು ದುರ್ದೈವ ಸಂಗತಿ, ಬಾಲ್ಯದಲ್ಲಿ ಹೇಗೆ ಮಕ್ಕಳ ತಂದೆ ತಾಯಿ ಬಿಟ್ಟು ಇರಲು ಹೇಗೆ ಅಸಾದ್ಯವೋ ಹಾಗೆಯೇ ವೃದ್ದಾಪ್ಯದಲ್ಲಿ ತಂದೆ ತಾಯಿಗಳಿಗೂ ಮಕ್ಕಳ ಅವಶ್ಯಕತೆ ಇರುತ್ತದೆ ಎಂಬುದನ್ನು ಮರೆತಿರುವುದು ಮನುಷ್ಯತ್ವದ ಕೊರತೆ ” ಎಂದರು.
” ಕಾರಣ ಏನೇ ಇರಲಿ ವೃದ್ದಾಶ್ರಮ, ಅನಾಥಾಶ್ರಮಗಳು ಹೆಚ್ಚುತ್ತಿರುವುದು ಕಳಾವಳಾಕಾರಿ ವಿಷಯವಾಗಿದೆ ಆದರೇ ಇಂತಹ ವಾತಾವರಣದಲ್ಲಿ ಆಶ್ರಯ ಪಡೆದಿರುವರ ಸೇವೆ ಮಾಡುವುದು ದೈವ ಸ್ವರೂಪದ ಕಾರ್ಯವಾಗಿದೆ, ಅವರನ್ನು ತಮ್ಮ ಸ್ವಂತ ತಂದೆ, ತಾಯಿ ಬಂಧು ಬಳಗದವರಂತೆ ಕಾಣಿರಿ ” ಎಂದರು.
ಟ್ರಸ್ಟ್ ನ ವ್ಯವಸ್ಥಾಪಕ ತಿಪ್ಪೇಸ್ವಾಮಿ ಮಾತನಾಡಿ ವೃದ್ದಾಶ್ರಮದಲ್ಲಿ ಆಶ್ರಯ ಪಡೆದವರು ಬಯಸುವುದು ಕೇವಲ ನೆಮ್ಮದಿ,ಆರೋಗ್ಯ ಮತ್ತು ಹೊಟ್ಟೆ ತುಂಬಿಸಿಕೊಳ್ಳಲು ಆಹಾರ, ಅವರ ಸೇವೆಯನ್ನು ನಾವು ಅವರ ಕಣ್ಣಿನ ಭಾವನೆಗಳಲ್ಲಿ ಕಾಣಬಹುದು. ನಮಗೂ ಕೂಡ ಅವರ ಸೇವೆ ಮಾಡುವುದು ದೇವರು ಕೊಟ್ಟ ಅವಕಾಶ ಎಂದೇ ಭಾವಿಸುವೆವು ” ಎಂದರ. ಈ ಸಂದರ್ಭದಲ್ಲಿ ನೀರಾವರಿ ಹೋರಾಟಗಾರರ ಕಸವನ್ಹಳ್ಳಿ ರಮೇಶ್, ವೃದ್ಧಾಶ್ರಮದ ಮುಖ್ಯಸ್ಥ ತಿಪ್ಪೇಸ್ವಾಮಿ, ತೇಜು, ಕೌಶಿಕ್, ತಿಮ್ಮರಾಯಪ್ಪ, ವಿಎಲ್ ಗೌಡ, ರಾಜಣ್ಣ, ಹರೀಶ್, ಚಂದ್ರಶೇಖರ್, ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.