ಸಮುದಾಯ ಭವನದ ಸ್ವಚ್ಚತೆಗೆ ಆದ್ಯತೆ ನೀಡಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
1 min readಚಿತ್ರದುರ್ಗ: ಸಮುದಾಯ ಭವನದ ತುಂಬಾ ಸುಂದರವಾಗಿ ನಿರ್ಮಾಣವಾಗಿದೆ. ನಿರ್ವಹಣೆ ಜೊತೆಗೆ ಸ್ವಚ್ಚತೆಯನ್ನು ಕಾಪಡಿಕೊಳ್ಳಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಸಿ.ಕೆ.ಪುರ ಕೆಳಗೋಟೆಯಲ್ಲಿ ನಿರ್ಮಿಸಿರುವ “ಹರಳಯ್ಯ” ಸಮುದಾಯ ಭವನ ಉದ್ಘಾಟನೆ ಮಾಡಿ ಮಾತನಾಡಿದರು.
ಅತಿ ಹೆಚ್ಚು ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ, ಹಿಂದುಳಿದ ಕುಟುಂಬಗಳ ಜನರು ಇರುವ ಪ್ರದೇಶವಾಗಿದೆ. ನಗರದಲ್ಲಿ ಬಡವರು ಶುಭ ಸಮಾರಂಭಗಳನ್ನು ಮಾಡಲು ಸಾಕಷ್ಟು ವೆಚ್ಚ ದುಬಾರಿಯಾಗಿದೆ. ಬಡವರು ಅಂತಹ ಸ್ಥಳದಲ್ಲಿ ಮಾಡಲು ಆಗಲ್ಲ ಹಾಗಾಗಿ ಬಡವರ ಅನುಕೂಲಕ್ಕಾಗಿ ಈ ಭಾಗದ ಮುಂಖಡರು ತಿಳಿಸಿದ್ದರಿಂದ ಮೊದಲು 10 ಲಕ್ಷ ಹಾಗೂ ಕಡಿಮೆ ಆದ ಕಾರಣ ಮತ್ತೆ 10 ಲಕ್ಷ ನೀಡಿದ್ದೇನೆ. ಈಗಿನ ಉಪರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಅವರು ಸಹ 10 ಲಕ್ಷ ಹಣ ನೀಡಿ ಒಟ್ಟು 30 ಲಕ್ಷ ವೆಚ್ಚದಲ್ಲಿ ಸುಂದರ ಭವನ ನಿರ್ಮಾಣವಾಗಿದೆ. ಸಮುದಾಯ ಭವನಕ್ಕೆ ಇತರೆ ವಸ್ತಯಗಳಾದ ಪಾತ್ರೆ ಸಾಮಾಗ್ರಿಗಳಿಗೆ ಶಾಸಕರ ನಿಧಿ ಅಥವಾ ನಗರಸಭೆ ಮೂಲಕ ಕೊಡಿಸಲು ಪ್ರಯತ್ನಿಸುತ್ತೇನೆ. ಶಾಮಿಮಾನ ಸಹ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ.
ಸಾರ್ವಜನನಿಕರು ಜೊಗೆ ನಿರ್ವಹಣೆ ಮಾಡುವವರು ಭವನದ ಸ್ವಚ್ಚತೆ ಕಾಪಡಿಕೊಳ್ಳಬೇಕು. ಬಡ ಪುರುಷ ಅಥವಾ ಮಹಿಳೆ ಒಬ್ಬರಿಗೆ ಕೆಲಸ ನೀಡಿ ನಿತ್ಯ ಅಚ್ಚುಕಟ್ಟಾಗಿ ಮಾಡಲು ತಿಳಿಸಬೇಕು. ಸಮುದಾಯ ಭವನದ ನಿರ್ವಹಣೆಗೆ ಇಂತಿಷ್ಟು ಹಣ ಪ್ರತಿ ಕಾರ್ಯಕ್ರಮಕ್ಕೆ ನಿಗಧಿ ಮಾಡಬೇಕು ಎಂದರು. ಕೊಟ್ಟ ಹಣವನ್ನು ದುಂದುವೆಚ್ಚ ಆಗದಂತೆ ಉತ್ತಮ ಭವನ ನಿರ್ಮಾಣ ಮಾಡಿದ್ದಾರೆ. ಮುಂದೆ ಅದಕ್ಕೆ ಬೇಕಾದ ಮೂಲ ಸೌಕರ್ಯಕ್ಕೆ ಸಹಕಾರ ನೀಡಿತ್ತೇನೆ. ಶೌಚಾಲಯ ಸಹ ನೀರಿನ ವ್ಯವಸ್ಥೆ ಮೂಲಕ ಸ್ವಚ್ಚತೆ ಕಾಪಡುವಂತೆ ಮನವಿ ಮಾಡಿದರು.
ನಗರಸಭೆ ಸದಸ್ಯರಾದ ಅಂಗಡಿ ಮಂಜುನಾಥ್, ಹರೀಶ್ ,ತಾರಕೇಶ್ವರಿ, ಭಾಗ್ಯಮ್ಮ, ಮಾಜಿ ನಗರಸಭೆ ಸದಸ್ಯ ತಿಪ್ಪೇಸ್ವಾಮಿ, ವಕೀಲರಾದ ರಾಜಣ್ಣ, ವೆಂಕಟೇಶ್, ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫಾತರಾಜನ್ ಬಿಜೆಪಿ ಮುಖಂಡರು ಹಾಜರಿದ್ದರು.