25 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾರ್ಯಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ.
1 min readನಗರದ ೨೦ ನೇ ವಾರ್ಡ್ ರಾಂದಾಸ್ ಕಾಂಪೌಂಡ್‌ನಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರು ೨೫ ಲಕ್ಷ ರೂ.ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ರಸ್ತೆ ಕಾಮಗಾರಿ ಉದ್ಘಾಟಿಸಿ ನಂತರ ಮಾತನಾಡಿದ ಶಾಸಕರು ಚಳ್ಳಕೆರೆ ಟೋಲ್‌ಗೇಟ್‌ನಿಂದ ಹಿಡಿದು ಪ್ರವಾಸಿ ಮಂದಿರ, ದಾವಣಗೆರೆ ರಸ್ತೆ, ತುರುವನೂರು ರಸ್ತೆ, ಮೆದೇಹಳ್ಳಿ ರಸ್ತೆ, ಗಾಯತ್ರಿ ಕಲ್ಯಾಣ ಮಂಟಪದ ಮುಂಭಾಗದ ಜೆ.ಸಿ.ಆರ್.ರಸ್ತೆ ಹೀಗೆ ಚಿತ್ರದುರ್ಗ ನಗರದ ಎಲ್ಲಾ ರಸ್ತೆಗಳು ಅಗಲೀಕರಣವಾಗುತ್ತಿವೆ. ಎಲ್ಲಿಯೂ ಯಾರಿಗೂ ತಾರತಮ್ಯವಾಗದೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುವುದು. ಬಡವರ ಬಗ್ಗೆ ವಿಶೇಷ ಕಾಳಜಿಯಿದೆ. ರಸ್ತೆ ಅಗಲೀಕರಣಕ್ಕೆ ಇಡೀ ನಗರದ ಜನತೆ ಸಹಕರಿಸಿದರೆ ಊರಿನ ಸೌಂದರ್ಯ ಹೆಚ್ಚಲಿದೆ ಎಂದು ಹೇಳಿದರು.
ಇಪ್ಪತ್ತನೆ ವಾರ್ಡ್ ನಗರಸಭೆ ಸದಸ್ಯೆ ಶ್ರೀಮತಿ ಅನಿತಾ ರಮೇಶ್, ನಗರಸಭೆ ಮಾಜಿ ಸದಸ್ಯರುಗಳಾದ ಟಿ.ರಮೇಶ್, ಫಕೃದ್ದಿನ್, ರಾಂದಾಸ್ ಕಾಂಪೌಂಡ್‌ನ ನಿವಾಸಿಗಳಾದ ಮುನೀರ್, ಅಕ್ರಂ, ಷಫೀವುಲ್ಲಾ, ನಾಸೀರ್, ದಾವೂದ್, ರವಿ, ವೆಂಕಟೇಶ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.