ಕೇಂದ್ರ ಬಜೆಟ್ ನ್ನು “ದಿವಾಳಿ ಬಜೆಟ್” ಎಂದ ಸಿದ್ದರಾಮಯ್ಯ
1 min readಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ ಬರ್ಬಾತ್, ಆತ್ಮ ನಿರ್ಭರ , ಆತ್ಮ ಬರ್ಬರ ಬಜೆಟ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ. ಕೇಂದ್ರದ ಬಜೆಟ್ ದಿವಾಳಿ ಬಜೆಟ್ ಆಗಿದೆ. ಸಾಮಾನ್ಯ ಜನರು ಈ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ದೇಶದಲ್ಲಿ ಕೋವಿಡ್ ನಿಂದ ಪರಿಸ್ಥಿತಿ ಅದೋಗತಿಗೆ ಹೋಗಿತ್ತು ಅದನ್ನು ಸರಿದಾರಿಗೆ ತರುತ್ತಾರೆ ಎಂಬ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ದೇಶದಲ್ಲಿ ಸಣ್ಣ ಉದ್ಯಮಗಳ ನಿಂತುಹೋಗಿದ್ದು ಅವುಗಳನ್ನು ಮೇಲೆ ಎತ್ತುವ ಕೆಲಸ ಆಗಿಲ್ಲ. ಮನಮೋಹನ್ ಸಿಂಗ್ ಅವರು 78 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಬಿಟ್ಟರೆ ಮೋದಿ 1 ರೂಪಾಯಿ ಮನ್ನಾ ಮಾಡಿಲ್ಲ. ಆರ್ಥಿಕ ಚೇತರಿಕೆಗೆ ಯಾವುದೇ ಕ್ರಮ ಇಲ್ಲ. ಕೃಷಿ ಸೆಸ್ ಹಾಕಿ ರೈತರಿಗೆ ಏನು ವಿಶೇಷ ಯೋಜನೆ ತಂದಿಲ್ಲ. ರೈತರ ಸುಧಾರಣೆ ಮಾಡಲು ಕೇಂದ್ರ ಸರ್ಕಾರ ಸಂಪೂರ್ಣ ಮರೆತಿದೆ ಎಂದು ಕೇಂದ್ರದ ವಿರುದ್ಧ ಕುಟುಕಿದರು..