75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿನಾಯಿತಿ.
1 min readನವದೆಹಲಿ, ಫೆಬ್ರವರಿ 1: ಆದಾಯ ತೆರಿಗೆ ಪಾವತಿಸುವ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ನೆಮ್ಮದಿಯ ಸುದ್ದಿ ನೀಡಿದೆ. ಇನ್ನು ಮುಂದೆ 75 ವರ್ಷ ದಾಟಿದ ಹಿರಿಯ ನಾಗರಿಕರು ಹಾಗೂ ಕೇವಲ ಪಿಂಚಣಿ ಮತ್ತು ಬಡ್ಡಿ ಮೂಲಕ ಆದಾಯ ಪಡೆದುಕೊಳ್ಳುವ ವ್ಯಕ್ತಿಗಳು ಇನ್ನು ಮುಂದೆ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಸೋಮವಾರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ಹಿರಿಯ ನಾಗರಿಕರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಅವರ ಬದಲು ಇನ್ನು ಮುಂದೆ ಸಂಬಂಧಿತ ಬ್ಯಾಂಕ್‌ಗಳು ಐಟಿಆರ್ ಸಲ್ಲಿಕೆ ಮಾಡಲಿವೆ. ಹಾಗೆನೇ ಅನಿವಾಸಿ ಭಾರತೀಯರಿಗೆ ಬಜೆಟ್‌ನಲ್ಲಿ ಮತ್ತಷ್ಟು ಉತ್ತೇಜನ ನೀಡಲಾಗಿದೆ. ಅನಿವಾಸಿ ಭಾರತೀಯರ ವಿದೇಶಿ ನಿವೃತ್ತಿ ಫಂಡ್‌ನಲ್ಲಿನ ದುಪ್ಪಟ್ಟು ತೆರಿಗೆಯನ್ನು ತೆಗೆದುಹಾಕಲು ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.