May 17, 2024

Chitradurga hoysala

Kannada news portal

ನಾಯಕನಾಗು ನಾಡ ರಕ್ಷಕನಾಗು” ಮದಕರಿ ಬ್ಯಾಂಡ್ ಧರಿಸಲು ಲಕ್ಷಾಂತರ ಯುವ ಸಮೂಹ ಸಜ್ಜು: ಮಹಂತೇಶ್ ನಾಯಕ

1 min read

ರಾಜ್ಯಾದ್ಯಂತ ಜಾತ್ಯತೀತವಾಗಿ ಮದಕರಿ ಬ್ಯಾಂಡ್ ಧರಸಲು ಸಜ್ಜಾಗಿರುವ ಯುವ ಸಮೂಹ

ವಿಶೇಷ ವರದಿ: ರಾಜ್ಯ ಅಜರಾಮರ ದೊರೆ, ವೀರ,ಶೂರ,ಪರಾಕ್ರಮಿ, ಜನಪರ ಆಡಳಿತಗಾರ, ಸರ್ವ ಜನಾಂಗದ ಅಭಿವೃದ್ಧಿಗೆ ಬದ್ದನಾಗಿದ್ದ ದುರ್ಗದ ದೊರೆ ರಾಜವೀರ ಮದಕರಿನಾಯಕರ ವಿಚಾರಗಳ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಮಾಡಿ ಸದಾ ಮದಕರಿನಾಯಕರ ಪರ ಹಲವು ಡಿಬೆಟ್ ಗಳಲ್ಲಿ ಭಾಗವಹಿಸಿ ಸತ್ಯ ಸತ್ಯತೆ ತಿಳಿಸುತ್ತ ಅವರ ಆಡಳಿವನ್ನು ಮತ್ತು ಇತಿಹಾಸ ಜನರಿಗೆ ತಿಳಿಸಿ ಅಚ್ಚ ಹಸಿರಿನಂತೆ ಮದಕರಿನಾಯಕ ಹೆಸರನ್ನು ಕಾಪಡಿಕೊಂಡು ಬರುತ್ತಿರುವಲ್ಲಿ ಯುವ ಸಮೂಹದ ಆಶಾಕಿರಣದಂತೆ ಹೋರಾಟದ ಮೂಲಕ ಗುರುತಿಸಿಕೊಂಡಿರುವ ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿಯ ಮಹಂತೇಶ್ ನಾಯಕ ಕೂಡ ಒಬ್ಬರಾಗಿದ್ದಾರೆ.

ರಾಜ್ಯದಲ್ಲಿ ಮದಕರಿನಾಯಕ‌ನ ಹೆಸರು ಕೇಳಿದ ತಕ್ಷಣ ಎಲ್ಲಾರಿಗೂ ಒಂದು ರೀತಿಯ ರೋಮಾಂಚನವಾಗುತ್ತದೆ. ಇಂತಹ ಮಹಾನ್ ರಾಜನ ಹೆಸರಿನಲ್ಲಿ ಮದಕರಿ ನಾಯಕನ ಹೆಸರಿನಲ್ಲಿ ಹೋರಟಗಳ ಮೂಲಕ ನಾಯಕ ಜನಾಂಗದ ದುರ್ಗದ ರಾಜನ ಹೆಸರನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಇತಿಹಾಸ ಸೃಷ್ಟಿಸಲು ಹೋರಟಿರುವ ಯುವ ನಾಯಕ ಮದಕರಿ ಥೀಮ್ ಪಾರ್ಕ್ ರೂವಾರಿ ಕೂಡ ಇದೇ ಮಹಂತೇಶ್ ನಾಯಕ ಎಂಬುದು ಗಮನಾರ್ಹವಾಗಿದೆ.

ಮದಕರಿ ನಾಯಕ ಕ ಇತಿಹಾಸ ಅವರ ಅಭಿಮಾನದ ಬಗ್ಗೆ ಅವರು ಹೋರಾಟಗಳು ತೆಗೆದುಕೊಂಡ ನಿರ್ಧಾರಗಳು ಅವರ ಇತಿಹಾಸ ಹೇಳುತ್ತದೆ.

