ರೈತ ಹೋರಟವನ್ನು ಭಯೋತ್ಪಾದಕತೆಗೆ ಹೋಲಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್
1 min readಕೊಪ್ಪಳ :ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನನ್ನು ವಿರೋಧಿಸಿ ರೈತರು ಜನ ಗಣರಾಜ್ಯೋತ್ಸವವನ್ನು ಆಚರಿಸಿದ್ದಾರೆ. ದೆಹಲಿ ಸೇರಿದಂತೆ ಬೆಂಗಳೂರಿನಲ್ಲಿ ರೈತರು ಬೃಹತ್ ಟ್ರಾಕ್ಟರ್ ರ್‍ಯಾಲಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ದೇಶದಾದ್ಯಂತ ರೈತರ ಪರ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು ಕೇಂದ್ರ ಹಾಗೂ ರಾಜ್ಯದ ಸರ್ಕಾರಗಳು ಹಾಗೂ ಸರ್ಕಾರದ ಅಡಿಯಲ್ಲಿರುವ ಪೊಲೀಸರು ರೈತರ ಅಲೆಗೆ ಬೆಚ್ಚಿ ಬಿದ್ದಿದೆ.
ಸದಾ ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಿರುವ ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟಿಲ್ ಮಾತ್ರ ಮತ್ತೇ ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ತಮ್ಮ ನಾಲಗೆಯನ್ನು ಹರಿಯಬಿಟ್ಟಿದ್ದಾರೆ. ಇಂದಿನ ರೈತ ಹೋರಾಟವನ್ನು ಅವರು ’ಭಯೋತ್ಪಾದಕ ಕೃತ್ಯ’ ಎಂದು ಹೇಳಿದ್ದಾರೆ.
ಕೊಪ್ಪಳದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಬಿ.ಸಿ. ಪಾಟೀಲ್, “ಇದು ರೈತರ ಪ್ರತಿಭಟನೆಯಲ್ಲ, ಭಯೋತ್ಪಾದಕರ ಕೃತ್ಯ. ಖಾಲಿಸ್ತಾನ ಮತ್ತು ಕಾಂಗ್ರೆಸ್‌ನವರು ಇದರ ಹಿಂದೆ ಇದ್ದು, ಮೋದಿ ಬೆಳವಣಿಗೆ ಸಹಿಸದೆ ಹತಾಶರಾದವರು ಈ ರೀತಿಯ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ. ರೈತ ಪ್ರಧಾನಿಯಾಗಿ ಕೆಂಪುಕೋಟೆಯಲ್ಲಿ ಭಾವುಟ ಹಾರಿಸಲಿ ನಾನು ಅದನ್ನು ಸ್ವಾಗತಿಸುತ್ತೇನೆ” ಎಂದು ಹೇಳಿದ್ದಾರೆ.