May 23, 2024

Chitradurga hoysala

Kannada news portal

ಶಿಕ್ಷಕರು ಸಹ ಕೋವಿಡ್ ವಾರಿಯರ್ಸ್‌ : ವೈ.ಎ.ನಾರಾಯಣಸ್ವಾಮಿ

1 min read

ಚಿತ್ರದುರ್ಗ ಜ. ೦೯
ಶಿಕ್ಷಕರನ್ನು ಸಹಾ ಕೂರೋನ ವಾರಿಯನ್ಸ್ ಎಂದು ಪರಿಗಣಿಸಬೇಕು, ಈ ಸಮಯದಲ್ಲಿ ಮೃತಪಟ್ಟ ಶಿಕ್ಷಕರಿಗೆ ವಾರಿಯನ್ಸ್‌ಗೆ ನೀಡುವ ಪರಿಹಾರವನ್ನು ಇವರಿಗೂ ಸಹಾ ನೀಡಬೇಕು ಎಂದು ಸರ್ಕಾರವನ್ನು ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಸಂವಾದ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರೋನಾ ಮಹಾಮಾರಿಯಿಂದಾಗಿ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ ಶಾಲೆ ಇಲ್ಲದೆ ಮಕ್ಕಳು ಹಾಳಾಗುತ್ತಿದ್ದಾರೆ. ಅಲ್ಲದೆ ಕೆಲವರು ಬಾಲ ಕಾರ್ಮಿಕರಾಗಿದ್ದಾರೆ ಇದನ್ನು ತಪ್ಪಿಸಲು ಸರ್ಕಾರ ತಜ್ಞರ ಸಮಿತಿಯನ್ನು ನೇಮಕ ಮಾಡುವುದರ ಮೂಲಕ ಅವರ ಶಿಫಾರಸ್ಸಿನಂತೆ ಶಾಲಾ-ಕಾಲೇಜನ್ನು ಪ್ರಾರಂಭ ಮಾಡಲಾಗಿದೆ. ಇದರಿಂದ ಮಕ್ಕಳು ಸಹಾ ಉತ್ಸಾಹದಿಂದ ಶಾಲೆ-ಕಾಲೇಜಿಗೆ ಆಗಮಿಸಿದ್ದಾರೆ ಎಂದರು.
ಈಗಾಗಲೇ ನನ್ನ ಕ್ಷೇತ್ರದ ಹಲವಾರು ಶಾಲೆ-ಕಾಲೇಜಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿದ್ದೇನೆ. ಅವರು ಸಹಾ ಶಾಲೆ ಪ್ರಾರಂಭವಾಗಿದ್ದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪರೀಕ್ಷೆಯನ್ನು ಬರೆಯಲು ಸಹಾ ಸಿದ್ದತೆಯನ್ನು ನಡೆಸಿದ್ದಾರೆ. ನಮ್ಮ ಮಕ್ಕಳು ಕರೋನಾದಿಂದ ಪಾಸಾಗದೆ ಪರೀಕ್ಷೆಯನ್ನು ಬರೆದು ಪಾಸಾಗಬೇಕಿದೆ ಅಂತಹ ಶಕ್ತಿ ಇದೆ ಅದನ್ನು ಬಳಕೆ ಮಾಡಬೇಕಿದೆ ಎಂದು ಅವರು, ಸರ್ಕಾರವೂ ಸಹಾ ಈಗ ಇರುವಷ್ಟು ಸಮಯಕ್ಕೆ ಅನುಗುಣವಾಗಿ ಪಠ್ಯವನ್ನು ನೀಡಲಿದೆ ಅದಕ್ಕೆ ನಮ್ಮ ಶಿಕ್ಷಕರು ಭೋಧನೆ ಮಾಡುವುದರ ಮೂಲಕ ಮಕ್ಕಳು ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ದೇಶಕ್ಕೆ ಬಂದ ಕರೋನಾ ಮಹಾ ಮಾರಿಯನ್ನು ಎಲ್ಲರು ಸೇರಿ ಹೋಡೆದೂಡಿಸಬೇಕಿದೆ, ಇದಕ್ಕೆ ಎಲ್ಲರ ಸಹಾಯ, ಸಹಕಾರ ಅಗತ್ಯ ಇದೆ ಈ ಹಿನ್ನಲೆಯಲ್ಲಿ ನಮ್ಮ ಶಿಕ್ಷಕರು ಸಹಾ ಕರೋನಾ ವಾರಿಯಸ್ಸ್ ಆಗಿ ಈ ಸಮಯದಲ್ಲಿ ಕೆಲಸ ಮಾಡಿದ್ದಾರೆ. ಇದ್ದಲ್ಲದೆ ಬೇರೆ ಸಮಯದಲ್ಲಿಯೂ ಸಹಾ ಶಿಕ್ಷಕರನ್ನು ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ, ಈ ಹಿನ್ನಲೆಯಲ್ಲಿ ಶಿಕ್ಷಕರನ್ನು ಕರೋನಾ ವಾರಿಯಸ್ಸ್ ಎಂದು