ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ದಿ ನಿಗಮದಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ
1 min readಚಿತ್ರದುರ್ಗ,ಅಕ್ಟೋಬರ್.01-
ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ, ಸ್ವ ಸಹಾಯ ಗುಂಪುಗಳಿಗೆ ಸಾಲ ಮತ್ತು ಸಹಾಯಧನ, ಅರಿವು ಶೈಕ್ಷಣಿಕ ಸಾಲ, ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ, ಭೂ ಖರೀದಿ ಯೋಜನೆ, ಬ್ಯಾಂಕ್‍ಗಳ ಸಹಯೋಗದಿಂದ ಸಾಲ ಮತ್ತು ಸಹಾಯಧನದ ಸೌಲಭ್ಯ ಪಡೆಯಲು ಯೋಜನೆಗಳಿವೆ.
ಅಲೆಮಾರಿ, ಅರೆಅಲೆಮಾರಿ ಜನಾಂಗಕ್ಕೆ ಸೇರಿದ ಬೈರಾಗಿ, ಬಾಲ ಸಂತೋಷಿ, ಜೋಷಿ, ಬಾಜಿಗರ್, ಭರಡಿ, ಬುಡಬುಡಕಿ-ಜೋಶಿ-ಗೋಧಳಿ, ಚಾರ, ಚಿತ್ರಕಥಿ-ಜೋಷಿ, ಧೋಲಿ, ಢವೇರಿ, ದೊಂಬರಿ, ಘಿಸಾಡಿ, ಗರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲ್ಕರಿ, ಕೋಲ್ಹಟಿ, ನಂದಿವಾಲ-ಜೋಷಿ-ಗೊಂದಳಿ-ಪುಲ್‍ಮಾಲ್ಲಿ, ನಾಥಪಂಥಿ-ಡೌರಿ-ಗೋಸಾವಿ, ನಿರ್ಶಿಕಾರಿ, ಪಾಂಗ್ಯುಯಲ್, ಜೋಷಿ (ಸಾದಜೋಷಿ) ಸಾನ್ಸಿಯ, ಸರಾನಿಯ, ತಿರುಮಲಿ, ವಾಯ್ಡು, ವಾಸುದೇವ್, ವಾಡಿ, ವಾಗ್ರಿ, ವಿರ್, ಬಜನಿಯ, ಶಿಕ್ಕಲಿಗರ್, ಗೊಲ್ಲ, ಕಿಲ್ಲಿಕ್ಯಾತಸ್, ಸರೋಡಿ, ದುರ್ಗ-ಮುರ್ಗ, ಹಾವಗಾರ್, ಪಿಚಗುಂಟಲ, ಮಸಣಿಯ ಯೋಗಿ, ಬುಂಡಬೆಸ್ತ, ಕಟಬು, ದರ್ವೆಶ್, ಕಾಶಿ ಕಪಾಡಿ, ದೊಂಬಿದಾಸ ಮತ್ತು ಬೈಲ್‍ಪತರ್ ಜನರು ಈಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಅರ್ಹರು ಜಿಲ್ಲಾ ನಿಗಮದ ಕಚೇರಿಯಿಂದ ಅಥವಾ www.dbcdc.karnataka.gov.in ವೆಬ್‍ಸೈಟ್‍ನಿಂದ ಅರ್ಜಿ ಪಡೆದು ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಭಾವಚಿತ್ರ, ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ದಾಖಲಾತಿಗಳು, ಗಂಗಾ ಕಲ್ಯಾಣಕ್ಕೆ ಜಮೀನಿನ ದಾಖಲೆ ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣ ಪತ್ರ, ಭೂ ಖರೀದಿಗೆ ಜಮೀನುದಾರರ ದಾಖಲೆ ಪತ್ರಗಳೊಂದಿಗೆ ಆನ್‍ಲೈನ್‍ನಲ್ಲಿ ಸಲ್ಲಿಸಬಹುದಾಗಿದೆ. ಆನ್‍ಲೈನ್‍ನಲ್ಲಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ನಿಗಮದ ಜಿಲ್ಲಾ ಕಚೇರಿಗೆ ಅಕ್ಟೋಬರ್ 29 ರೊಳಗಾಗಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ಡಿ.ದೇವರಾಜ ಅರಸು ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯ 08194-220882 ದೂರವಾಣಿಗೆ ಸಂಪರ್ಕಿಸಲು ಜಿಲ್ಲಾ ವ್ಯವಸ್ಥಾಪಕ ವಿ.ರಘುನಾಥ್ ತಿಳಿಸಿದ್ದಾರೆ.