ಮದಕರಿ ನಾಯಕ ಥೀಮ್ ಪಾರ್ಕ್ ಜೊತೆಗೆ ಮದಕರಿನಾಯಕ ಜಯಂತಿ ಸರ್ಕಾರದಿಂದ ಆಚರಣೆ ಆಗಬೇಕು:ಮಹಂತೇಶ್ ನಾಯಕ.
1 min readಚಿತ್ರದುರ್ಗ: ಮದಕರಿನಾಯಕ ಜಯಂತಿಯನ್ನು ರಾಜ್ಯ ಸರ್ಕಾರದಿಂದ ಆಚರಣೆ ಮಾಡುಬೇಕು ಎಂದು ರಾಜವೀರ ಮದಕರಿನಾಯಕ ಗೌರವ ಸಂರಕ್ಷಣೆ ವೇದಿಕೆ ಅಧ್ಯಕ್ಷ ಮಹಂತೇಶ್ ಒತ್ತಾಯಿಸಿದರು.
ನಗರದ ಕೋಟೆ ಆವರಣದಲ್ಲಿ ನಾಯಕನಾಗು ನಾಡ ರಕ್ಷಕನಾಗು ಎಂಬ ಘೋಷ ವಾಕ್ಯದಡಿಯಲ್ಲಿ ಮದಕರಿಬ್ಯಾಡ್ ಕಾರ್ಯಕ್ರಮಲ್ಲಿ ಬ್ಯಾಂಡ್ ಧರಿಸಿ ಮಾತನಾಡಿ ರಾಜ್ಯ ಸರ್ಕಾರಕ್ಕೆ ಚಿತ್ರದುರ್ಗದಲ್ಲಿ ಮದಕರಿ ನಾಯಕ ಥೀಮ್ ಪಾರ್ಕ್ ನಿರ್ಮಿಸಲು ಆಗ್ರಹಿಸುವುದು ಮತ್ತು ಮದಕರಿನಾಯಕರ ಅಂತ್ಯ ಸಂಸ್ಕಾರವಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಮದಕರಿನಾಯಕ ಸ್ಮಾತಕ ನಿರ್ಮಾಣ ಮಾಡುವುದು. ನಾಡ ದೊರೆ ಮದಕರಿನಾಯಕ ಜಯಂತಿಯನ್ನು ಸರ್ಕಾರಿ ಜಯಂತಿಯನ್ನಾಗಿ ಆಚರಿಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದಾಗ ಟಿಪ್ಪು ವಿರುದ್ದ ಹೋರಟ ನಡೆದಂತಹ ಸಂದರ್ಭದಲ್ಲಿ ಬಿಜೆಪಿ ನಾಯಕರು ಕೊಟ್ಟಂತಹ ಮಾತು ಉಳಿಸಿಕೊಳ್ಳಬೇಕು ಮತ್ತು ಪ್ರತಿ ಜಿಲ್ಲೆ , ತಾಲೂಕು ಮತ್ತು ಪಂಚಾಯಿತಿ ಮಟ್ಟದಲ್ಲಿ ಮದಕರಿನಾಯಕ ಅಭಿಮಾನಿಗಳು , ಚಿತ್ರದುರ್ಗ ಇತಿಹಾಸದ ಅಭಿಮಾನಿಗಳು ಅಕ್ಟೋಬರ್ 13 ರಂದು ಮದಕರಿನಾಯಕ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ “ವಿ ವಾಂಟ್ ಮದಕರಿ ಥೀಮ್ ಪಾರ್ಕ್ ” ಎಂಬ ಪ್ಲೇ ಕಾರ್ಡ್ ಹಿಡಿದು ಸೇಲ್ಫಿ ಚಿತ್ರದೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಲು ಈ ಅಭಿಯಾನ ಪ್ರಾರಂಭ ಮಾಡಲಾಗಿದೆ. ನಾಯಕರು ಬ್ರಿಟಿಷ್ ರ ವಿರುದ್ದ ಅಲಗಲಿಯಲ್ಲಿ ಹೋರಡಿದರವರು.ಈ ನಾಡ ರಕ್ಷಣೆಗೆ ಬದ್ದರಾದವರು.ಮದಕರಿನಾಯರಂತಹ ಇತಿಹಾಸ ಪುರುಷರ ಆದರ್ಶ ನಾಡಿನ ಲಕ್ಷಾಂತರ ಯುವ ಸಮೂಹಕ್ಕೆ ಸ್ಪೂರ್ತಿ ನಮ್ಮ ಮದಕರಿ ಮತ್ತು ನಾಯಕರು ದೇಶಕ್ಕಾಗಿ ಜೀವ ಮತ್ತು ಜೀವನ ಅರ್ಪಿಸಲು ಸದಾ ಸಿದ್ದರಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮದಕರಿನಾಯಕ ರಾಜವಂಶಸ್ಥ ರಾಜಾ ಮದಕರಿನಾಯಕ,