ನಾಳೆ ಪವರ್ ಕಟ್ ನಿಮ್ಮ ಕಡೆ ಇರುತ್ತಾ ಇಲ್ವ ನೋಡಿ.
1 min readಚಿತ್ರದುರ್ಗ, ಅಕ್ಟೋಬರ್12:
ಚಿತ್ರದುರ್ಗ ನಗರ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ತುರುವನೂರು ರಸ್ತೆ ಅಗಲೀಕರಣ ಕಾಮಗಾರಿ ಇರುವುದರಿಂದ ಅಕ್ಟೋಬರ್ 13ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ ಬಿಎಲ್‍ಗೌಡ ಲೇಔಟ್, ತಿಪ್ಪಜ್ಜಿ ಸರ್ಕಲ್, ಎಸ್‍ಬಿಎಂ ಬ್ಯಾಂಕ್, ಲಕ್ಷ್ಮೀಬಜಾರ್, ಗಾಂಧಿ ಸರ್ಕಲ್, ಕೆಳಗೋಟೆ, ಸರ್ಕಾರಿ ಆಸ್ಪತ್ರೆ ಹಿಂಭಾಗ, ಜೋಗಿಮಟ್ಟಿ ರಸ್ತೆ, ಕರುವಿನಕಟ್ಟೆ ಸರ್ಕಲ್, ಕೋರ್ಟ್ ಆವರಣ, ಪ್ರವಾಸಿ ಮಂದಿರ, ಕೋಟೆ ಹಾಗೂ ಸಂತೆ ಮೈದಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.