ನಿತ್ಯ ಕುಡಿಯುವ ಟೀ ಮತ್ತು ಕಾಫಿಯಲ್ಲಿ ಸಕ್ಕರೆ ಬದಲು ಬೆಲ್ಲವನ್ನು ಬೆರಸಿ ಕುಡಿಯುವುದು ಉತ್ತಮ. ಇದರಿಂದ ಈ ಕೆಳಗೆ ಬೆಲ್ಲದ ಉಪಯೋಗ ತಿಳಿಸಲಾಗಿದೆ.
ಬೆಲ್ಲ ಬಾಯಿಗೆ ಮಾತ್ರ ಸಿಹಿ ಅಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಹೀಗೆ ಆರೋಗ್ಯದ ಮೇಲೆ ಅದ್ಭುತ ಪ್ರಯೋಜನ ಬೀರುತ್ತದೆ ಎಂಬ ಹಿನ್ನೆಲೆಯಲ್ಲೇ ಪೂರ್ವಜರು ಬೆಲ್ಲ ತಿಂದು ನೀರು ಕುಡಿಯುತ್ತಿದ್ದರು.
ಬೆಲ್ಲದಲ್ಲಿ ಕಬ್ಬಿಣಾಂಶ ಮತ್ತು ಖನಿಜಾಂಶಗಳು ಕಂಡು ಬರುವುದರಿಂದ ಇದನ್ನು ದಿನನಿತ್ಯದ ಆಹಾರದಲ್ಲಿ ಬಳಸುವುದು ಉತ್ತಮ. ಮುಖ್ಯವಾಗಿ ಸಕ್ಕರೆಯ ಬದಲಾಗಿ ಬೆಲ್ಲದ ಬಳ ಮಕಕೆ ಆರೋಗ್ಯಕ್ಕೆ ಅತ್ಯುತ್ತಮ. ಹಾಗಿದ್ರೆ ಬೆಲ್ಲದ ಸೇವನೆಯಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳನ್ನು ನೊಡೋಣ.
ನಮ್ಮ ಆಹಾರ ಪದ್ಧತಿಯಲ್ಲಿ ಬೆಲ್ಲವನ್ನು ಬಳಸುವುದರಿಂದ ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡಬಹುದು. ಇದರಲ್ಲಿರುವ ಐರನ್ ಅಂಶ ರಕ್ತದ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನೆಗಡಿ ಅಥವಾ ಶೀತದ ಸಮಯದಲ್ಲಿ ತುಂಡು ಬೆಲ್ಲವನ್ನು ತಿಂದು, ಉಗುರು ಬೆಚ್ಚಗಿನ ನೀರು ಕುಡಿಯಿರಿ. ಇದು ಪ್ರಥಮ ಚಿಕಿತ್ಸೆಯಾಗಿ ಕಾರ್ಯ ನಿರ್ವಹಿಸುವುದಲ್ಲದೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಬೆಲ್ಲದ ಸೇವನೆಯಿಂದ ಯೌವ್ವನವನ್ನು ಹೆಚ್ಚಿಸಿಕೊಳ್ಳಬಹುದು. ಮೊಡವೆ ಮತ್ತು ಮುಖದಲ್ಲಿ ನೆರಿಗೆ ಮೂಡುವುದನ್ನು ತಡೆಯಲು ಹಾಗೂ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಬೆಲ್ಲ ಸೇವಿಸಿ.
ಪ್ರತಿದಿನ ಬೆಲ್ಲವನ್ನು ಸೇವಿಸುವುದರಿಂದ ಕೂದಲ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದಕ್ಕಾಗಿ ನೀವು ಒಂದು ಲೋಟ ಬಿಸಿ ನೀರಿನ ಜೊತೆ ಸೇರಿಸಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
ಮುಖ್ಯವಾಗಿ ನಾವು ನಿತ್ಯ ಸೇವಿಸುವ ಟೀ ಮತ್ತು ಕಾಫಿಯಲ್ಲಿ ಸಕ್ಕರೆ ಬದಲು ಬೆಲ್ಲವನ್ನು ಬೆರಸಿ ಕುಡಿಯುವುದು ಉತ್ತಮ. ಇದರಿಂದ ಈ ಮೇಲೆ ಹೇಳಲಾದ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು.