ದೀಪಾವಳಿ ವೇಳೆಗೆ ಚಂದಾದಾರ ಪಿಎಫ್ ಬಡ್ಡಿ ಹಣ ಕೈ ಸೇರುವ ನಿರೀಕ್ಷೆ?
1 min readನವದೆಹಲಿ(ಅ.11): ನೌಕರರ ಭವಿಷ್ಯ ನಿಧಿ ಮಂಡಳಿ (ಇಪಿಎಫ್‌ಒ) 2019-20ನೇ ಸಾಲಿನ ಶೇ.8.5 ಪಿಎಫ್ ಬಡ್ಡಿ ದರದ ಮೊದಲ ಕಂತನ್ನು ದೀಪಾವಳಿ ವೇಳೆ ಚಂದಾದಾರರಿಗೆ ನೀಡುವ ನಿರೀಕ್ಷೆಯಿದೆ.
ಸೆಪ್ಟೆಂಬರ್ನಲ್ಲಿ ನಡೆದ ಸಭೆಯಲ್ಲಿ ಇಪಿಎಫ್‌ಒ ಕೇಂದ್ರೀಯ ಮಂಡಳಿ 2 ಕಂತುಗಳಲ್ಲಿ ಪಿಎಫ್ ಬಡ್ಡಿದರವನ್ನು ಚಂದಾದಾರರಿಗೆ ನೀಡುವುದಾಗಿ ನಿರ್ಧರಿಸಿತ್ತು. ಆ ಪ್ರಕಾರ ಶೇ.8.15 ಬಡ್ಡಿದರದ ಮೊದಲ ಕಂತು ದೀಪಾವಳಿಗೆ ಹಾಗೂ ಶೇ.0.35ರ 2ನೇ ಕಂತು ಡಿಸೆಂಬರ್ ಸಂದಾಯವಾಗುವ ಸಾಧ್ಯತೆ ಇದೆ.
ಚಂದಾದಾರರು ತಮ್ಮ ಪಿಎಫ್ ಹಣದ ಬ್ಯಾಲೆನ್ಸನ್ನು ಎಸ್ಸೆಮ್ಮೆಸ್ ಮೂಲಕವೇ ತಿಳಿದುಕೊಳ್ಳಬಹುದು. 7738299899 ಸಂಖ್ಯೆಗೆ ’EPFOHO’ ಎಂಬ ಸಂದೇಶ ಕಳಿಸಬೇಕು. ಹಿಂದಿಯಲ್ಲಿ ಮಾಹಿತಿ ಬೇಕು ಎಂದರೆ ‘EPFOHO UAN’ ಎಂಬ ಸಂದೇಶವನ್ನು ಅದೇ ಸಂಖ್ಯೆಗೆ ಕಳಿಸಬೇಕು. ಕನ್ನಡ ಸೇರಿ 9 ಭಾಷೆಗಳಲ್ಲಿ ಮಾಹಿತಿ ತೆಗೆದುಕೊಳ್ಳಬಹುದು.
ಚಂದಾದಾರರ ಯುಎಎನ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಸಂಖ್ಯೆಯು ಪಾನ್ ಖಾತೆ ಸಂಖ್ಯೆಯೊಂದಿಗೆ ಸಂಯೋಜಿತವಾಗಬೇಕು.
ಇಪಿಎಫ್‌ಒ ವೆಬ್ಸೈಟ್ನಲ್ಲಿನ ಪಾಸ್ಬುಕ್ ಮೂಲಕವೂ ಬ್ಯಾಲೆನ್ಸ್ ಪರಿಶೀಲನೆ ಮಾಡಬಹುದು. ಪಾಸ್ಬುಕ್ ನೋಡಲು ಯುಎಎನ್ ಸಂಖ್ಯೆ ಕಡ್ಡಾಯ.