May 13, 2024

Chitradurga hoysala

Kannada news portal

ಕನ್ನಡ ಪುಸ್ತಕ ಸಗಟು ಖರೀದಿಸಲು ಅರ್ಜಿ ಆಹ್ವಾನ

1 min read

ಚಿತ್ರದುರ್ಗ. ಫೆಬ್ರುವರಿ02:
ಕನ್ನಡ ಪುಸ್ತಕ ಪ್ರಾಧಿಕಾರವು 2017ನೇ ಸಾಲಿನಲ್ಲಿ ಪ್ರಥಮಾವೃತ್ತಿಯಾಗಿ ಮುದ್ರಣಗೊಂಡ ಕನ್ನಡ ಪುಸ್ತಕಗಳನ್ನು ಪ್ರಾಧಿಕಾರದ ಸಗಟು ಖರೀದಿ ಯೋಜನೆಯಡಿ ಖರೀದಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ದಿನಾಂಕ:01.02.2021 ರಿಂದ 27.02.2021ರವರೆಗೆ ಪ್ರಾಧಿಕಾರದ ವೆಬ್ಸೈಟ್ www.kannadapustakapradhikara.com ಮೂಲಕ ಹಾಗೂ ಬೆಂಗಳೂರಿನಲ್ಲಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಕಚೇರಿ ಮತ್ತು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಚೇರಿ ವೇಳೆಯಲ್ಲಿ ಉಚಿತವಾಗಿ, ಖುದ್ದಾಗಿ ಪಡೆದುಕೊಳ್ಳಬಹುದಾಗಿದೆ. ಎರಡು ಪುಸ್ತಕಗಳ ಪ್ರತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560 002 – ಅವರಿಗೆ ದಿನಾಂಕ:27.02.2021ರಂದು ಸಂಜೆ 5.00ಗಂಟೆಯೊಳಗೆ ಸಲ್ಲಿಸಲು ಕೋರಲಾಗಿದೆ.
  ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು –  ವೆಬ್ಸೈಟ್ : www.kannadapustakapradhikara.com,  ದೂರವಾಣಿ ಸಂಖ್ಯೆ: 080-22484516 / 22017704 – ಇಲ್ಲಿ ಸಂಪರ್ಕಿಸಬಹುದಾಗಿದೆ.

About The Author

Leave a Reply

Your email address will not be published. Required fields are marked *