ಐದು ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹಾಕಿಸಿ:ಭುವನ ಕರುಣ್
1 min readಚಿತ್ರದುರ್ಗ: ನಗರದ ವಿಂಡ್ ಮಿಲ್ ಸಿಟಿ ರೋಟರಿ ಕ್ಲಬ್ ವತಿಯಿಂದ ಸರ್ಕಾರಿ ಬಸ್ ನಿಲ್ದಾಣ ಹಾಗೂ ಪ್ರಧಾನ ಅಂಚೆ ಕಚೇರಿಯ ಹತ್ತಿರ ಇರುವ ಫೋಲಿಯೋ ಲಸಿಕೆ ಕೇಂದ್ರದಲ್ಲಿ ಫೋಲಿಯೋ ಲಸಿಕಾ ಅಭಿಯಾನ ಕೈಗೊಂಡು ಮಕ್ಕಳಿಗೆ ಪೋಲಿಯೊ ಹನಿಗಳನ್ನು ಹಾಕಲಾಯಿತು.
ವಿಂಡ್ ಮಿಲ್ ಸಿಟಿ ಕ್ಲಬ್ ಅಧ್ಯಕ್ಷರಾದ ಭುವನ ಕರುಣ್ ಮಾತನಾಡಿ ಪ್ರತಿಯೊಬ್ಬ ನಾಗರಿಕರು ತಮ್ಮ ಐದು ವರ್ಷದ ಮಕ್ಕಳಿಗೆ ತಪ್ಪದೇ ಪೋಲಿಯೋ ಹಾಕಿಸಿ ಪೋಲಿಯೋ ಮುಕ್ತ ಸಮಾಜವನ್ನು ನಿರ್ಮಿಸುವಂತೆ ಮನವಿ ಮಾಡಿದರು.
ಪೋಲಿಯೊ ಲಸಿಕಾ ಕೇಂದ್ರದಲ್ಲಿದ್ದ ಸಿಬ್ಬಂದಿಯವರಿಗೆ ಹಣ್ಣು ವಿತರಿಸಿ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಲಾಯಿತು.
ಪೋಲಿಯೋ ಲಸಿಕಾ ಕೇಂದ್ರದಲ್ಲಿ ಹಾಜರಿದ್ದ ಮಕ್ಕಳಿಗೆ ಹಾಗೂ ಪೋಷಕರಿಗೆ ಬಿಸ್ಕೆಟ್ ವಿತರಿಸಲಾಯಿತು
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ AG ಅನಿತಾ ಮಲ್ಲಿಕಾರ್ಜುನ್, ರೋಟರಿ ಕೌನ್ಸಿಲರ್ ಆದ ವೀರೇಶ್ ಹಾಗೂ ಸರೋಜಮ್ಮ ಸೋಮಶೇಖರ್ ಕಾರ್ಯದರ್ಶಿಯವರಾದ ಕವಿತಾ ಗಿರೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು