ಸಿ.ಸಿ.ರಸ್ತೆ ನಗರ ಎಂಬ ಹೆಗ್ಗಳಿಕೆಗೆ ಚಿತ್ರದುರ್ಗ ಪಾತ್ರವಾಗಲಿದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
1 min readಚಿತ್ರದುರ್ಗ: 2022 ಮಾರ್ಚ್ ಒಳಗೆ ನಗರದ ಎಲ್ಲಾ ರಸ್ತೆ ಕಾಮಗಾರಿ ಪೂರ್ಣವಾಗಲಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಜೋಗಿಮಟ್ಟಿ ರಸ್ತೆಯ ಕೈಗಾರಿಕೆ ಕಚೇರಿ ಬಳಿ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ನಗರದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 150 ಕೋಟಿ ರೂ ವೆಚ್ಚದಲ್ಲಿ ಸಿ.ಸಿ. ರಸ್ತೆಗಳು ಮದಕರಿ ಸರ್ಕಲ್ ಯಿಂದ ಜೋಗಿಮಟ್ಟಿ ರಸ್ತೆ,
ರಾಗಿ ಮುರಿಗೆಪ್ಪ ಬಡಾವಣೆ, ನೆಹರೂನಗರ ಸಿ.ಸಿ ರಸ್ತೆ , ಮುಚ್ಚ ಕೇರಿ, ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಸಿ.ಸಿ ರಸ್ತೆ, ಕರುವಿನಕಟ್ಟೆ ಸರ್ಕಲ್ ರಸ್ತೆ, ಚಳ್ಳಕೆರೆ ಗೇಟ್ ನಿಂದ ಪ್ರವಾಸಿ ಮಂದಿರ ರಸ್ತೆ, ಗಾಂಧಿ ಸರ್ಕಲ್ ನಿಂದ ಜೆಎಂಟಿ ಸರ್ಕಲ್, ಕನಕ ಸರ್ಕಲ್ ವರೆಗೆ ಸಿ.ಸಿ.ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದೆ.
ರಸ್ತೆ ಅಗಲೀಕರಣ ಸಂದರ್ಭದಲ್ಲಿ ಸುಮಾರು 30 ಜನರು ಅಗಲೀಕರಣ ಪ್ರಶ್ನಿಸಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಅದರಲ್ಲಿ 17 ಕೇಸ್ ಗಳು ನಗರಸಭೆ ಕೋರ್ಟ್ ನಲ್ಲಿ ಗೆಲುವು ಸಾಧಿಸಿದ್ದಾರೆ. ಹಲವು ವರ್ಷಗಳ ಹಿಂದೆ ನೀರಿನ ಅಭಾವದಿಂದ ಕೇಲವು ನಗರದ ಕೇಲವು ಭಾಗಗಳಲ್ಲಿ ರಸ್ತೆ ಮಧ್ಯೆಯಲ್ಲಿ ನೀರಿನ ಟ್ಯಾಂಕ್ ಕಟ್ಟಿದ್ದು ಜನರು ಒಡೆಯುವುದು ಬೇಡ ಎಂದು ಹೇಳುತ್ತಿದ್ದು ನಂತರ ಅವರ ಬಳಿ ಮಾತನಾಡಿ ಟ್ಯಾಂಕ್ ತೆರವುಗೊಳಿಸಲು ಮನವೊಲಿಸಿದ್ದೇನೆ. ರಸ್ತೆ ಅಗಲೀಕರಣಕ್ಕೆ ಅಡ್ಡಿಪಡಿಸಿವರನ್ನು ಕರೆದು ಮನವೊಲಿಸಿದ್ದೇನೆ ಎಂದರು.
2022 ಮಾರ್ಚ್ ಒಳಗೆ ಎಲ್ಲಾ ರಸ್ತೆಗಳು ಮುಗಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಹಾಗೂ ಫೆಬ್ರವರಿ ಒಳಗೆ ನಗರದ ಒಳ ರಸ್ತೆಗಳು ಪೂರ್ಣ ಮಾಡಿ ಹಣ ಖಾಲಿ ಮಾಡದೆ ಹೋದರೆ ಹಣ ಮಾರ್ಚ್ ಗೆ ಸರ್ಕಾರಕ್ಕೆ ವಾಪಸ್ಸು ಹೋಗುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರದ ಮುಖಂತರ ಕಾಮಗಾರಿ ಮುಗಿಸಿ ಚಿತ್ರದುರ್ಗ ಎಲ್ಲಾ ರಸ್ತೆಗಳು ಸಿ.ಸಿ.ರಸ್ತೆ ಮಾಡಿ ಸಿ.ಸಿ.ರಸ್ತೆ ನಗರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತೇವೆ ಎಂದು ತಿಳಿಸಿದರು. ನಗರಸಭೆ ಸದಸ್ಯರಾದ ವೆಂಕಟೇಶ್, ನಗರಸಭೆ ಪೌರಯಕ್ತ ಹನುಮಂತರಾಜು ಇದ್ದರು.