ಕಳೆದ ಎರಡು-ಮೂರು ವರ್ಷಗಳಿಂದ ಹಿಂದೆ ನನ್ನ ನೇತೃತ್ವದಲ್ಲಿ ಮದಕರಿ ನಾಯಕ ಪಟ್ಟಾಭಿಷೇಕ ಮಾಡಲು ಹೊರಟ್ಟಿದ್ದು ಸಹ ಇದೇ ಮಹಂತೇಶ್. ಆಗಸ್ಟ 4 ಮದಕರಿ ನಾಯಕ ಪಟ್ಟಾಭಿಷೇಕ ಮಾಡಲು ನಿರ್ಧಾರಕ್ಕೆ ರಾಜ್ಯದ್ಯಾಂತ ಸಭೆಗಳ ನಡಸಿ ಮದಕರಿ ಪಟ್ಟಾಭಿಷೇಕ ಅಡ್ಡಿಗಳು ಸಹ ಬಂದ ಕಾರಣಕ್ಕೆ ಆ ವರ್ಷ ಪಟ್ಟಾಭಿಷೇಕ ರದ್ದುಗೊಳಿಸಿದರು. ಪ್ರತಿ ವರ್ಷ ಸಹ ಆಗಸ್ಟ್ 04 ಮದಕರಿ ಜಯಂತಿ ಆಚರಣೆ ಮಾಡಲು ಪ್ರಾರಂಭಿಸಿದ್ದರು. ಆದರೆ ಅದು ಪಟ್ಟಾಭಿಷೇಕ ದಿನ ಅಷ್ಟೆ ಆಗಿದ್ದು ಅದು ಅಧಿಕ ಮಾಸ ಇದ್ದ ವರ್ಷದಲ್ಲಿ ದಿನಾಂಕ ಬದಲಾವಣೆ ಸಹ ಆಗುತ್ತದೆ. ಆ ಕಾರಣಕ್ಕೆ ರಾಜವಂಶದವರ ದಾಖಲೆ ಪ್ರಕಾರ ಇದರ ಸಂಪೂರ್ಣ ಮಾಹಿತಿ ಪಡೆದು ದಿನಾಂಕ ಗೊಂದಲ ಬಗೆಹರಿಸಿ ಅಕ್ಟೋಬರ್ 13 ರಂದು ಪ್ರತಿ ವರ್ಷ ಮದಕರಿನಾಯಕ ಜಯಂತಿ ಮಾಡಲು ಮಹಂತೇಶ್ ನಾಯಕ ನೇತೃತ್ವದಲ್ಲಿ ತೀರ್ಮಾನಿಸಲಾಗಿದೆ.

ಮದಕರಿ ಬ್ಯಾಂಡ್

ಅಂದಿನಿಂದ ರಾಜ್ಯ ಉದ್ದಗಲಕ್ಕೂ ತನ್ನದೆ ಪಡೆಯೊಂದಿದೆಗೆ “ನಾಯಕನಾಗು ನಾಡ ರಕ್ಷಕನಾಗು” ಎಂಬ ಷೋಷ ವಾಕ್ಯದೊಂದಿಗೆ ಮದಕರಿನಾಯಕ ಜಯಂತಿಯ ತಯಾರಿ ನಡೆದವು. ಇದೇ ಘೋಷ ವಾಕ್ಯದಲ್ಲಿ ಮದಕರಿ ಬ್ಯಾಂಡ್ ಅಭಿಯಾನದ ರೂವಾರಿ ಸಹ ಮಹಂತೇಶ್ ನಾಯಕ. ಅಕ್ಟೋಬರ್ 13 ರಂದು ನಡೆಯುವ ಮದಕರಿನಾಯಕ ಜಯಂತಿಗೆ ಮದಕರಿ ಅಭಿಮಾನಿಗಳ ಸಜ್ಜುಗೊಳಿಸುವ ಉದ್ದೇಶವಾಗಿದೆ.

