ಕಡ್ಲೇಗುದ್ದಿನ ಮುಖ್ಯಶಿಕ್ಷಕ ಮಹೇಶ್ ಅವರಿಗೆ ಜೀನೀಯಸ್ ಎಜುಕೇಶನಿಶ್ಟ್-2020 ಪ್ರಶಸ್ತಿಯ ಗರಿ
1 min readಕಡ್ಲೇಗುದ್ದಿನ ಮುಖ್ಯಶಿಕ್ಷಕರಾದ ಮಹೇಶ್‍ರವರಿಗೆ ಜೀನೀಯಸ್ ಎಜುಕೇಶನಿಶ್ಟ್-2020 ಪ್ರಶಸ್ತಿಯ ಗರಿ
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರಾಷ್ಟೀಯ ಮಟ್ಟದ ಹೆಚ್ ಆರ್ ಡಿ ಮಿಷನ್ ದೆಹಲಿ ಸಂಸ್ಥೆಯು ಕಡ್ಲೇಗುದ್ದಿನ ಮುಖ್ಯಶಿಕ್ಷಕರಾದ ಮಹೇಶ್‍ರವರಿಗೆ ಶೈಕ್ಷಣಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಜೀನೀಯಸ್ ಎಜುಕೇಶನಿಶ್ಟ್-2020 ಪ್ರಶಸ್ತಿ ನೀಡಿ ಗೌರವಿಸಿದೆ.
ಕೋವಿಡ್-19ರ ಸೋಂಕಿನಿಂದಾಗಿ ರಾಷ್ಟ್ರಮಟ್ಟದ ಶಿಕ್ಷಕರ ದಿನಾಚರಣೆಯನ್ನು ದಿನಾಂಕ-22-09-2020ರ ಮಂಗಳವಾರ ಸಂಜೆ ಆನ್-ಲೈನ್ ವರ್ಚುಯಲ್ ಜೂಮ್ ಮೀಟಿಂಗ್ ನಲ್ಲಿ ಆಯೋಜಿಸಲಾಗಿತ್ತು.
ಕೋವಿಡ್ ಸಂಕಷ್ಟ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಶಾಲಾ ಹಂತದಲ್ಲಿ ಆಧುನಿಕ ತಂತ್ರಜ್ಞಾನವಾದ ವಾಟ್ಸ್ ಆಪ್ ಬಳಸಿ ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಿ ಪ್ರತಿದಿನ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಿ ಪ್ರಸಕ್ತ ವರ್ಷದಲ್ಲಿ ಶಾಲೆಯ ಹತ್ತನೇ ತರಗತಿಯ ಫಲಿತಾಂಶದಲ್ಲಿ ಶೇಕಡಾ ನೂರರಷ್ಟು ಗಳಿಸಲು ಶ್ರಮಿಸಿದ ಹಿನ್ನೆಲೆಯಲ್ಲಿ ಹೆಚ್‍ಆರ್‍ಡಿ ಮಿಷನ್ ದೆಹಲಿ ಸಂಸ್ಥೆಯು ಜೀನೀಯಸ್ ಎಜುಕೇಶನಿಶ್ಟ್-2020 ಪ್ರಶಸ್ತಿ ನೀಡಿ ಆಭಿನಂದಿಸಲಾಗಿದೆ.
ದೇಶದ ವಿವಿಧ ರಾಜ್ಯಗಳ ಸುಮಾರು 100 ಸಾಧಕ ಶಿಕ್ಷಕರ ಕೋವಿಡ್ ಸಂಕಷ್ಟ ಕಾಲದಲ್ಲಿನ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಜೀನೀಯಸ್ ಎಜುಕೇಶನಿಶ್ಟ್-2020 ಪ್ರಶಸ್ತಿ ನೀಡಿ ಗೌರವಿಸಿದೆ.
ಜೀನೀಯಸ್ ಎಜುಕೇಶನಿಶ್ಟ್-2020 ಪ್ರಶಸ್ತಿಗೆ ಭಾಜನರಾಗಿರುವ ಮಹೇಶ್ ರವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ರವಿಶಂಕರ ರೆಡ್ಡಿಯವರು, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿದ್ದಪ್ಪನವರು,ಕ್ಷೇತ್ರ ಸಮನ್ವಯಧಿಕಾರಿಗಳಾದ ಈಶ್ವರಪ್ಪನವರು,ವಿಜ್ಞಾನ ವಿಷಯ ಪರಿವೀಕ್ಷಕರಾದ ಗೋವಿಂದಪ್ಪನವರು ಶಾಲೆಯ ಕಾರ್ಯದರ್ಶಿಗಳಾದ ರಾಜಪ್ಪನವರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.