ಗುಣಮಟ್ಟದ ರಸ್ತೆಗಳಿಗೆ ಒತ್ತು : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
1 min readಚಿತ್ರದುರ್ಗ: ಗುಣಮಟ್ಟದ ರಸ್ತೆಗಳಿಗೆ ಆದ್ಯತೆ ನೀಡಿ ಹಳ್ಳಿಗಳ ಅಭಿವೃದ್ಧಿಗೆ ಎಲ್ಲಾ ಸಹಕಾರ ನೀಡುತ್ತೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಇಂಗಳದಾಳ್ ಲಂಬಾಣಿಹಟ್ಟಿ ಮತ್ತು ಮದಕರಿಪುರ ಲಂಬಾಣಿಹಟ್ಟಿ ಕಾಲೋನಿಯಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು ಮಾತನಾಡಿದರು.
ತಾಂಡ ಅಭಿವೃದ್ಧಿ ನಿಗಮದಿಂದ ಇಂಗಳದಾಳ್ ಲಂಬಾಣಿಹಟ್ಟಿ ಎರಡು ರಸ್ತೆಗಳಿಗೆ 20 ಲಕ್ಷ ಮತ್ತು ಮದಕರಿಪುರ ಲಂಬಾಣಿಹಟ್ಟಿ ಎರಡು ರಸ್ತೆಗಳಿಗೆ 20 ಲಕ್ಷ ಹಣ ನೀಡಿದ್ದೇನೆ ಎಂದರು.
ಗ್ರಾಮದ ಜನರು ಚರಂಡಿ, ನೀರಿಮ ಪೈಪ್ ಲೈನ್, ಶೌಚಾಲಯ ಪೈಪ್ ಲೈನ್ ಗಳನ್ನು ರಸ್ತೆ ಮಾಡುವ ಮುಂಚೆ ಮಾಡಿಕೊಳ್ಳಿ ಒಂದು ವೇಳೆ ರಸ್ತೆಯಾದ ನಂತರ ಮತ್ತೆ ಅನಗತ್ಯವಾಗಿ ರಸ್ತೆ ಹಗೆಯಬೇಕು. ಸರ್ಕಾರದಿಂದ ಒಂದೇ ಭಾಗಕ್ಕೆ ಎರಡು ಬಾರಿ ರಸ್ತೆ ಹಾಕಲು ಆಗಲ್ಲ ಎಂದು ಜನರಿಗೆ ತಿಳಿಸಿದರು.
ಮುಖಂಡರಾದ ವೆಂಕಟೇಶ್, ಮಾದನಾಯ್ಕ, ಉಮಲನಾಯ್ಕ, ಚಂದ್ರು, ಜಿ.ಟಿ.ನಾಗರಾಜ್,ಅಂಗಡಿ ಹನುಮಂತಪ್ಪ, ಪಿ.ಓ.ತಿಮ್ಮಯ್ಯ ಇದ್ದರು.