ಕುಸುಮಾ ಎಂಪಿ ಅಥವಾ ಎಂಎಲ್ ಎ ಆಗಲಿ ಆದರೆ ಡಿ.ಕೆ.ರವಿ ಹೆಸರು ಏಲ್ಲೂ ಸಹ ಹೇಳಬಾರದು.
1 min readಬೆಂಗಳೂರು: ಹನುಮಂತರಾಯಪ್ಪನ ಮಗಳು ಕುಸುಮಾಗೆ ಒಳ್ಳೆಯದಾಗಲಿ, ಅವಳು ಚೆನ್ನಾಗಿರಲಿ ಅಂತಾ ಡಿ.ಕೆ. ರವಿ ತಾಯಿ ಗೌರಮ್ಮ ಹೇಳಿದ್ದಾರೆ.
ಆರ್ಆರ್ ನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ರವಿ ಅವರ ಪತ್ನಿ ಕಣಕ್ಕೆ ಇಳಿಯುತ್ತಿದ್ದಾರೆ. ಈ ಸಂಬಂಧ ಮಾತನಾಡಿರುವ ಡಿಕೆ ರವಿ ತಾಯಿ.. ಕುಸುಮಾ ಎಲ್ಲಿಯಾದ್ರೂ ನಿಂತುಕೊಳ್ಳಲಿ.. ಒಟ್ಟಿನಲ್ಲಿ ಡಿ.ಕೆ.ರವಿ ಶ್ರೀಮತಿ ಅಂತಾ ಹೇಳಿಕೊಳ್ಳಬಾರದು ಅಂತಾ ಹೇಳಿದರು.
ಜೊತೆಗೆ ಹನುಮಂತರಾಯಪ್ಪ ಕೂಡ ಡಿ.ಕೆ.ರವಿ ಮಾವ ಅಂತಾ ಹೇಳಿಕೊಳ್ಳಬಾರದು. ಅವರು ಏನ್ ಬೇಕಾದರೂ ಆಗಲಿ, ನಮ್ಮ ಅಭ್ಯಂತರ ಏನೂ ಇಲ್ಲ. ಅವಳು ಚೆನ್ನಾಗಿರಲಿ, ಎಂಎಲ್ಎ ಆಗಲಿ, ಎಂಪಿಯಾದ್ರೂ ಆಗಲಿ. ಅದನ್ನ ಕಟ್ಟಿಕೊಂಡು ನಮಗೆ ಏನೂ ಆಗೋದಿಲ್ಲ. ಆದರೆ ಆಕೆಗೆ ರವಿ ಹೆಸರನ್ನ ಹೇಳಿಕೊಳ್ಳುವ ಯಾವುದೇ ಅಧಿಕಾರ ಇಲ್ಲ ಎಂದಿದ್ದಾರೆ.