ಕೋಟೆ ನಾಡಲ್ಲಿ ಇಷ್ಟಾರ್ಥ ಸಿದ್ದಿ ಕಾಳಮ್ಮನ ಮೊರೆ ಹೋದ ಸಾವಿರಾರು ಭಕ್ತರು.
1 min readವಿಶೇಷ ಸುದ್ದಿ:ಕೋಟೆ ಕಾಳಮ್ಮನಿಗೆ ನಡೆದುಕೊಂಡರೆ ಕೈ ಬಿಡುವುದಿಲ್ಲ, ಇಷ್ಟಾರ್ಥ ಸಿದ್ದಿಗೆ ಕಾಳಮ್ಮ ಮೋರೆ ಹೋಗುವ ಸಾವಿರಾರು ಭಕ್ತರಿಗೆ ವರಪ್ರಸಾದಿನಿಯಾಗಿ ಹೊರಹೊಮ್ಮಿದ ಕಾಳಮ್ಮ.
ನಗರದ ಕೋಟೆ ಹತ್ತಿರದಲ್ಲಿನ ಪಾಳೇಗಾರರ ಕಾಲದಲ್ಲಿ ನಿರ್ಮಿತವಾದ ದುರ್ಗದ ಐತಿಹಾಸಿಕ ದೇವಸ್ಥಾನಗಳಲ್ಲಿ ಕಾಳಮ್ಮನ ದೇವಸ್ಥಾನ ಸಹ ಒಂದಾಗಿದೆ.
ಕೋಟೆನಾಡು ಎಂದ ತಕ್ಷಣ ನಾಯಕರ ಆಳ್ಬಿಕೆ , ಹಲವು ರಾಜರುಗಳ ಹೆಸರುಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ದುರ್ಗ ಆಳ್ವಿಕೆ ನಡೆಸಿದ ಪ್ರಸಿದ್ಧ ಗಂಡೆದೆಯ ರಾಜ ಕಸ್ತೂರಿ ರಂಗಪ್ಪನಾಯಕ ಅವರಿಗೆ ಕಾಳಮ್ಮನ ದೇವಸ್ಥಾನ ನಿರ್ಮಿಸಿದ ಕೀರ್ತಿ ಸಲ್ಲುತ್ತದೆ.
ಕಾಳಮ್ಮನ ದೇವಸ್ಥಾನ ಇಂದು ನಿನ್ನೆಯದಲ್ಲ ಸುಮಾರು 600-650 ವರ್ಷಗಳ ಇತಿಹಾಸ ದೇವಸ್ಥಾನಕ್ಕೆ ಇದೆ. ಕಾಳಮ್ಮನ ದೇವಸ್ಥಾನಕ್ಕೆ ದೊಡ್ಡ ಭಕ್ತ ಸಮೂಹ ಇದೆ.ಕಾಳಮ್ಮ ಭಕ್ತರ ಕಷ್ಟಗಳಿಗೆ ಪರಿಹಾರ ನೀಡುತ್ತಾಳೆ. ಕಾಳಮ್ಮ ದೇವಸ್ಥಾನಕ್ಕೆ ನಡೆದುಕೊಳ್ಳವವರು ಹೇಳುವಂತೆ ಕಾಳಮ್ಮ ನಡೆದುಕೊಂಡವರಿಗೆ ಇಷ್ಟಾರ್ಥ ಸಿದ್ಧಿ ಗ್ಯಾರೆಂಟಿ. ಶಾಂತಿಯಿಂದ ದೇವಸ್ಥಾನದಲ್ಲಿ ಸ್ವಲ್ಪ ಒತ್ತು ಕುಳಿತರೆ ಸಾಕು ಮನಸ್ಸಿಗೆ ನೆಮ್ಮದಿ ಎನ್ನುತ್ತಾರೆ ಭಕ್ತ ವೃಂದ.
ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ದೀಪ ಅಲಂಕಾರ ನಡೆಯುತ್ತದೆ. ಪ್ರತಿ ವಾರ ಪ್ರಸಾದ ಇರುತ್ತದೆ. 1 ಗಂಟೆಗಳ ಕಾಲ ಭಕ್ತರು ಪ್ರಾರ್ಥನೆ ಮಾಡುತ್ತಾರೆ.
