September 16, 2024

Chitradurga hoysala

Kannada news portal

ಐದು ದಿನಗಳ ಕಾಲ ಸರಳವಾಗಿ ಶರಣ ಸಂಸ್ಕೃತಿ ಉತ್ಸವ: ಶಿವಮೂರ್ತಿ ಮುರುಘಾ ಶರಣರು

1 min read

ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿಯ ಶರಣಸಂಸ್ಕೃತಿ ಉತ್ಸವವನ್ನು ಅತ್ಯಂತ ಸರಳವಾಗಿ ಐದುದಿನಗಳ ಕಾಲ ಆಚರಿಸಲು ಭಕ್ತರ ಒಮ್ಮತದ ಅಭಿಪ್ರಾಯದೊಂದಿಗೆ ತೀರ್ಮಾನಿಸಲಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀ ಮುರುಘರಾಜೇಂದ್ರ ಮಠದಲ್ಲಿ ಕರೆಯಲಾಗಿದ್ದ ಶರಣಸಂಸ್ಕೃತಿ ಉತ್ಸವ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಜಮುರಾ ಕಪ್ ಕ್ರೀಡಾಕೂಟ, ಸೌಹಾರ್ದ ನಡಿಗೆ, ಕುಸ್ತಿ ಪಂದ್ಯಾವಳಿ, ಜಾನಪದ ಕಲಾಮೇಳ ಮೊದಲಾದ ಜನಜಂಗುಳಿ ಸೇರುವ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದ್ದು, ದಿನಾಂಕ ೨೪-೧೦-೨೦೨೦ ರಿಂದ ೨೮-೧೦-೨೦೨೦ರವರೆಗೆ ಪ್ರತಿದಿನ ಬೆಳಗ್ಗೆ ಸಹಜ ಶಿವಯೋಗ, ಭಜನೆ, ವೀರಗಾಸೆ, ಜಾನಪದ ಹಾಡುಗಳ ಸ್ಪರ್ಧೆ, ಸಂಜೆ ವಿಚಾರಗೋಷ್ಠಿಗಳು, ಕೃಷಿ ಹಾಗು ಕೈಗಾರಿಕಾ ಮೇಳ, ಮುರುಘಾಶ್ರೀ ಪ್ರಶಸ್ತಿ, ಬಿಚ್ಚುಗತ್ತಿ ಭರಮಣ್ಣನಾಯಕ ಪ್ರಶಸ್ತಿ, ಸಾಧಕರಿಗೆ ಸನ್ಮಾನ, ವಚನಕಮ್ಮಟ ರ್‍ಯಾಂಕ್ ವಿಜೇತರಿಗೆ ಬಹುಮಾನ ವಿತರಣೆ ಹಾಗು ಮಲ್ಲಿಕಾರ್ಜುನ ಶ್ರೀಗಳ ಸ್ಮರಣೋತ್ಸವದೊಂದಿಗೆ ಉತ್ಸವವು ಮುಕ್ತಾಯಗೊಳ್ಳುವುದು. ಉತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಭಕ್ತಾದಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರೊಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಶ್ರೀಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಜ. ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಗುಳೇದಗುಡ್ಡದ ಶ್ರೀ ಬಸವರಾಜ ಮಹಾಸ್ವಾಮಿಗಳು, ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮಿಗಳು, ಕಾರ್ಯಾಧ್ಯಕ್ಷ ಎನ್.ಜಯಣ್ಣ, ದಾಸೋಹ ಸಮಿತಿ ಅಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ, ಗೌನಳ್ಳಿ ಗೋವಿಂದಪ್ಪ, ಜೆ.ಎಂ.ಜಯಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‌ಪೀರ್, ಕ್ರೈಸ್ತ ಸಮಾಜದ ಫಾದರ್ ರಾಜು, ಮಾಜಿ ಸಂಸದ ಹೆಚ್. ಹನುಮಂತಪ್ಪ, ಕೆ.ಎಂ. ವೀರೇಶ್, ಕೆಇಬಿ ಷಣ್ಮುಖಪ್ಪ, ಹೆಚ್. ಶಂಕರಮೂರ್ತಿ, ಶ್ರೀಮತಿ ರುದ್ರಾಣಿ ಗಂಗಾಧರ್, ಶ್ರೀಮತಿ ಮೋಕ್ಷ ರುದ್ರಸ್ವಾಮಿ, ಗಾಯತ್ರಿ ಶಿವರಾಂ, ಮಾದಾರ ಸಮಾಜದ ಕಣಿವೆ ತಿಪ್ಪೇಸ್ವಾಮಿ, ನೇಕಾರ ಸಮಾಜದ ಲಿಂಗರಾಜು, ಕುಂಬಾರ ಸಮಾಜದ ನರಸಿಂಹಪ್ಪ, ಶಿವಸಿಂಪಿ ಸಮಾಜದ ಹೆಚ್.ಪಿ. ಕೊಟ್ರೇಶ್, ವಿಶ್ವಕರ್ಮ ಸಮಾಜದ ಶಂಕರಮೂರ್ತಿ, ಕುರುಬ ಸಮಾಜದ ನಾರಾಯಣಪ್ಪ, ಮುರುಗೇಂದ್ರಪ್ಪ, ಉಪ್ಪಾರ ಸಮಾಜದ ತಿಪ್ಪೇಸ್ವಾಮಿ, ಸವಿತಾ ಸಮಾಜದ ಶ್ರೀನಿವಾಸ್, ಬಸವ ಬಳಗದ ಪ್ರಕಾಶ್ ಗುತ್ತಿನಾಡು, ಕಮ್ಮಾರ ಸಮಾಜದ ಹನುಮಂತಪ್ಪ, ಈಡಿಗ ಸಮಾಜದ ಹೆಚ್.ಜೀವನ್, ನೇಕಾರ ಸಮಾಜದ ಎಂ.ಜಿ.ಲಿಂಗರಾಜು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಎನ್.ಜಿ. ಶ್ರೀನಿವಾಸ್ ಮೊದಲಾದವರಿದ್ದರು.

About The Author

Leave a Reply

Your email address will not be published. Required fields are marked *