May 5, 2024

Chitradurga hoysala

Kannada news portal

ಟಾಟಾ ಪವರ್ ಸೋಲಾರ್ ಕಂಪನಿ ವತಿಯಿಂದ 8000 ಮಾಸ್ಕ್ ಮತ್ತು ಸ್ಯಾನಿಟೈಸರ್

1 min read


ಹಿರಿಯೂರು :ತಾಲೂಕಿನ ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಮತ್ತು ಗ್ರಾಮಸ್ಥರಿಗೆ ಟಾಟಾ ಪವರ್ ಸೋಲಾರ್ ಕಂಪನಿಯ ವ್ಯವಸ್ಥಾಪಕರಾದ ರಾಮನಗೌಡ ಮತ್ತು ಸಂತೋಷ್ ಅವರು ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾಕ್ಟರ್ ವೆಂಕಟೇಶ್ ಅವರು ನಮ್ಮ ಸಿಬ್ಬಂದಿಯವರು ಕಳೆದ ಏಳು ತಿಂಗಳಿಂದ ಕೊರೋನ ಮಹಾಮಾರಿ ವಿರುದ್ಧತಮ್ಮ ಕುಟುಂಬವನ್ನು ಬಿಟ್ಟು ರಜೆಯ ದಿನದಲ್ಲೂ ಸಹ ಸಾರ್ವಜನಿಕರಿಗೆ ಉತ್ತಮವಾದ ಆರೋಗ್ಯ ಸೇವೆ ಸಲ್ಲಿಸಿದ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಗೀತಾ ನಾಗ ಕುಮಾರ್ ತಾಲೂಕ್ ಆರೋಗ್ಯಾಧಿಕಾರಿ ವೆಂಕಟೇಶ್ ನಟರಾಜ್ ಡಾಕ್ಟರ್ ಕಿರಣ್ ವಿನಯ್ ಗಿರೀಶ್ ಪ್ರಭಾಕರ ಮತ್ತು ಟಾಟಾ ಪವರ್ ಸೋಲಾರ್ ಕಂಪನಿಯ ರಾಮನಗೌಡ ಸಂತೋಷ್ ಗ್ರಾಮಸ್ಥರು ಇದ್ದರು.

About The Author

Leave a Reply

Your email address will not be published. Required fields are marked *