ಯುವಕ ,ಯುವತಿಯರಿಗೆ , ಮಕ್ಕಳು , ಮಹಿಳೆಯರು , ಕುಟುಂಬ ಸಮೇತ ಬಂಧು ಬಳಗ ಬಂದು ಕಾಳಮ್ಮಗೆ ಭಕ್ತಿ ಸಮರ್ಪಿಸುತ್ತಾರೆ. ಹಲವು ಮಹಿಳೆಯರು ಕುಟುಂಬ ಸಮಸ್ಯೆಗಳಿಗೆ ಕಾಳಮ್ಮನ ಮೊರೆ ಹೋದ ಮೇಲೆ ಸುಂದರ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಜೀವನ ಹೊಸ ಬದಲಾವಣೆ ಆಗಿರುವುದನ್ನು ಭಕ್ತರು ತಿಳಿಸುತ್ತಾರೆ.
ಅನೇಕ ಯುವಕ ,ಯುವತಿಯರಿಗೆ ಸರ್ಕಾರಿ ಉದ್ಯೋಗ ಸಹ ಅವರ ಶ್ರಮದ ಜೊತೆಗೆ ಕಾಳಮ್ಮನ ಮಹಿಮೆಯಿಂದ ಉದ್ಯೋಗ ಸಹ ದೊರಕಿರುವ ಸಾಕಷ್ಟು ನಿದರ್ಶನಗಳು ಇವೆ. ಭಕ್ತರು ತಮ್ಮ ಹರಕೆಗಳು ಕಟ್ಟಿಕೊಂಡು ತೀರಿಸಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಅನೇಕರು ಸೀರೆ, ತಾಳಿ, ಬೆಳ್ಳಿ ಪಾದಿಕೆ , ಗಂಗೆಯ ಗಡಿಗೆಗಳನ್ನು, ಗಂಟೆಗಳು, ಕೀರಿಟಗಳು ಹೀಗೆ ತಮ್ಮ ತಮ್ಮ ಹರಕೆ ಒತ್ತುಕೊಂಡಂತೆ ಕಾಳಮ್ಮನಿಗೆ ಭಕ್ತ ಅರ್ಪಿಸಿ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ದೇವಸ್ಥಾನ ಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದ್ದು ನೋಡಲು ಸಂತೋಷ ಅನಿಸುತ್ತದೆ. ಪ್ರವಾಸಿಗರು ಸಹ ದೇವಸ್ಥಾನ ವಿಕ್ಷಣೆ ಮಾಡಿಕೊಂಡು ಹೋಗುತ್ತಿದ್ದಾರೆ.
ಬನ್ನಿಮಹಾಕಾಳಿ ಸಹ ಈ ದೇವಸ್ಥಾನದ ಬಳಿ ನೆಲೆಸಿದ್ದಾಳೆ. ವಿಘ್ನೇಶ್ವರ ದೇವಸ್ಥಾನ, ಕಲ್ಲಿನಿಂದ ಕೆತ್ತಿದ ಆಂಜನೇಯ ಸ್ವಾಮಿ, ನವಗ್ರಹಗಳ ದೇವಸ್ಥಾನ, ಕಾಳಮ್ಮನ ಹಸುಗಳು ಹೀಗೆ ಈ ದೇವಸ್ಥಾನಕ್ಕೆ ಒಳಗೆ ಹೋಗಿ ಹೊರಗಿ ಬರುವಷ್ಟರಲ್ಲಿ ಶಾಂತಿಯಿಂದ ಬರುತ್ತಾರೆ. ಎಂತಹ ಕೋಪ ಶಮನ ಮಾಡಿ ಸಂತೋಣ ನೀಡುವಳು ಕಾಳಮ್ಮ ರಾಮಚಂದ್ರ ಆಚಾರ್ ಪ್ರಧಾನ ಆರ್ಚಕರಾಗಿ ಕಾಳಮ್ಮನ ಸೇವೆ ಮಾಡುತ್ತಿದ್ದಾರೆ.