ಸರ್ಕಾರಕ್ಕೆ ಚಿತ್ರದುರ್ಗದಲ್ಲಿ ಮದಕರಿ ನಾಯಕ ಥೀಮ್ ಪಾರ್ಕ್ ನಿರ್ಮಿಸಲು ಆಗ್ರಹಿಸುವುದು ಮತ್ತು ಮದಕರಿನಾಯಕರ ಅಂತ್ಯ ಸಂಸ್ಕಾರವಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಮದಕರಿನಾಯಕ ಸ್ಮಾತಕ ನಿರ್ಮಾಣ ಮಾಡುವುದು. ನಾಡ ದೊರೆ ಮದಕರಿನಾಯಕ ಜಯಂತಿಯನ್ನು ಸರ್ಕಾರಿ ಜಯಂತಿಯನ್ನಾಗಿ ಆಚರಿಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದಾಗ ಟಿಪ್ಪು ವಿರುದ್ದ ಹೋರಟ ನಡೆದಂತಹ ಸಂದರ್ಭದಲ್ಲಿ ಬಿಜೆಪಿ ನಾಯಕರು ಕೊಟ್ಟಂತಹ ಮಾತು ಉಳಿಸಿಕೊಳ್ಳಬೇಕು ಮತ್ತು ಪ್ರತಿ ಜಿಲ್ಲೆ , ತಾಲೂಕು ಮತ್ತು ಪಂಚಾಯಿತಿ ಮಟ್ಟದಲ್ಲಿ ಮದಕರಿನಾಯಕ ಅಭಿಮಾನಿಗಳು , ಚಿತ್ರದುರ್ಗ ಇತಿಹಾಸದ ಅಭಿಮಾನಿಗಳು ಅಕ್ಟೋಬರ್ 13 ರಂದು ಮದಕರಿನಾಯಕ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ “ವಿ ವಾಂಟ್ ಮದಕರಿ ಥೀಮ್ ಪಾರ್ಕ್ ” ಎಂಬ ಪ್ಲೇ ಕಾರ್ಡ್ ಹಿಡಿದು ಸೇಲ್ಫಿ ಚಿತ್ರದೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಲು ಈ ಅಭಿಯಾನ ಪ್ರಾರಂಭ ಮಾಡಲಾಗಿದೆ. ನಾಯಕರು ಬ್ರಿಟಿಷ್‌ ರ ವಿರುದ್ದ ಅಲಗಲಿಯಲ್ಲಿ ಹೋರಡಿದರವರು.ಈ ನಾಡ ರಕ್ಷಣೆಗೆ ಬದ್ದರಾದವರು.ಮದಕರಿನಾಯರಂತಹ ಇತಿಹಾಸ ಪುರುಷರ ಆದರ್ಶ ನಾಡಿನ ಲಕ್ಷಾಂತರ ಯುವ ಸಮೂಹಕ್ಕೆ ಸ್ಪೂರ್ತಿ ನಮ್ಮ ಮದಕರಿ ಮತ್ತು ನಾಯಕರು ದೇಶಕ್ಕಾಗಿ ಜೀವ ಮತ್ತು ಜೀವನ ಅರ್ಪಿಸಲು ಸದಾ ಸಿದ್ದರಿದ್ದೇವೆ ಎಂದು ಮದಕರಿ ಬ್ಯಾಂಡ್ ಧರಿಸಿದ್ದೇವೆ. ನೀವು ಸಹ ಬ್ಯಾಂಡ್ ಧರಿಸಿ ನಾಡ ರಕ್ಷಕರಾಗಿ ಎಂದು ಹೇಳುತ್ತಾರೆ ಮಹಂತೇಶ್ ನಾಯಕ್ ಹೀಗೆ ಸಾಲು ಸಾಲು ಹೋರಾಟದ ಮೂಲಕ ಮದಕರಿನಾಯಕರ ಇತಿಹಾಸ ಮತ್ತು ನಾಯಕ ಜನಾಂಗದ ಸದಾ ನಿಲ್ಲುವ ಯುವ ನಾಯಕ ಮಹಂತೇಶ್ ನಾಯಕ ಇವರ ಹೋರಾಟಗಳಿಗೆ ಗೆಲುವು ಸಿಗಲಿ ಎಂಬುದು ಎಲ್ಲಾ ಒಗ್ಗಟ್ಟಿನ ಮಂತ್ರ ಜಪಿಸಲಿ ಸಮಾಜ ಉತ್ತಮವಾಗಿ ಮುನ್ನಡೆಯಲಿ‌‌.

About The Author

Leave a Reply

Your email address will not be published. Required fields are marked *