ಸ್ವಾತಂತ್ರ್ಯ ಒಂದೇ ಅಲ್ಲ ಸಮಾಜವಾದದ ಕನಸು ಕಟ್ಟಿದ್ದ ವೀರ ಭಗತ್ ಸಿಂಗ್
1 min readನೆನೆ ನೆನೆ ಆ ದಿನವ ಭಗತ್ ಸಿಂಗ್ ನ ತ್ಯಾಗವ
ಬಾಲ್ಯದಲ್ಲೇ ಕಂಡ ಸುಲಿಗೆಕೋರ ಆಳುವವರ ಕ್ರೌರ್ಯವ ಮನಸಲ್ಲೇ ತವಕಿಸಿದ.
ಸಿಡಿದ ಸಿಟ್ಟಾದ ಅನ್ನದ ಡಬ್ಬಿಯಲ್ಲಿ ರಕ್ತ ಸಿಕ್ತ ಮಣ್ಣನ್ನು ಹಿಡಿದು ಮುನ್ನಗಿದ ದಿನವ
ಅಸಮಾನತೆಯ ಈ ಜಗತ್ತಲ್ಲಿ ದೇವರೆಲ್ಲಿ .ಎಂದು ಕೂಗಿ ಕೇಳಿದ ವೀರ ಮನುಷ್ಯ.
ಜಗತ್ತಲ್ಲಿ ಸಮಾನತೆಯ ತರುವ ಛಲ!
ಪುಸ್ತಕಗಳನ್ನು ಆಯುಧವನ್ನಾಗಿ ಮಾಡಿದ ಮಾರ್ಕ್ಸ್ ವಾದವನ್ನು ಅಧ್ಯಯನ ಮಾಡಿದ
ಇಡೀ ಜೀವನವನ್ನು ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ .
ಸ್ವಾತಂತ್ರ್ಯ ಒಂದೇ ಅಲ್ಲ ಸಮಜವಾದದ ಕನಸ ಕಟ್ಟಿದ ಅವನು ಸಾಯೋ ಘಳಿಗೆಯ ಕೊನೆಯಾಸೆ. ಮತ್ತೊಬ್ಬ ಕ್ರಾಂತಿಕಾರಿಯ ಸಂದಿಸುವುದೇ ಆಗಿತ್ತು
ಅವನು ಚೆಲ್ಲಿದ ರಕ್ತ ಕಂಡ ಕನಸು ಇಂದು ನಾವೆಲ್ಲ ಮರೆಯಲು ಸಾಧ್ಯವೇ ಅವನು ಬಿದ್ದ ಮರವಲ್ಲ ಬಿತ್ತಿದ ಬೀಜ ಸಾವಲ್ಲೂ ಸ್ವಾಬಿಮಾನ ಕಂಡ ವೀರ ಭಗತ್ ಸಿಂಗ್ ಗೆ 113 ನೆ ಹುಟ್ಟು ಹಬ್ಬದ ಸಂಭ್ರಮ.
ಲೇಖನ
ಧನಂಜಯ ಆರ್
ಯಲ್ಲಾಭೋವಿಹಟ್ಟಿ.