ಪರಿಗಣಸಬೇಕು ಅವರಿಗೆ ಬೇರೆ ವಾರಿಯಸ್ಸ್‌ಗೆ ನೀಡುವ ಸೌಲಭ್ಯಗಳನ್ನು ನೀಡಬೇಕು ಇದರ ಜೊತೆಯಲ್ಲಿ ಕರೋನಾ ಸಮಯದಲ್ಲಿ ಕೆಲಸ ಮಾಡಿ ಮೃತಪಟ್ಟ ಶಿಕ್ಷಕರಿಗೆ ಸರ್ಕಾರ ಪರಿಹಾರವನ್ನು ವಾರಿಯಸ್ಸ್‌ಗೆ ನೀಡಿದಷ್ಟು ನೀಡಬೇಕೆಂದು ಆಗ್ರಹಿಸಿದ್ದು ಶಿಕ್ಷಕರಿಗೆ ಮೊದಲಿನ ಸಾಲಿನಲ್ಲಿಯೇ ವಾಕ್ಸಿನ್ ನೀಡಬೇಕಿದೆ, ಶಿಕ್ಷಣ ಇಲಾಖೆ ಎಂದರೆ ಸಮಾಜವನ್ನು ಕಟ್ಟುವ ಇಲಾಖೆಯಾಗಿದೆ ಎಂದ ಅವರು, ಈ ಸಂಬಂಧ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗುವುದೆಂದು ಇದರ ಬಗ್ಗೆ ಯಾವುದೇ ರಾಜಿ ಇಲ್ಲ ಎಂದು ಹೇಳೀದರು.
ಇತ್ತೀಚಿನ ದಿನದಲ್ಲಿ ಶುದ್ದವಾದ ಕುಡಿಯುವ ನೀರು ಇಲ್ಲದೆ ಹಲವಾರು ಖಾಯಿಲೆಗಳು ಬರುತ್ತಿದೆ ಅಲ್ಲಿದೆ ಸರ್ಕಾರಿ ಶಾಲೆಗೆ ಗ್ರಾಮಾಂತರ ಪ್ರದೇಶದಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ ಇದರಿಂದ ಅವರಿಗೆ ಶುದ್ದವಾದ ಕುಡಿಯುವ ನೀರನ್ನು ನೀಡಬೇಕಿದೆ ಇದ್ದಲ್ಲದೆ ಬಿಸಿಯೂಟಕ್ಕೂ ಸಹಾ ಬಳಕೆ ಮಾಡಬಹುದಾಗಿದೆ ಎಂದ ಅವರು ವಿಧಾನ ಪರಿಷತ್ ಸದಸ್ಯನಾದ ನಾನು ನನ್ನ ಕ್ಷೇತ್ರದ ೧೦೦೦ ಶಾಲೆಗಳಿಗೆ ಶುದ್ದ ಕುಡಿಯುವ ನೀರಿನ ಘಟಕವನ್ನು ನೀಡಲು ತೀರ್ಮಾನ ಮಾಡಲಾಗಿದೆ ೧೮ ರಿಂದ ೨೦ ಕೋಟಿ ವೆಚ್ಚವಾಗಲಿದ್ದು ಇದಕ್ಕೆ ಸರ್ಕಾರದ ಮಟ್ಟದಲ್ಲಿ ಹಣವನ್ನು ಬಿಡುಗಡೆ ಮಾಡಿಸಲು ಸಿದ್ದತೆ ನಡೆದಿದೆ, ಈಗಾಗಲೇ ೧೦೦ ಶಾಲೆಗಳಿಗೆ ನೀಡಲಾಗಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ೩೩ ಶಾಲೆಗಳಿಗೆ ನೀಡಲಾಗಿದೆ ಎಂದರು.
ವಿಷಾಧ ; ವಿಧಾನ ಪರಿಷತ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ವಿಷಾಧವನ್ನು ವ್ಯಕ್ತಪಡಿಸಿದ ನಾರಾಯಣಸ್ವಾಮಿ, ಇದು ನಡೆಯಬಾರದಿತ್ತು ಆದರೆ ನಡೆದಿದೆ ಇದರ ಬಗ್ಗೆ ನನ್ನನು ಸೇರಿಕೊಂಡು ಆತ್ಮವಲೋಕನ ಮಾಡಿಕೊಳ್ಳಬೇಕಿದೆ, ವಿಧಾನಪರಿಷತ್‌ನಲ್ಲಿ ಈ ಘಟನೆ ಶೋಭೆ ತರುವಂತದ್ದ ಅಲ್ಲ, ಘಟನೆ ನಡೆಯಬಾರದಿತ್ತು ಆದರೆ ಘಟನೆ ನಡೆದಿದೆ ಯಾಕೆ ನಡೆಯಿತು ಎನ್ನುವುದಕ್ಕಿಂತ ನಡೆದಿದ್ದು ವಿಷಾಧನೀಯ ಇದರ ತನಿಖೆ ಪ್ರಾರಂಭವಾದಾಗ ಯಾರ ಬುಡಕ್ಕೆ ಬರುತ್ತದೆ ಗೋತ್ತಿಲ್ಲ ಎಂದು ನಾರಾಯಣಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಯ್ಯ, ಕಾಲೇಜಿನ ಪ್ರಾಚಾರ್ಯರಾದ ನಾಗರಾಜ್ ಉಪ ಪ್ರಾಂಶುಪಾಲರಾದ ಜಯ್ಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *