ನಬಾರ್ಡ್‍ನಿಂದ ನೈರ್ಮಲ್ಯ ಸಾಕ್ಷರತಾ ಅಭಿಯಾನ:ಜಿಲ್ಲಾ ನಬಾರ್ಡ್ ಡಿಡಿಎಂ ಕವಿತಾ
1 min read
ಚಿತ್ರದುರ್ಗ,ಅಕ್ಟೋಬರ್.01-
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನಬಾರ್ಡ್‍ನಿಂದ ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯಕರ ಮತ್ತು ನೈರ್ಮಲ್ಯ ಪದ್ದತಿಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಅಕ್ಟೋಬರ್ 2 ರಿಂದ 2021 ರ ಜನವರಿವರೆಗೆ ನೈರ್ಮಲ್ಯ ಸಾಕ್ಷರತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಬಾರ್ಡ್ ಡಿಡಿಎಂ ಕವಿತಾ ತಿಳಿಸಿದ್ದಾರೆ.
ನಬಾರ್ಡ್ ದೇಶದ ಉನ್ನತ ಅಭಿವೃದ್ದಿ ಹಣಕಾಸು ಸಂಸ್ಥೆಯಾಗಿದ್ದು ಗ್ರಾಮೀಣ ಜನರ ಆರೋಗ್ಯ ಮತ್ತು ನೈರ್ಮಲ್ಯತೆ ಕಾಪಾಡಿಕೊಳ್ಳುವ ಬಗ್ಗೆ ಅಭಿಯಾನವನ್ನು ಆರಂಭಿಸುತ್ತಿದೆ. ನೈರ್ಮಲ್ಯ ಸೌಲಭ್ಯಗಳನ್ನು ಬಳಸುವುದು ಮತ್ತು ಇದರಿಂದಾಗುವ ಆರೋಗ್ಯ ಸುಧಾರಣೆ ಮತ್ತು ಜೀವನೋಪಾದಯ ಮೇಲೆ ಉಂಟಾಗುವ ಪ್ರಯೋಜನದ ಅರಿವು ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ.
ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಒಂದು ಕೋಟಿ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಬೆಂಬಲಿಸಿ 15000 ಕೋಟಿ ಮಂಜೂರು ಮಾಡಿ ಇಲ್ಲಿಯವರೆಗೆ 12298 ಕೋಟಿ ಕೇಂದ್ರ ಸರ್ಕಾರಕ್ಕೆ ನಬಾರ್ಡ್‍ನಿಂದ ಬಿಡುಗಡೆ ಮಾಡಲಾಗಿದೆ.
ಕೇಂದ್ರ, ರಾಜ್ಯ ಸರ್ಕಾರ ಹಾಗೂ ನಬಾರ್ಡ್‍ನ ಪರಿಶ್ರಮದಿಂದ ಈಗ ಬಯಲು ಶೌಚಮುಕ್ತ ದೇಶವೆಂದು ಘೋಷಿಸಲಾಗಿದ್ದು ಬಯಲು ಶೌಚ ಮುಕ್ತ ದೇಶದ ಕಡೆ ಸಾಗಿದೆ. ಈ ಕಾರ್ಯಕ್ರಮದ ಉದ್ದೇಶವನ್ನ ತಿಳಿಸುವುದು ಮತ್ತು ಈ ಸೌಲಭ್ಯಗಳನ್ನು ಬಳಕೆ ಕುರಿತು ಜನ ಜಾಗೃತಿ ಮೂಡಿಸಿ ಜನರ ಆರೋಗ್ಯವನ್ನು ಕಾಪಾಡುವುದು ನಬಾರ್ಡ್ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.