ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ.ಎಲ್ಲಿ ಯಾವ ಮೀಸಲಾತಿ ನೋಡಿ.
1 min readಚಿತ್ರದುರ್ಗ, ಫೆಬ್ರುವರಿ01:
ಚಿತ್ರದುರ್ಗ ಶಿಶು ಅಭಿವೃಧ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರುವರಿ 26 ಕೊನೆಯ ದಿನವಾಗಿದೆ.
1 ಅಂಗನವಾಡಿ ಕಾರ್ಯಕರ್ತೆ ಹಾಗೂ 14 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಜನವರಿ 27 ರಿಂದ ಪ್ರಾರಂಭವಾಗಿದ್ದು, ಇಲಾಖೆಯ ವೆಬ್‍ಸೈಟ್ www.anganwadirecruit.kar.nic.in ಮೂಲಕ ಅರ್ಜಿ ಸಲಿಸಬಹುದು.
ಡಿ.ಎಸ್. ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಂಡಿನಕುರುಬರಹಟ್ಟಿ-ಬಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇದ್ದು, ಎಸ್.ಸಿ ಮಹಿಳೆಯಿಂದ ಅರ್ಜಿ ಆಹ್ವಾನಿಸಿದೆ.
ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿಯಿರುವ ಗ್ರಾಮ, ಅಂಗನವಾಡಿ ಕೇಂದ್ರ ಹಾಗೂ ಮೀಸಲಾತಿ ವಿವರ ಇಂತಿದೆ. ವಾರ್ಡ್ ನಂ-1ರ ಜೆ.ಎಂ. ರಸ್ತೆ-ಬಿ-ಇತರೆ, ವಾರ್ಡ್ ನಂ -2ನಲ್ಲಿ ಕಾಮನಬಾವಿ-ಎ ಅಂಗನವಾಡಿ ಕೇಂದ್ರ-ಇತರೆ, ವಾರ್ಡ್ ನಂ-3ರಲ್ಲಿ ಫಿಲ್ಟರ್ ಹೌಸ್-ಇತರೆ, ವಾರ್ಡ್ ನಂ-13 ನೆಹರು ನಗರ-ಬಿ-ಇತರೆ, ವಾರ್ಡ್ ನಂ-17 ಕವಾಡಿಗರಹಟ್ಟಿ-ಸಿ-ಇತರೆ ಹಾಗೂ ವಾರ್ಡ್ ನಂ-19ರ ಮಾರುತಿ ನಗರದ-ಎ ಕೇಂದ್ರ-ಎಸ್‍ಸಿ, ವಾರ್ಡ್ ನಂ-23 ಸಂತೇ ಮೈದಾನ-ಇತರೆ ವಾರ್ಡ್ ನಂ-28ರ ವಾಸವಿ ಲ್ಯಾಬ್ ಅಂಗನವಾಡಿ ಕೇಂದ್ರ-ಇತರೆ, ವಾರ್ಡ್ ನಂ 31ರ ಸಿ.ಕೆ.ಪುರ ಶಾಲೆ ಹಿಂಭಾಗ ದ ಅಂಗನವಾಡಿ ಕೇಂದ್ರ-ಎಸ್.ಟಿ, ವಾರ್ಡ್ ನಂ-33ರ ಡಿ.ಐ.ಸಿ. ಹಿಂಭಾಗದ ಕೇಂದ್ರ-ಇತರೆ, ಇಂಗಳದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆನ್ನೆಡಲು ಅಂಗನವಾಡಿ ಕೇಂದ್ರ- ಎಸ್.ಟಿ, ಸೊಂಡೆಕೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪನಾಯಕನಹಳ್ಳಿ-ಇತರೆ, ಅನ್ನೆಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾದೇವನಹಟ್ಟೆ-ಇತರೆ ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪಿಯ ಹಿದಾಯತ್‍ಪುರ-ಇತರೆ ಸೇರಿದಂತೆ ಒಟ್ಟು 14 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿಯಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ , ಜಿಲ್ಲಾ ಬಾಲಭವನ ಆವರಣ, ಜಿಲ್ಲಾ ಕ್ರೀಡಾಂಗಣ ಹತ್ತಿರ, ಚಿತ್ರದುರ್ಗ-577501 ಇವರನ್ನು ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.