ಪರವಾನಗಿ ಪಡೆಯದೆ ಆಕ್ರಮ ಗಣಿಗಾರಿಕೆ ಮಾಡಿದರೆ ಕೇಸ್ ದಾಖಲು: ತಹಶೀಲ್ದಾರ್
1 min readಚಿತ್ರದುರ್ಗ, ಅಕ್ಟೋಬರ್12:
ಯಾವುದೇ ಸರ್ಕಾರಿ ಜಮೀನಿನಲ್ಲಿ ಗಣಿಗಾರಿಕೆ ಮಾಡಿ, ಮಣ್ಣ ತೆಗೆಯಬೇಕಾಗಿದ್ದಲ್ಲಿ ಕರ್ನಾಟಕ ಖನಿಜ ನಿಯಮಾವಳಿ 3(ಎ)3(ಬಿ) ಅನ್ವಯ ಸಕ್ಷಮ ಪ್ರಾಧಿಕಾರದ ಪರವಾನಿಗೆ ಪಡೆದು ಸಾಗಿಸಬೇಕಾಗುತ್ತದೆ. ಆದರೆ ಯಾವುದೇ ಪರವಾನಿಗೆ ಇಲ್ಲದೆ ಗಣಿಗಾರಿಕೆ ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು, ಇಂತಹ ಪ್ರಕರಣಗಳಲ್ಲಿ ತೊಡಗಿರುವ ಯಂತ್ರೋಪಕರಣ ಹಾಗೂ ಸಾಗಾಟ ಮಾಡುವವರನ್ನು ಬಂಧಿಸಿ ಹಿಡಿದು ಎಂ.ಎಂ.ಸಿ ಕಾಯ್ದೆ ಅನ್ವಯ ದೂರು ದಾಖಲಿಸಲು ಸಂಬಂಧಿಸಿದ ಉಪನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇವರಿಗೆ ಹಾಗೂ ತಹಶೀಲ್ದಾರ್ ಇವರಿಗೆ ಉಪವಿಭಾಗಾಧಿಕಾರಿಗಳು ಸೂಚಿಸಿರುತ್ತಾರೆ.
ಅಲ್ಲದೇ ಪಟ್ಟಾ ಜಮೀನುಗಳಲ್ಲಿ ಗಣಿಗಾರಿಕೆ ಮಾಡಿ ಮಣ್ಣನ್ನು ತೆಗೆಯಲು ಎಂಎಂಸಿ ಕಾಯ್ದೆ 3(ಎ) ನಿಯಮದಲ್ಲಿ ತಿಳಿಸಿರುವಂತೆ ಉಪನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇವರ ಅನುಮತಿ ಅಗತ್ಯವಿದೆ.
ಒಂದು ವೇಳೆ ಅನುಮತಿ ಇಲ್ಲದೆ ಪಟ್ಟಾ ಜಮೀನುಗಳಲ್ಲಿ ಗಣಿಗಾರಿಕೆ ಮಾಡುತ್ತಿದ್ದಲ್ಲಿ ಭೂ ಮಂಜೂರಾತಿ ನಿಯಮ 9(1) ಮತ್ತು ಭೂ ಸುಧಾರಣಾ ನಿಯಮ 60 ರಂತೆ ಈ ಜಮೀನುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗುವುದು ಹಾಗೂ ಸಾಗಾಟ ವಾಹನಗಳನ್ನು ಹಿಡಿದು ದೂರು ದಾಖಲಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯೂರು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
============