ಮೊಳಕಾಲ್ಮುರಿನಲ್ಲಿ 17.9 ಮಿ.ಮೀ ಮಳೆ
1 min read
ಚಿತ್ರದುರ್ಗ, ಅಕ್ಟೋಬರ್.01
ಚಿತ್ರದುರ್ಗ ಜಿಲ್ಲೆಯಲ್ಲಿ ಸೆಪ್ಟೆಂಬರ್ 30 ರಂದು ಬಿದ್ದ ಮಳೆಯ ವಿವರದನ್ವಯ ಮೊಳಕಾಲ್ಮುರಿನಲ್ಲಿ 17.9 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೊಳಕಾಲ್ಮುರು ತಾಲ್ಲೂಕಿನ ರಾಯಾಪುರದಲ್ಲಿ 3.8, ಬಿ.ಜಿ.ಕೆರೆ 8.9, ಚಳ್ಳಕೆರೆ ತಾ; ಪರಶುರಾಂಪುರದಲ್ಲಿ 1.2, ತಳಕು 16.2 ಹಾಗೂ ನಾಯಕನಹಟ್ಟಿಯಲ್ಲಿ 2.2 ಮಿ.ಮೀ ಮಳೆಯಾಗಿದೆ.