ವರ್ಷದ 365 ದಿನಗಳು ನಗರದ ಸ್ವಚ್ಛತೆ ಕಾಪಾಡುವ ಕಾರ್ಮಿಕರಿಗೆ ಅಭಿನಂದನೆಗಳು ಸಲ್ಲಿಸಿದ: ಡಿ.ಟಿ .ಶ್ರೀನಿವಾಸ್
1 min readವರ್ಷದ 365 ದಿನಗಳು ನಗರದ ಸ್ವಚ್ಛತೆ ಕಾಪಾಡುವ ಕಾರ್ಮಿಕರಿಗೆ ಅಭಿನಂದನೆಗಳು ಸಲ್ಲಿಸಿದ ಬಿಜೆಪಿ ಡಿ ಟಿ ಶ್ರೀನಿವಾಸ್
ನಗರದ ಎ.ಕೃಷ್ಣಪ್ಪ ರೋಟರಿ ಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು ಹಿರಿಯೂರು ನಗರದಲ್ಲಿ 2000 ವಸತಿ ರಹಿತರಿಗೆ ವಸತಿ ಮಂಜೂರು ಮಾಡುವಂತೆ ಶಾಸಕರ ಮುಖಾಂತರ ಈಗಾಗಲೇ ಮಾನ್ಯ ವಸತಿ ಸಚಿವರಿಗೆ ಮನವಿ ಮಾಡಲಾಗಿದೆ. ನಗರದಲ್ಲಿ ಸಂಪೂರ್ಣ ಯುಜಿಡಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಹಿರಿಯೂರಿನಲ್ಲಿ ನಗರವನ್ನು ಸದಾ ಸ್ವಚ್ಛವಾಗಿಡಲಾಗುತ್ತಿದೆ. ಇದರ ಹಿಂದೆ ಸಾಕಷ್ಟು ಜನ ಪೌರಕಾರ್ಮಿಕರ ಶ್ರಮವಿದೆ ಹಾಗಾಗಿ ಅವರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ರಾಜೇಶ್ವರಿ, ನಗರಸಭೆ ಸದಸ್ಯರಾದ ಅಪೂರ್ವ ಚಿರಂಜೀವಿ, ಅಂಬಿಕ ಆರಾಧ್ಯ, ಬಾಲಕೃಷ್ಣ, ಸಣ್ಣಪ್ಪ, ವೈಪಿಡಿ ದಾದಾಪೀರ್, ರತ್ನಮ್ಮ, ಮಾಜಿ ಅಧ್ಯಕ್ಷೆ ಟಿ. ಮಂಜುಳಾ, ಮಾಜಿ ಸದಸ್ಯರಾದ ಡಿ.ಗಂಗಾಧರ್ ಆಯುಕ್ತೆ ಲೀಲಾವತಿ, ಎಇ ಮಹಾಂತೇಶ್ ಪೌರ ನೌಕರರ ಸಂಘದ ಅಧ್ಯಕ್ಷರಾದ ದುರುಗೇಶ, ಆರೋಗ್ಯ ನಿರೀಕ್ಷಕ ಸುನಿಲ್ ಮುಂತಾದವರು ಉಪಸ್ಥಿತರಿದ್ದರು.